ರಾಜ್ಯದಲ್ಲಿ ಕೆಂಪು ಸುಂದರಿಗೆ ಡಿಮ್ಯಾಂಡ್ಪ್ಪೋ ಡಿಮ್ಯಾಂಡು; ಬಂಪರ್ ನಿರೀಕ್ಷೆಯಲ್ಲಿ ರೈತ (ETV Bharat) ದಾವಣಗೆರೆ:ಕೆಂಪು ಸುಂದರಿ ಟೊಮೆಟೊಗೆ ಬೇಡಿಕೆ ಹೆಚ್ಚಿದೆ. ಇಡೀ ತರಕಾರಿಗಳಲ್ಲೇ ಟೊಮೆಟೊಗೆ ರಾಜ ಎನ್ನಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಕೆಂಪು ಸುಂದರಿಯ ಬೆಲೆ ಗಗನಕ್ಕೇರಿದ್ದರಿಂದ ಟೊಮ್ಯಾಟೊಗೆ ಭಾರೀ ಬೇಡಿಕೆ ಬಂದಿದೆ. ಮಾಯಕೊಂಡ ಭಾಗದಲ್ಲಿ ಎಕರೆ ಗಟ್ಟಲೆ ಟೊಮೆಟೊ ಬೆಳೆದಿರುವ ರೈತರು ಲಕ್ಷ ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದಾರೆ. ಬೆಲೆ ಏರಿಕೆಯಿಂದ ಟೊಮೆಟೊ ಬೆಳೆಯನ್ನು ಕಾಯುವುದೇ ರೈತರಿಗೆ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ರಾಜ್ಯದಲ್ಲಿ ಕೆಂಪು ಸುಂದರಿಗೆ ಡಿಮ್ಯಾಂಡ್ಪ್ಪೋ ಡಿಮ್ಯಾಂಡು (ETV Bharat) ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯಲ್ಲಿ ಟೊಮ್ಯಾಟೊವನ್ನು ಹೆಚ್ಚಾಗಿ ಬೆಳೆಯುತ್ತಾರೆ. ಇಲ್ಲಿಯ ಸುತ್ತಮುತ್ತಲಿನ ಗ್ರಾಮದ ಜಮೀನುಗಳಲ್ಲಿ ರೈತರು ಬೆಳೆಯುವ ಟೊಮ್ಯಾಟೊವನ್ನು ರಾಷ್ಟ್ರೀಯ ಮಟ್ಟದಲ್ಲಿ ರಫ್ತು ಮಾಡಿರುವ ಹೆಗ್ಗಳಿಕೆ ಇದೆ. ಅದ್ರೇ ಇದೀಗ ಟೊಮ್ಯಾಟೊಗೆ ಬಂಗಾರದ ಬೆಲೆ ಬಂದಿರುವುದ್ದರಿಂದ ಬೇಡಿಕೆ ಹೆಚ್ಚಿದೆ. ಟೊಮೆಟೊ 80- ರಿಂದ 100 ರೂಪಾಯಿಯ ಗಡಿ ದಾಟಿದ್ದರಿಂದ ರೈತರ ಬೆಳೆದಿರುವ ಟೊಮ್ಯಾಟೊಗೆ ಬೇಡಿಕೆ ಹೆಚ್ಚಿದೆ.
ಮಾಯಕೊಂಡ ಹೋಬಳಿಯ ಗಂಗನಕಟ್ಟೆ ಗ್ರಾಮದ ರೈತ ವೀರಪ್ಪ ಎರಡು ಎಕರೆಯಲ್ಲಿ ಬಂಗಾರದಂತ ಟೊಮ್ಯಾಟೊ ಬೆಳೆಯನ್ನು ಬೆಳೆದ್ದಾರೆ. ಮೂರು ಲಕ್ಷ ರೂಪಾಯಿ ವ್ಯಯ ಮಾಡಿ ಬೆಳೆ ಬೆಳೆದಿದ್ದು, ಆರಂಭದಲ್ಲಿ ಮಳೆ ಕೈ ಕೊಟ್ಟಿತ್ತು. ಬಳಿಕ ತಕ್ಕ ಮಟ್ಟಿಗೆ ಮಳೆ ಬಂದಿರುವುದರಿಂದ ಬೆಳೆ ರೈತ ವೀರಪ್ಪ ಅವರ ಕೈ ಹಿಡಿದಿದೆ. ಹೀಗಾಗಿ ಬರೋಬ್ಬರಿ 20 ಲಕ್ಷ ರೂಪಾಯಿ ಲಾಭದ ನಿರೀಕ್ಷೆಯಲ್ಲಿದ್ದಾರೆ.
ರಾಜ್ಯದಲ್ಲಿ ಕೆಂಪು ಸುಂದರಿಗೆ ಡಿಮ್ಯಾಂಡ್ಪ್ಪೋ ಡಿಮ್ಯಾಂಡು (ETV Bharat) ಈಗಾಗಲೇ 25 ಕೆಜಿಯ ಒಂದು ಟೊಮೆಟೊ ಬಾಕ್ಸ್ಗೆ ಮಾರುಕಟ್ಟೆಯಲ್ಲಿ 1650 ರೂಪಾಯಿ ಬೆಲೆ ಇದೆ. ವೀರಪ್ಪನವರು ಈಗಾಗಲೇ 500 ಬಾಕ್ಸ್ ಟೊಮೆಟೊ ಹರಿದಿದ್ದು, ಮುಗಿಯುವ ತನಕ ಒಟ್ಟು 2000 ಸಾವಿರ ಬಾಕ್ಸ್ ಟೊಮೆಟೊ ಫಸಲು ಬರಲಿದೆ. 1600 ರಿಂದ 2000 ಕ್ಕೆ ಒಂದು ಟೊಮೆಟೊ ಬಾಕ್ಸ್ ಬೆಲೆ ನಿಗದಿಯಾದ್ರೆ ಬರೋಬ್ಬರಿ 20 ಲಕ್ಷ ರೂಪಾಯಿ ಲಾಭ ಗಳಿಸುತ್ತೇನೆ ಎಂಬುದು ರೈತ ವೀರಪ್ಪ ಅವರ ಮಾತಾಗಿದೆ.
ಕಡಿಮೆ ಬೆಲೆಗೆ ಕೊಂಡು ಹೆಚ್ಚು ಬೆಲೆಗೆ ಮಾರಾಟ:ಕಷ್ಟಪಟ್ಟು ರೈತ ಬೆಳೆದ ಟೊಮೆಟೊ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ರೆ ದಲ್ಲಾಳಿಗಳು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚು ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಾರೆ ಎಂದು ರೈತ ವೀರಪ್ಪ ಬೇಸರ ವ್ಯಕ್ತಪಡಿಸಿದರು. ಎರಡು ಎಕರೆ ಟೊಮೆಟೊ ನಾಟಿ ಮಾಡಿದ್ದೆವು. ಒಳ್ಳೆ ಬೆಲೆ ಇದೆ. 400-500 ಬಾಕ್ಸ್ ಟೊಮೆಟೊ ಹರಿಯಲಾಗಿದೆ. ಇನ್ನೂ 2000 ಬಾಕ್ಸ್ ಫಸಲು ಬರುತ್ತೆ. ಈಗಾಗಲೇ 1600 ರೂ. ಬಾಕ್ಸ್ ಟೊಮೆಟೊ ಬೆಲೆ ಇದೆ. ಹೀಗೆ ಬೆಲೆ ಮುಂದುವರೆದ್ರೆ 20 ಲಕ್ಷ ರೂಪಾಯಿ ಲಾಭ ಗಳಿಸುತ್ತೇನೆ ಎಂದರು.
ಇನ್ನು ದಲ್ಲಾಳಿಗಳು, ವ್ಯಾಪಾರಸ್ಥರು ನಮ್ಮ ಬಳಿ ಕೆಜಿಗೆ 60 ರೂಪಾಯಿಯಂತೆ ಖರೀದಿ ಮಾಡಿ ಅವರು 100 ರೂಪಾಯಿಯಂತೆ ಮಾರಾಟ ಮಾಡಿ ಹೆಚ್ಚು ಲಾಭ ಪಡೆಯುತ್ತಾರೆ. ಅದ್ರೆ ನಾವು ಕಷ್ಟ ಪಟ್ಟು ಮೂರು ತಿಂಗಳ ಕಾಲ ಬೆಳೆಯುತ್ತೇವೆ ಎಂದು ರೈತ ವೀರಪ್ಪ ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕೆಂಪು ಸುಂದರಿಗೆ ಡಿಮ್ಯಾಂಡ್ಪ್ಪೋ ಡಿಮ್ಯಾಂಡು (ETV Bharat) ಇಲ್ಲಿಯ ಟೊಮೆಟೊ ಅಂತಾರಾಷ್ಟ್ರೀಯ ಮಟ್ಟದಲ್ಲಿ ಫೇಮಸ್:ಹೌದು, ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯ ಸುತ್ತಮುತ್ತ ಗ್ರಾಮಗಳಲ್ಲಿ ಬೆಳೆಯುವ ಟೊಮೆಟೊಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರಾಟವಾಗುತ್ತಿತ್ತು. ಇಲ್ಲಿಯ ರೈತ ಶರಣಪ್ಪ ಎಂಬುವರು ಏಜೆಂಟ್ ಆಗಿ ಕೆಲಸ ಮಾಡುವ ವೇಳೆ ಇಲ್ಲಿನ ಟೊಮೆಟೊ ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ, ತಮಿಳುನಾಡು, ದೆಹಲಿ ಸೇರಿದಂತೆ ದೇಶಾದ್ಯಂತ ರಫ್ತಾಗುತ್ತಿತ್ತು. ಆದ್ರೆ ಇದೀಗ ಇಲ್ಲೇ ಟೊಮೆಟೊಗೆ ಬಂಗಾರದ ಬೆಲೆ ಬಂದಿದ್ದರಿಂದ ದಾವಣಗೆರೆ ಮಾರುಕಟ್ಟೆಗೆ ಕಳುಹಿಸುತ್ತಿರುವುದು ವಿಶೇಷ.
ಓದಿ:2023-24ರಲ್ಲಿ ತರಕಾರಿಗಿಂತ ತೋಟಗಾರಿಕೆ ಬೆಳೆಗಳ ಉತ್ಪಾದನೆ ಹೆಚ್ಚು; ಕಾರಣ ಹೀಗಿದೆ - production of horticultural crops