ಕರ್ನಾಟಕ

karnataka

ರಾಜ್ಯದಲ್ಲಿ ಏರುಗತಿಯಲ್ಲಿ ಡೆಂಘೀ ಪ್ರಕರಣಗಳು: ಪ್ಲೇಟ್ಲೆಟ್ಸ್​​​​ಗೆ ಹೆಚ್ಚಾದ ಡಿಮ್ಯಾಂಡ್ - increased demand for platelets

By ETV Bharat Karnataka Team

Published : Jul 1, 2024, 10:07 PM IST

ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ, ರಕ್ತ ನಿಧಿಗಳಲ್ಲಿ ಬಿಳಿರಕ್ತಕಣಗಳ (ಪ್ಲೇಟ್ಲೆಟ್ಸ್) ಬೇಡಿಕೆ ಹೆಚ್ಚಾಗಿದೆ. ರಕ್ತ ನಿಧಿಗಳಲ್ಲಿ ಬಿಳಿರಕ್ತ ಕಣಗಳನ್ನು ಶೇಖರಣೆ ಮಾಡುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

Dengue cases on the rise  increased demand for platelets  Bengaluru
ಸಾಂದರ್ಭಿಕ ಚಿತ್ರ (ETV Bharat)

ಬೆಂಗಳೂರು:ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಏರುಗತಿ ಕಾಣುತ್ತಿರುವುದರಿಂದ ರಕ್ತ ನಿಧಿಗಳಲ್ಲಿ ಬಿಳಿರಕ್ತಕಣಗಳ (ಪ್ಲೇಟ್ಲೆಟ್ಸ್) ಬೇಡಿಕೆ ಹೆಚ್ಚಾಗಿದೆ. ರಕ್ತ ನಿಧಿಗಳಲ್ಲಿ ಬಿಳಿರಕ್ತ ಕಣಗಳನ್ನು ಶೇಖರಣೆ ಮಾಡಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಬೆಂಗಳೂರು ನಗರ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿ ಇದುವರೆಗೆ 5,374 ಡೆಂಘೀ ಪಾಸಿಟಿವ್ ಹಾಗೂ 5 ಮರಣ ಪ್ರಕರಣಗಳು ವರದಿಯಾಗಿವೆ. ಪಾಸಿಟಿವ್ ಪ್ರಕರಣ ಪತ್ತೆ ನಿಧನವಾಗುತ್ತಿರುವುದರಿಂದ ರೋಗ ಉಲ್ಭಣಗೊಂಡು, ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವೂ ಹೆಚ್ಚಾಗಿದೆ. ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವ ಕಡೆಯಲ್ಲಿ ಬಿಳಿರಕ್ತಕಣಗಳ ಬೇಡಿಕೆ ಹೆಚ್ಚಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಕ್ತನಿಧಿಗಳಲ್ಲಿ ತುರ್ತು ಅಗತ್ಯವಿರುವ ಬಿಳಿ ರಕ್ತಕಣಗಳನ್ನು ಶೇಖರಣೆ ಮಾಡಲು ಸೂಚಿಸಲಾಗಿದೆ.

ಸಾಮಾನ್ಯವಾಗಿ ಬಿಳಿರಕ್ತಕಣಗಳ ಸಂಖ್ಯೆ 10,000 ಕ್ಕಿಂತ ಕಡಿಮೆಯಾದವರಿಗೆ ಮಾತ್ರ ನೀಡಲಾಗುತ್ತದೆ. ಒಂದುವೇಳೆ ನಿಗದಿತ ಸಂಖ್ಯೆಗಿಂತ ಬಿಳಿರಕ್ತಕಣ ಕಡಿಮೆಯಾದರೆ ದೇಹದ ವಿವಿಧ ಅಂಗಗಳ ಒಳಪದರಗಳಿಂದ ರಕ್ತಸ್ರಾವ ಪ್ರಾರಂಭವಾಗುತ್ತದೆ. ಬಾಯಿಯ ಒಳಪದರ, ಒಸಡುಗಳು ಮತ್ತು ಮೂಗಿನ ಒಳಪದರದಿಂದ ರಕ್ತಸ್ರಾವ ಸಂಭವಿಸಬಹುದಾಗಿದೆ.

ರಾಷ್ಟ್ರೋತ್ಥಾನ ರಕ್ತನಿಧಿಯಲ್ಲಿ ಕಳೆದ ಎರಡು - ಮೂರು ತಿಂಗಳ ಹಿಂದೆ ದಿನವೊಂದಕ್ಕೆ 7 ರಿಂದ 10 ಯೂನಿಟ್ ರ‍್ಯಾಂಡಮ್ ಡೋನರ್ ಬಿಳಿರಕ್ತಕಣ ಬೇಡಿಕೆ ಇತ್ತು. ಆದರೆ, ಪ್ರಸ್ತುತ ದಿನವೊಂದಕ್ಕೆ ರ‍್ಯಾಂಡಮ್ ಡೋನರ್‌ನಿಂದ 60 ರಿಂದ 100 ಯೂನಿಟ್ ಹಾಗೂ ಸಿಂಗಲ್ ಡೋನರ್‌ನಿಂದ 10 ಯೂನಿಟ್ ಬಿಳಿರಕ್ತಕಣದ ಬೇಡಿಕೆ ಇದೆ. ಇಲ್ಲಿ ಸಂಗ್ರಹಿಸಿದ ಪ್ಲೇಟ್ಲೆಟ್ಸ್ ನಗರದ ವಿಕ್ಟೋರಿಯಾ, ವಾಣಿವಿಲಾಸ್ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಪ್ರಸ್ತುತ ಬಿಳಿರಕ್ತಕಣ ಬೇಡಿಕೆ ಕಳೆದ 15 ದಿನಗಳಿಂದ ಏರಿಕೆಯಾಗಿದೆ. ನಿತ್ಯ 80 ರಿಂದ 100 ಯೂನಿಟ್ ಬಿಳಿರಕ್ತಕಣಗಳು 24 ಗಂಟೆಯೊಳಗೆ ಖಾಲಿಯಾಗುತ್ತಿದೆ ಎಂದು ರಾಷ್ಟ್ರೋತ್ಥಾನ ರಕ್ತನಿಧಿಯ ಅಧಿಕಾರಿ ಜೆ. ಅನುರಾಧ ಹೇಳಿದ್ದಾರೆ.

ನಿರಂತರವಾಗಿ ರಕ್ತದಾನ ಶಿಬಿರಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನದಲ್ಲಿ ಬಿಳಿ ರಕ್ತಕಣಗಳ ಕೊರತೆ ಎದುರಾಗುವ ಸಾಧ್ಯತೆಗಳು ಕಡಿಮೆಯಾಗಲಿವೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಜುಲೈನಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆ ಸಾಧ್ಯತೆ: ಐಎಂಡಿ ಮುನ್ಸೂಚನೆ - Rainfall in July

ABOUT THE AUTHOR

...view details