ಕರ್ನಾಟಕ

karnataka

ETV Bharat / state

ದಾವಣಗೆರೆ: ಪ್ರೀತಿಸದಿದ್ದರೆ ಆ್ಯಸಿಡ್ ಹಾಕುವುದಾಗಿ ಅಪ್ರಾಪ್ತೆಗೆ ಬೆದರಿಕೆ, ಯುವಕನಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್ - Acid threat case Judgement - ACID THREAT CASE JUDGEMENT

ಪ್ರೀತಿ ಮಾಡದಿದ್ದರೆ ಮುಖಕ್ಕೆ ಆ್ಯಸಿಡ್ ಹಾಕುವುದಾಗಿ ಬೆದರಿಕೆ ಹಾಕಿದ್ದ ಯುವಕನಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ.

ದಾವಣಗೆರೆ ಕೋರ್ಟ್
ದಾವಣಗೆರೆ ಕೋರ್ಟ್ (ETV Bharat)

By ETV Bharat Karnataka Team

Published : Aug 3, 2024, 1:19 PM IST

ದಾವಣಗೆರೆ:ಪ್ರೀತಿಸದಿದ್ದರೆ ಆ್ಯಸಿಡ್ ಹಾಕುವುದಾಗಿ ಬಾಲಕಿಗೆ ಬೆದರಿಸಿ, ಚುಡಾಯಿಸಿ ಮಾನಹಾನಿ ಮಾಡಿದ್ದ ಪ್ರಕರಣದಲ್ಲಿ ಯುವಕನಿಗೆ ಇಲ್ಲಿನ ನ್ಯಾಯಾಲಯ ಆರು ತಿಂಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಪ್ರೀತಿಸುವಂತೆ ತನ್ನ ಮಗಳಿಗೆ ಯುವಕ ಚುಡಾಯಿಸುತ್ತಿದ್ದಾನೆ. ಜೊತೆಗೆ ಪ್ರೀತಿ ಮಾಡದಿದ್ದರೆ ಮುಖ್ಯಕ್ಕೆ ಆ್ಯಸಿಡ್ ಹಾಕಿ ಅಪಹರಿಸುವುದಾಗಿ ಬೆದರಿಕೆ ಹಾಕಿದ್ದಾನೆ, ಅಲ್ಲದೇ ಮಗಳ ಫ್ಲೆಕ್ಸ್ ಮಾಡಿಸಿ ಜನನಿಬಿಡ ಪ್ರದೇಶದಲ್ಲಿ ಅಳವಡಿಸಿ ಕಿರುಕುಳ ನೀಡಿದ್ದಾನೆ ಎಂದು ಯುವಕನ ವಿರುದ್ಧ ಸಂತ್ರಸ್ತೆಯ ತಂದೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೋಲಿಸರು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದರು. ಬಳಿಕ ಅಂದಿನ ತನಿಖಾಧಿಕಾರಿಯಾದ ಪಿಐ ಮಲ್ಲಮ್ಮ ಚೌಬೆ ದೋಷಾರೋಪಣಾ ಪಟ್ಟಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ದಾವಣಗೆರೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ-1 ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ ಅವರು ವಿಚಾರಣೆ ನಡೆಸಿದ್ದು, ಆರೋಪಿ ಯುವಕನ ಮೇಲೆ ಆರೋಪ ಸಾಬೀತಾಗಿದ್ದರಿಂದ 06 ತಿಂಗಳು ಕಾರಾಗೃಹ ಶಿಕ್ಷೆ ಹಾಗೂ 10,000 ರೂಪಾಯಿ ದಂಡ ವಿಧಿಸಿದ್ದಾರೆ.

ದಂಡದ 10,000 ರೂಪಾಯಿ ಹಣವನ್ನು ಪ್ರಕರಣದ ಸಂತ್ರಸ್ತೆಗೆ ನೀಡುವಂತೆ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸಂತ್ರಸ್ತ ಬಾಲಕಿ ಪರವಾಗಿ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ ಅವರು ನ್ಯಾಯ ಮಂಡನೆ ಮಾಡಿಸಿದ್ದರು. ಪ್ರಕರಣದಲ್ಲಿ ತನಿಖೆ ಮಾಡಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ ತನಿಖಾಧಿಕಾರಿಯಾದ ಮಲ್ಲಮ್ಮ ಚೌಬೆ ಹಾಗೂ ಸಿಬ್ಬಂದಿ ಮತ್ತು ಬಾಲಕಿ ಪರ ನ್ಯಾಯ ಮಂಡನೆ ಮಾಡಿದ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ ಅವರನ್ನು ಎಸ್ಪಿ ಉಮಾ ಪ್ರಶಾಂತ ಶ್ಲಾಘಿಸಿದರು.

ಇದನ್ನೂ ಓದಿ: ಸ್ನೇಹಿತನ ಪತ್ನಿಯೊಂದಿಗೆ ಸಂಬಂಧ; ಒಂಟಿ ಕೈ ರೌಡಿಶೀಟರ್‌ನಿಂದ ರೌಡಿಶೀಟರ್​ ಹತ್ಯೆ - Bengaluru Murder Case

ABOUT THE AUTHOR

...view details