ಕರ್ನಾಟಕ

karnataka

ETV Bharat / state

ಡಿಸಿಇಟಿ-2024: ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ - DCET 2024 - DCET 2024

ಡಿಸಿಇಟಿ-2024ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಹೊರ ಬಿದ್ದಿದೆ. ನೇರ ಪ್ರವೇಶ ಪಡೆಯಲು ಇಚ್ಛೆ ಪಡುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ದಿನಾಂಕ ವಿಸ್ತರಿಸಿ ಕೊನೆಯ ಅವಕಾಶ ಕಲ್ಪಿಸಿಕೊಟ್ಟಿದೆ.

EXTENSION OF DATE  SUBMISSION OF APPLICATION  APPLICATION FOR STUDENT  BENGALURU
ಡಿಸಿಇಟಿ-2024: ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ (ಕೃಪೆ: ETV Bharat (ಸಾಂದರ್ಭಿಕ ಚಿತ್ರ))

By ETV Bharat Karnataka Team

Published : May 17, 2024, 7:56 PM IST

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಎಂಜಿನಿಯರಿಂಗ್ ಎರಡನೇ ವರ್ಷಕ್ಕೆ/ ಮೂರನೇ ಸೆಮಿಸ್ಟರ್​ಗೆ ನೇರ ಪ್ರವೇಶ ಪಡೆಯಲಿಚ್ಛಿಸುವ ಅಭ್ಯರ್ಥಿಗಳಿಗೆ ಡಿಸಿಇಟಿ-2024ಕ್ಕೆ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಮೇ 20ರಿಂದ 23ರವರೆಗೆ ಕೊನೆಯ ಅವಕಾಶ ಕಲ್ಪಿಸಿದೆ.

ಅಭ್ಯರ್ಥಿಗಳ ಮನವಿ ಪರಿಗಣಿಸಿ ಈ ಕಾಲಾವಕಾಶ ನೀಡಿದ್ದು, ಇದುವರೆಗೆ ನೋಂದಣಿ ಮಾಡಿಕೊಳ್ಳದಿರುವ ಅರ್ಹ ಡಿಪ್ಲೊಮಾ ಅಭ್ಯರ್ಥಿಗಳು ಮೇ 20ರ ಬೆಳಗ್ಗೆ 11ರಿಂದ ಮೇ 23ರ ರಾತ್ರಿ 11.59ರೊಳಗೆ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಿ ಮೇ 24 ರೊಳಗೆ ಶುಲ್ಕ ಪಾವತಿಸಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶುಲ್ಕ ಪಾವತಿಗೆ ಮೇ 22 ಕಡೆಯ ದಿನ: ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ (ವಿವಿಓ) ಹುದ್ದೆಗಳಿಗೆ ನೇರ ನೇಮಕಾತಿಗೆ ಅರ್ಜಿ ಸಲ್ಲಿಸಲು ಮೇ 18 ಕಡೆಯ ದಿನವಾಗಿದ್ದು, ಶುಲ್ಕ ಪಾವತಿಗೆ ಮೇ 22 ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ನೋಡಲು ಸೂಚಿಸಿದ್ದಾರೆ.

ಓದಿ:ಸಿಬಿಎಸ್‌ಸಿ, ಸಿಐಎಸ್‌ಸಿಇ, ಐಜಿಸಿಎಸ್‌ಇ ಪಾಸ್​ ಆದವರು ಅಂಕ ದಾಖಲಿಸಲು ಮೇ 20ರವರೆಗೆ ಅವಕಾಶ - KEA Notification

ABOUT THE AUTHOR

...view details