ಶಿವಮೊಗ್ಗ: ಭಾನುವಾರದಂದು ನಡೆಯಬೇಕಾಗಿದ್ದ ದೆಹಲಿಯಲ್ಲಿ ಚುನಾವಣಾ ಸಮಿತಿ ಸಭೆ ಮುಂದೂಡಿಕೆ ಆಗಿದೆ. ಆದರಿಂದ ನಾನು ದೆಹಲಿಗೆ ಹೋಗುತ್ತಿಲ್ಲ. ಇದರಿಂದ ನಾಳೆ ಶಿವಮೊಗ್ಗದಲ್ಲೇ ಚುನಾವಣೆ ತಯಾರಿ ನಡೆಸುತ್ತೇನೆ ಎಂದು ಬಿಜೆಪಿ ಕೇಂದ್ರೀಯ ಸಂಸದಿಯ ಮಂಡಳಿಯ ಸದಸ್ಯ ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗದಲ್ಲಿ ತಿಳಿಸಿದ್ದಾರೆ.
ಲೋಕಸಭ ಚುನಾವಣೆ ಬಿಜೆಪಿಗೆ ವಾತಾವರಣ ತುಂಬಾ ಚೆನ್ನಾಗಿದೆ. 28 ಲೋಕಸಭ ಕ್ಷೇತ್ರದಲ್ಲಿ 25 ರಲ್ಲಿ ಗೆಲ್ಲಲು ಶ್ರಮ ಹಾಕುತ್ತೇವೆ. ಅದರಲ್ಲಿ ಯಶಸ್ವಿ ಆಗುವ ವಿಶ್ವಾಸವಿದೆ. ರಾಜಕೀಯ ಪಕ್ಷದಲ್ಲಿ ಸ್ವಾಭಾವಿಕ ಟಿಕೆಟ್ ಹಂಚಿಕೆಗೂ ಮುನ್ನ ಗೊಂದಲ ಇರುತ್ತದೆ. ಒಂದು ಸಲ ಪಟ್ಟಿ ಬಿಡುಗಡೆಯಾದ ಮೇಲೆ ಎಲ್ಲರೂ ಹೊಂದಿಕೊಂಡು ಹೋಗುತ್ತೇವೆ. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನ ಮಂತ್ರಿ ಆಗಬೇಕು ಎಂಬುದು ನಮ್ಮ ಬಯಕೆ.