ಕರ್ನಾಟಕ

karnataka

ETV Bharat / state

ರಾಜ್ಯ ಬಜೆಟ್​ 2024: ದಾವಣಗೆರೆ ಜನರ ನಿರೀಕ್ಷೆಗಳೇನು? - ಬಜೆಟ್​ ನಿರೀಕ್ಷೆಗಳು

ಈ ಬಾರಿಯ ರಾಜ್ಯ ಬಜೆಟ್​ ಮೇಲೆ ದಾವಣಗೆರೆಯ ಜನರು ಬೆಟ್ಟದಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ.

ರಾಜ್ಯ ಬಜೆಟ್​ 2024: ದಾವಣಗೆರೆ ಜನರ ನಿರೀಕ್ಷೆಗಳೇನು?
ರಾಜ್ಯ ಬಜೆಟ್​ 2024: ದಾವಣಗೆರೆ ಜನರ ನಿರೀಕ್ಷೆಗಳೇನು?

By ETV Bharat Karnataka Team

Published : Feb 14, 2024, 6:58 PM IST

Updated : Feb 14, 2024, 10:19 PM IST

ರಾಜ್ಯ ಬಜೆಟ್​ 2024: ದಾವಣಗೆರೆ ಜನರ ನಿರೀಕ್ಷೆಗಳು

ದಾವಣಗೆರೆ: ಈ ಬಾರಿಯ ರಾಜ್ಯ ಬಜೆಟ್​ ಮೇಲೆ ಬೆಣ್ಣೆ ನಗರಿ ಜನರು ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೈಗಾರಿಕೆ, ವಿಮಾನ ನಿಲ್ದಾಣ, ಸರ್ಕಾರಿ ಮೆಡಿಕಲ್ ಹಾಗು ಇಂಜಿನಿಯರಿಂಗ್, ಡಿಪ್ಲೊಮಾ ಕಾಲೇಜು ಮಂಜೂರು, ಸೇರಿದಂತೆ ರೈತರ ಸಾಲಮನ್ನಾ ಬಗ್ಗೆ ಘೋಷಣೆ ಮಾಡಬೇಕೆಂಬ ಬೇಡಿಕೆ ಜಿಲ್ಲೆಯ ಜನರದ್ದಾಗಿದೆ.

ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಹೇಳಿದ್ದಿಷ್ಟು: ರಾಜ್ಯ ಬಜೆಟ್​ ಕುರಿತು ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜಂಬಗಿ ರಾಧೇಶ್ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, ಕರ್ನಾಟಕ ರಾಜ್ಯ ಬಜೆಟ್ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತ ಆಗಬಾರದು. ದಾವಣಗೆರೆಗೆ ವಿಮಾನ ನಿಲ್ದಾಣದ ಬೇಡಿಕೆ ಹಲವು ದಿನಗಳಿಂದ ಇದೆ. ಅದರೆ ಈವರೆಗೆ ಅದು ಈಡೇರಿಲ್ಲ. ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಆದಲ್ಲಿ ಶಿಕ್ಷಣ ಮತ್ತು ಉದ್ಯಮಕ್ಕೆ ಹೆಚ್ಚಿನ ಅನುಕೂಲವಾಗದಲಿದೆ. ಇನ್ನು ವಿಮಾನ ನಿಲ್ದಾಣ ಇಲ್ಲದ ಕಾರಣ ಕೈಗಾರಿಕೆಗಳು, ದೊಡ್ಡ ಹೈಟೆಕ್ ಆಸ್ಪತ್ರೆಗಳು ಜಿಲ್ಲೆಯಿಂದ ಕೈತಪ್ಪಿ ಹೋಗುತ್ತಿವೆ ಎಂದರು.

ಎಪಿಎಂಸಿ ಮಾರುಕಟ್ಟೆಯನ್ನು ಓಪನ್ ಮಾರುಕಟ್ಟೆ ಮಾಡುವ ಅವಶ್ಯಕತೆ ಇಲ್ಲ, ಬದಲಾಗಿ ಹಳೆಯ ಮಾರುಕಟ್ಟೆಯನ್ನು ಎಪಿಎಂಸಿ ಕಾಯ್ದೆ ಮೂಲಕ ಮುಂದುವರೆಸಬೇಕಿದೆ. ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುತ್ತೇವೆ ಎಂದು ಹಲವು ಸರ್ಕಾರಗಳು ಆಶ್ವಾಸನೆ ನೀಡಿದ್ದವು. ಅದರೆ ಈವರೆಗೆ ಜಿಲ್ಲೆಗೆ ಕಾಲೇಜ್ ಮಂಜೂರಾಗಿಲ್ಲ, ಜತೆಗೆ ಇಂಜಿನಿಯರಿಂಗ್ ಹಾಗು ಡಿಪ್ಲೊಮಾ ಕಾಲೇಜುಗಳಿಗೆ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ರೈತರ ಬೇಡಿಕೆಗಳೇನು:ರೈತರ ಭದ್ರತೆಗಾಗಿ ಈ ‌ಬಜೆಟ್​ನಲ್ಲಿ ಗ್ಯಾರಂಟಿಗಳನ್ನು ಜಾರಿ ಮಾಡಿ ಎಂದು ಜಿಲ್ಲೆಯ ಅನ್ನದಾತರು ಮನವಿ ಮಾಡಿದ್ದಾರೆ. ಈ ವೇಳೆ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ರೈತ ಮಂಜುನಾಥ್, ಸರ್ಕಾರದಿಂದ ರೈತ ಭಾಗ್ಯಗಳನ್ನು ಘೋಷಣೆ ಮಾಡಬೇಕು. ರೈತರು ಕಷ್ಟಪಟ್ಟು ಬೆಳೆಯುವ ಮೆಕ್ಕೆಜೋಳ, ರಾಗಿ ಫಸಲಿನ ದರವನ್ನು ಹೆಚ್ಚಿಸಬೇಕು. ಮಳೆ ಇಲ್ಲದೆ ಬೆಳೆಗಳು ಒಣಗಲಾರಂಭಿಸಿವೆ. ಅದ್ದರಿಂದ ಹೆಚ್ಚು ಕೃಷಿ ಹೊಂಡಗಳನ್ನು ತೆರೆಯಲು ಬಜೆಟ್​ನಲ್ಲಿ ಅದ್ಯತೆ ನೀಡಬೇಕು. ಇನ್ನು ಧನಕರುಗಳಿಗೆ ಮೇವು ಬ್ಯಾಂಕ್ ತೆರೆಯಬೇಕು, ಬರಗಾಲದಿಂದ ಧನಕರುಗಳಿಗೆ ನೀರು, ಮೇವು ಇಲ್ಲದೆ ಹೈರಾಣಾಗಿದ್ದು, ಈ ಸಮಸ್ಯೆ ನೀಗಿಸಲು ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.

ಮತ್ತೋರ್ವ ರೈತ ಸಂತೋಷ್ ಮಾತನಾಡಿ, 'ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಈ ಸಮಸ್ಯೆ ನೀಗಿಸಲು ವಿಶೇಷ ಯೋಜನೆಯನ್ನು ಬಜೆಟ್​ನಲ್ಲಿ ಘೋಷಣೆ ಮಾಡಬೇಕು, ಭಾಗ್ಯಗಳನ್ನು ಕೊಡುವ ಬದಲಿಗೆ ರೈತರ ಸಾಲಮನ್ನಾ ಮಾಡಬೇಕು, ಇದಲ್ಲದೆ ಬೆಳೆ ಪರಿಹಾರ ರೈತರ ಖಾತೆಗೆ ಸೇರುತ್ತಿಲ್ಲ, ಬರಪರಿಹಾರ ರೈತರ ಕೈಸೇರುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಇದನ್ನೂ ಓದಿ:ರಾಜ್ಯ ಬಜೆಟ್ 2024: ಧಾರವಾಡ ರೈತಾಪಿ ವರ್ಗ, ಉದ್ಯಮಿ, ನಾಗರಿಕರಿಂದ ಬೆಟ್ಟದಷ್ಟು ನಿರೀಕ್ಷೆ

Last Updated : Feb 14, 2024, 10:19 PM IST

ABOUT THE AUTHOR

...view details