ಕರ್ನಾಟಕ

karnataka

ETV Bharat / state

ರಾಜ್ಯದ ಎಂಜಿನಿಯರ್​ಗಳನ್ನು ಮನೆಹಾಳರು ಎಂದ ಆರ್.ಅಶೋಕ್ ಕ್ಷಮೆ ಕೇಳಲಿ: ಡಿಸಿಎಂ ಡಿಕೆಶಿ - R Ashok Statement

ವಿಧಾನಸಭೆಯಲ್ಲಿ ಆರ್ ಅಶೋಕ್ ಅವರು ರಾಜ್ಯದ ಎಂಜಿನಿಯರ್​ಗಳ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕ್ಷಮೆ ಕೇಳಬೇಕೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಡಿಸಿಎಂ ಡಿಕೆಶಿ
ಡಿಸಿಎಂ ಡಿಕೆಶಿ (ETV Bharat)

By ETV Bharat Karnataka Team

Published : Jul 26, 2024, 7:04 AM IST

ಬೆಂಗಳೂರು: ರಾಜ್ಯದ ಎಂಜಿನಿಯರ್​​ಗಳನ್ನು ಮನೆಹಾಳರು ಎಂದು ವಿರೋಧ ಪಕ್ಷದ ನಾಯಕ, ಬಿಜೆಪಿ ಮುಖಂಡ ಆರ್ ಅಶೋಕ್ ಅವರು ವಿಧಾನಸಭೆಯಲ್ಲಿ ಜರಿದಿರುವುದನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಖಂಡಿಸಿದ್ದಾರೆ. ಅಶೋಕ್ ಅವರು ಈ ಹೇಳಿಕೆ ಹಿಂಪಡೆದುಕೊಂಡು, ಎಂಜಿನಿಯರ್​ಗಳ ಕ್ಷಮೆ ಕೇಳಬೇಕೆಂದು ಡಿಸಿಎಂ ಮನವಿ ಮಾಡಿದ್ದಾರೆ.

ಸರ್ ಎಂ ವಿಶ್ವೇಶ್ವರಯ್ಯ ಅವರಿಂದ ಹಿಡಿದು ಈಗಿನವರವರೆಗೂ ರಾಜ್ಯದ ಪ್ರಗತಿಯಲ್ಲಿ ಇಂಜಿನಿಯರ್​ಗಳ ಕೊಡುಗೆ ಗಣನೀಯವಾದದ್ದು. ಅಣೆಕಟ್ಟೆಗಳು, ವಿದ್ಯುತ್ ಯೋಜನೆಗಳು, ಬೃಹತ್ ಕಟ್ಟಡಗಳು, ಐಟಿಬಿಟಿ ಸೇರಿದಂತೆ ನಾಡಿನ ಅಭಿವೃದ್ಧಿಗೆ ಅನೇಕ ಕ್ಷೇತ್ರಗಳಲ್ಲಿ ಇಂಜಿನಿಯರ್​ಗಳು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಇಲ್ಲದೆ ರಾಜ್ಯ ಮತ್ತು ದೇಶದ ಪ್ರಗತಿಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅಂತಹ ಪ್ರಗತಿಯ ರೂವಾರಿಗಳನ್ನು ಮನೆಹಾಳರು ಎಂದು ಅಶೋಕ್ ಅವರು ಕರೆದಿರುವುದು ಸರಿಯಲ್ಲ ಎಂದು ಶಿವಕುಮಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಂಜಿನಿಯರ್​​ಗಳ ಕುರಿತು ಹೇಳಿಕೆಗೆ ಅಶೋಕ್ ಅವರು ತಕ್ಷಣವೇ ಇಂಜಿನಿಯರ್​ಗಳ ಕ್ಷಮಾಪಣೆ ಕೇಳಬೇಕು. ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಶಿವಕುಮಾರ್ ಅವರು ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

ದೂರವಾಣಿ ಕರೆ:ಡಿಸಿಎಂ ಡಿ ಕೆ ಶಿವಕುಮಾರ್ ಅವರು ಅಶೋಕ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಇಂಜಿನಿಯರ್​ಗಳನ್ನು ಅವಹೇಳನ ಮಾಡಿರುವ ಹೇಳಿಕೆಯನ್ನು ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದರು. ಇದಕ್ಕೂ ಮೊದಲು ಅಧ್ಯಕ್ಷ ದೇವರಾಜ್ ನೇತೃತ್ವದಲ್ಲಿ ಕರ್ನಾಟಕ ಇಂಜಿನಿಯರ್​ಗಳ ಸಂಘದ ಪ್ರತಿನಿಧಿಗಳು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿ ಗುರುವಾರ ಭೇಟಿ ಮಾಡಿ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳಲು ಅಶೋಕ್ ಅವರ ಮೇಲೆ ಒತ್ತಡ ತರಬೇಕೆಂದು ಕೋರಿದ್ದರು.

ಇದನ್ನೂ ಓದಿ:ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದ ಸಮಗ್ರ ಚರ್ಚೆಗೆ ಸದನ ಸಮಿತಿ ರಚನೆ: ಡಿಸಿಎಂ ಡಿ.ಕೆ.ಶಿವಕುಮಾರ್ - DCM D K Shivakumar

ABOUT THE AUTHOR

...view details