ಕರ್ನಾಟಕ

karnataka

ETV Bharat / state

ವಿಚ್ಛೇದನ ನೀಡದ ಪತ್ನಿ ಕೊಂದು ಕೆರೆಗೆ ಎಸೆದ ಪತಿ: ದೂರು ದಾಖಲು - ಚಿತ್ರದುರ್ಗ

ಪತ್ನಿಯನ್ನು ಆಸ್ಪತ್ರೆಗೆ ತೋರಿಸಲು ಎಂದು ಕರೆದುಕೊಂಡು ಬಂದು ಪತಿ ಹಾಗೂ ಆತನ ಪ್ರೇಯಸಿ ಸೇರಿ ಕೊಂದು,ಗೋಣಿ ಚೀಲದಲ್ಲಿ ಹೆಣ ತಂದು ಕೆರೆಗೆ ಎಸೆದಿರುವ ಘಟನೆ ದಾವಣಗೆರೆ ತಾಲೂಕಿನ ಕೊಡಗನೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮಾಯಕೊಂಡ ಠಾಣೆಯಲ್ಲಿ ದೂರು ದಾಖಲು ಆಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Mayakonda Police Station
ಮಾಯಕೊಂಡ ಪೊಲೀಸ್ ಠಾಣೆ

By ETV Bharat Karnataka Team

Published : Jan 26, 2024, 10:50 PM IST

ದಾವಣಗೆರೆ: ತವರು ಮನೆಯಿಂದ ಪತ್ನಿಯನ್ನು ಆಸ್ಪತ್ರೆಗೆ ತೋರಿಸಲೆಂದು ಕರೆದುಕೊಂಡು ಬಂದು ಪತಿ ಹಾಗೂ ಆತನ ಪ್ರೇಯಸಿ ಸೇರಿ, ಆಕೆಯ ಕತ್ತು ಹಿಸುಕಿ ಕೊಂದಿದ್ದಾರೆ. ಅಷ್ಟೇ ಅಲ್ಲ ಗೋಣಿ ಚೀಲದಲ್ಲಿ ಹೆಣ ತಂದು ಕೆರೆಗೆ ಎಸೆದಿರುವ ಘಟನೆ ದಾವಣಗೆರೆ ತಾಲೂಕಿನ ಕೊಡಗನೂರು ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಚಿತ್ರದುರ್ಗದ ಸಾಸಲುಹಳ್ಳ ಗ್ರಾಮದ ಕಾವ್ಯಾ ಕೊಲೆಗೀಡಾದ ಗೃಹಿಣಿ.

ಜ.6 ರಂದು ಕಾವ್ಯಾಳಿಗೆ ಕಿಡ್ನಿ ಸ್ಟೋನ್ ಇದ್ದು, ಆಸ್ಪತ್ರೆಗೆ ತೋರಿಸುವ ನೆಪದಲ್ಲಿ ಕರೆತಂದ ಪತಿ ಸಚಿನ್, ಸಂಚು ಮಾಡಿ ಹೆಂಡತಿಯನ್ನ ಕೊಲೆ ಮಾಡಿರುವ ಕುರಿತು ಮಾಯಕೊಂಡ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಪತಿ ಸಚಿನ್​​ ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಹೊಳಲ್ಕೆರೆ ತಾಲೂಕಿನ ಕಾಗಳಗೆರೆ ಗ್ರಾಮದ ನಿವಾಸಿ ಸಚಿನ್ ಜೊತೆ ಮೃತ ಕಾವ್ಯಾಳ ಮದುವೆ ಐದು ವರ್ಷದ ಹಿಂದೆ ಆಗಿತ್ತು. ಪತಿ ಪತ್ನಿಗೆ ಮೂರು ವರ್ಷದ ಹೆಣ್ಣು ಮಗು ಕೂಡ ಇದೆ. ಆದರೆ ಸಚಿನ್ ದಾವಣಗೆರೆ ತಾಲೂಕಿನ ಕಡ್ಲೆಬಾಳು ಗ್ರಾಮದ ನಿವಾಸಿ ಮಹಿಳೆಯೊಬ್ಬರ ಜತೆ ಸಂಬಂಧ ಹೊಂದಿದ್ರು. ಆಕೆಯನ್ನು ಎರಡನೇ ಮದುವೆಯಾಗಿದ್ದ ಎಂದು ಹೇಳಲಾಗುತ್ತಿದೆ. ಇವರಿಬ್ಬರ ಪ್ರೇಮ ಸಲ್ಲಾಪಕ್ಕೆ ಅಡ್ಡಿಯಾಗಿದ್ದ ಕಾವ್ಯಾಳನ್ನು ಮುಗಿಸಬೇಕೆಂದು ಪತಿ ಹಾಗೂ ಪ್ರೇಯಸಿ ಸಂಚು ರೂಪಿಸಿದ್ದರು ಎಂದು ಹೇಳಲಾಗುತ್ತಿದೆ.

ಜ.6 ರಂದು ಕಾವ್ಯಾಳಿಗೆ ಕಿಡ್ನಿ ಸ್ಟೋನ್ ಇದ್ದ ಕಾರಣ ಆಕೆಯನ್ನು ಆಸ್ಪತ್ರೆಗೆ ತೋರಿಸುವ ನೆಪ ಮಾಡಿ ಕರೆ ತಂದು ಪತಿ ಸಚಿನ್ ಹಾಗೂ ಆತನ ಪ್ರೇಯಸಿ ಸೇರಿಕೊಂಡು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಯಾರಿಗೂ ಗೊತ್ತಾಗದಂತೆ ಗೋಣಿಚೀಲದಲ್ಲಿ ತುಂಬಿಕೊಂಡು ದಾವಣಗೆರೆ ತಾಲೂಕಿನ ಕೊಡಗನೂರು ಕೆರೆಗೆ ಎಸೆದು ಪರಾರಿಯಾಗಿದ್ದರು.

ಇತ್ತ ಕಾವ್ಯ ಕಾಣದಿದ್ದಕ್ಕೆ ಅನುಮಾನಗೊಂಡ ತಾಯಿ ಕಮಲಮ್ಮ ಎಂಬುವರು ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ನೀಡಿದ್ದರು. 19 ದಿನದ ಬಳಿಕ ಕಾವ್ಯಾಳ ಶವ ಪತ್ತೆಯಾಗಿದ್ದು‌. ಕೊಳತ ಸ್ಥಿತಿಯಲ್ಲಿರುವ ಕಾವ್ಯಾಳ‌ ಮೃತದೇಹವನ್ನು ಮಾಯಕೊಂಡ‌ ಠಾಣೆ ಪೊಲೀಸರು ದಾವಣಗೆರೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಎಸ್ಪಿ ಉಮಾ ಪ್ರಶಾಂತ್ ಏನು ಹೇಳ್ತಾರೆ?:ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ, ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಾಗಿರುತ್ತದೆ. ಮೃತ ಕಾವ್ಯನನ್ನು ಐದು ವರ್ಷದ ಹಿಂದೆ ಸಚಿನ್ ಎಂಬುವನಿಗೆ ವಿವಾಹ ಮಾಡಿಕೊಡಲಾಗಿತ್ತು. ಒಂದು ಮುದ್ದಾದ ಹೆಣ್ಣು ಮಗು ಸಹ ಇದೆ. ಗಂಡ ಹೆಂಡತಿ ನಡುವೆ ಆಗಾಗ್ಗೆ ಜಗಳ ಇತ್ತು, ಕಾವ್ಯಾಳನ್ನು ಮದುವೆಯಾಗಿದ್ದ ಸಚಿನ್ 2 ವರ್ಷದ ಬಳಿಕ ಚೈತ್ರಾ ಎಂಬುವಳನ್ನು ಎರಡನೇಯ ಮದುವೆಯಾಗಿದ್ದರು. ಪತ್ನಿ ಕಾವ್ಯಾಳಿಗೆ ಡೈವರ್ಸ್ ಕೊಡು ಎಂದು ಪತಿ ಸಚಿನ್ ಒತ್ತಾಯಿಸಿದ್ದು, ಆದರೆ ಕಾವ್ಯಾ ಡೈವರ್ಸ್ ಕೊಟ್ಟಿಲ್ಲ, ಇದರಿಂದಾಗಿ ಜ. 06 ರಂದು ಪತ್ನಿ ಕಾವ್ಯಾಳಿಗೆ ಕಿಡ್ನಿ ಸ್ಟೋನ್ ಇರುವ ಕಾರಣ ಪತಿ ಸಚಿನ್ ಬಾ ಆಸ್ಪತ್ರೆಗೆ ತೋರಿಸೋಣ ಎಂದು ಟಾಟಾ ಸುಮೋದಲ್ಲಿ ಕರೆತಂದು ಸಂಚುಹೂಡಿ ಕಾವ್ಯಾಳನ್ನು ಕೊಲೆ ಮಾಡಿ ಚೀಲದಲ್ಲಿ ತುಂಬಿ ಕೆರೆಗೆ ಎಸೆಯಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂಓದಿ:ಬೆಂಗಳೂರು: ಪ್ರಿ-ಸ್ಕೂಲ್​ 3ನೇ ಮಹಡಿಯಿಂದ ಬಿದ್ದು ಗಾಯಗೊಂಡಿದ್ದ ಹೆಣ್ಣು ಮಗು ಸಾವು

ABOUT THE AUTHOR

...view details