ಬೆಂಗಳೂರು:ಅಪಘಾತದಲ್ಲಿಆಯತಪ್ಪಿ ರಾಜಕಾಲುವೆಗೆ ಬಿದ್ದು ನಾಪತ್ತೆಯಾಗಿದ್ದ ದ್ವಿಚಕ್ರ ವಾಹನ ಸವಾರನ ಮೃತದೇಹ ಸಿಕ್ಕಿದೆ. ಅಗ್ನಿಶಾಮಕ ಸಿಬ್ಬಂದಿ 24 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಮೈಸೂರು ರಸ್ತೆಯ ಸೇತುವೆ ಕೆಳಗಿನ ಕಾಲುವೆಯಿಂದ ಶವ ಹೊರತೆಗೆದಿದ್ದಾರೆ. ಹೇಮಂತ್ ಕುಮಾರ್ (27) ಮೃತಪಟ್ಟಿದ್ದಾರೆ.
ಬೆಂಗಳೂರು: ರಾಜಕಾಲುವೆಗೆ ಬಿದ್ದ ದ್ವಿಚಕ್ರ ಸವಾರನ ಶವ ಪತ್ತೆ - Dead Body Of Biker Found - DEAD BODY OF BIKER FOUND
ರಸ್ತೆ ತಡೆಗೋಡೆಗೆ ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರ ವಾಹನ ರಾಜಕಾಲುವೆಯಲ್ಲಿ ಬಿದ್ದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸವಾರನ ಮೃತದೇಹ ಹೊರತೆಗೆದಿದ್ದಾರೆ.
Published : Jul 7, 2024, 2:28 PM IST
ಬ್ಯಾಟರಾಯನಪುರದ ನಿವಾಸಿ ಹೇಮಂತ್ ಕುಮಾರ್ ಶುಕ್ರವಾರ ರಾತ್ರಿ ಸುಮಾರು 10.30ರ ವೇಳೆಗೆ ಕೆಲಸ ಮುಗಿಸಿ ವಾಪಸಾಗುತ್ತಿದ್ದಾಗ ಜ್ಞಾನ ಭಾರತಿ ಮೆಟ್ರೋ ನಿಲ್ದಾಣದ ಬಳಿ ಇವರಿದ್ದ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿತ್ತು. ರಸ್ತೆ ಪಕ್ಕದ ತಡೆಗೋಡೆಗೆ ವಾಹನ ಡಿಕ್ಕಿಯಾಗಿತ್ತು. ಇದರ ರಭಸಕ್ಕೆ ಹೇಮಂತ್ ಆಯತಪ್ಪಿ ಪಕ್ಕದ ರಾಜಕಾಲುವೆಯೊಳಗೆ ಬಿದ್ದಿದ್ದರು. ರಾತ್ರಿ ಸುರಿದ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಿದ್ದರಿಂದ ಯುವಕ ಪತ್ತೆಯಾಗಿರಲಿಲ್ಲ.
ಇದನ್ನೂ ಓದಿ:ವಿಜಯಪುರ: ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ, ಚಹಾ ಕುಡಿಯಲು ಹೋಗಿ ಕಾರ್ಮಿಕರು ಬಚಾವ್ - Boiler Blast