ಬೆಂಗಳೂರು : ಕರಿಯಾ ಎಂದಿದ್ದಕ್ಕೆ ವರ್ಣಭೇದ ಅಂತ ದೂರು ಕೊಡಲು ಹೇಳಿ, ಚನ್ನಪಟ್ಟಣ ಚುನಾವಣೆ ಮೇಲೆ ಪರಿಣಾಮ ಬೀರಲ್ಲ ಎಂದು ಹೆಚ್ಡಿಕೆ ಬಣ್ಣದ ಬಗ್ಗೆ ಜಮೀರ್ ಹೇಳಿಕೆ ಕುರಿತು ಡಿಸಿಎಂ ಡಿ. ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ, ಜಮೀರ್ ಗಳಸ್ಯ - ಕಂಠಸ್ಯ. ಕುಮಾರಸ್ವಾಮಿ ಅವರದ್ದು ಯಾವ ಚಡ್ಡಿ ಅಂತ ಜಮೀರ್ ಹೇಳ್ತಾರೆ. ಅವನದ್ದು ಏನಿದೆ ಅಂತ ನಾನು ನೋಡಿದ್ದೆ ಅಂತ ಅವರು ಹೇಳ್ತಾರೆ. ಅದು ಅವರವರ ವಿಚಾರ. ಕುಮಾರಸ್ವಾಮಿ ಏನಾದರೂ ಮಾತಾಡಿದ್ರಾ ಇದರ ಬಗ್ಗೆ?. ಹಾಗಾದ್ರೆ ಅವರನ್ನೇ ಮಾತನಾಡೋಕೆ ಹೇಳಿ. ಕರಿಯ ಅಂತ ಕರಿದಿರೋದಕ್ಕೆ ಮಾತನಾಡೋಕೆ ಹೇಳಿ. ವರ್ಣಭೇದ ಅಂತ ದೂರು ಕೊಡಲು ಹೇಳಿ ಎಂದು ಒತ್ತಾಯಿಸಿದರು.
ನಾನು ಡಿಫೈನ್ ಮಾಡಿಕೊಳ್ತಿಲ್ಲ. ನಾವು ಮಧ್ಯಸ್ಥಿಕೆಗೆ ಹೋಗೋದು ಸರಿಯಲ್ಲ. ಬಿಜೆಪಿಯವರು ಅದನ್ನೇ ರಾಜಕಾರಣ ಮಾಡ್ತಾರೆ. ಬಿಜೆಪಿ ಮಾಡಿರುವ ಟ್ವೀಟ್ ಲೆಕ್ಕಕ್ಕೆ ಬರಲ್ಲ. ಅದು ಅವರ ಸ್ವಂತ ವಿಚಾರ. ನಾನು ಕೆಲವೊಮ್ಮೆ ಹೋಗೋ ಬಾರೋ ಅಂತೀನಿ. ಕೆಲವರನ್ನು ಸಾಬ್ರೇ, ಹೇ ಗೌಡ ಬಾರೋ ಇಲ್ಲಿ ಅಂತೀನಿ. ಏನೋ ಕೆಲವರು ಪ್ರೀತಿಯಿಂದ ಕರೆಯುತ್ತಾರೆ. ಹಾಗಂತ ಎಲ್ಲರ ಮೇಲೆ ಪ್ರೀತಿ ತೋರಿಸೋಕೆ ಆಗುತ್ತಾ?. ಕುಮಾರಸ್ವಾಮಿ ಮೇಲೆ ಜಮೀರ್ಗೆ ಬಹಳ ಪ್ರೀತಿ. ಅವರು ಇವರನ್ನ ಕುಳ್ಳ ಅಂತ ಕರೆಯುತ್ತಾರೆ. ಇದು ರಾಜಕಾರಣನಾ?. ಇದು ಚನ್ನಪಟ್ಟಣ ಎಲೆಕ್ಷನ್ ಮೇಲೆ ಪರಿಣಾಮ ಬೀರಲ್ಲ. ರಾಜಕಾರಣ ಮಾಡಬೇಕು, ಸೋಲ್ತಾರೆ ಅಂತ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಬೇಡ, ಬೇಕಾದ್ರೆ ಅವರೇ ಬಣ್ಣ ಹೊಡೆದುಕೊಳ್ಳಲಿ ಎಂದರು.
ಬಂಡೀಪುರ ರಾತ್ರಿ ಸಂಚಾರದ ಬಗ್ಗೆ ಚರ್ಚಿಸಿ ನಿರ್ಧಾರ :ಬಂಡೀಪುರ ರಾತ್ರಿ ಸಂಚಾರಕ್ಕಾಗಿ ಎರಡು ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಶೀಲಿಸುತ್ತೇವೆ ಎಂದು ತಿಳಿಸಿದರು.