ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯಗೆ ತೊಂದರೆ ಕೊಟ್ರೆ ಬೀದಿಗಿಳಿದು ಹೋರಾಟ: ಅಹಿಂದ ನಾಯಕರ ಎಚ್ಚರಿಕೆ - AHINDA Leaders

ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರು ನೀಡಿರುವ ನೋಟಿಸ್ ಹಿಂಪಡೆಯಬೇಕು ಮತ್ತು ಬಿಜೆಪಿ ಜೆಡಿಎಸ್ ಪಾದಯಾತ್ರೆ ವಾಪಸ್ ಪಡೆಯಬೇಕು ಎಂದು ಅಹಿಂದ ನಾಯಕರು ಆಗ್ರಹಿಸಿದ್ದಾರೆ.

ಅಹಿಂದ ನಾಯಕರು
ಅಹಿಂದ ನಾಯಕರು (ETV Bharat)

By ETV Bharat Karnataka Team

Published : Aug 4, 2024, 9:52 AM IST

Updated : Aug 4, 2024, 10:28 AM IST

ದಾವಣಗೆರೆಯಲ್ಲಿ ಅಹಿಂದ ನಾಯಕರ ಸಭೆ (ETV Bharat)

ದಾವಣಗೆರೆ:ಮುಡಾ ಹಗರಣ ಆರೋಪ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡಿದ್ದಾರೆ. ಇನ್ನೊಂದೆಡೆ, ಸಿಎಂ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಮೈಸೂರಿಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಆದರೆ ಈ ಮಧ್ಯೆ ಸಿಎಂ ಪರ ಅಹಿಂದ ನಾಯಕರು ಧ್ವನಿ ಎತ್ತಿದ್ದಾರೆ.

ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರ ಪಾದಯಾತ್ರೆ ಪ್ರಾರಂಭವಾಗುತ್ತಿದ್ದಂತೆ ಅಹಿಂದ ನಾಯಕರು ದಾವಣಗೆರೆಯಲ್ಲಿ ಸಭೆ ಸೇರಿ ಬೃಹತ್ ಪ್ರತಿಭಟನೆಯ ರೂಪರೇಷೆ ಸಿದ್ಧಪಡಿಸಿದರು. ಈ ಪ್ರತಿಭಟನೆಗೆ ಸಾವಿರಾರು ಜನ ಸೇರಿಸುವ ಉದ್ದೇಶವೂ ಇದೆ ಎಂದು ತಿಳಿಸಿದ್ದಾರೆ.

ಎಲ್ಲಿ, ಯಾವಾಗ ಪ್ರತಿಭಟನೆ?: ಸೋಮವಾರ (ಆ.5) ಅಹಿಂದ ವರ್ಗ ದಾವಣಗೆರೆಯ ಅಂಬೇಡ್ಕರ್ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಮೆರವಣಿಗೆ ನಡೆಸಲಿದೆ. ರಾಜಭವನ ಚಲೋ ಕಾರ್ಯಕ್ರಮವನ್ನೂ ಹಾಕಿಕೊಳ್ಳಲಾಗಿದೆ.

"ಕಳಂಕರಹಿತ ಸಿದ್ದರಾಮಯ್ಯ ಎಲ್ಲಾ ಸಮಾಜದವರ ಮಹಾನಾಯಕ. ಭ್ರಷ್ಟಾಚಾರ ಆರೋಪ ಇಲ್ಲದೆ ಆಡಳಿತ ನೀಡಿದ ಏಕೈಕ ರಾಜಕಾರಣಿ. ಆದರೆ ಕೇಂದ್ರ ಸರ್ಕಾರ ಇಡಿ, ಐಟಿ, ರಾಜ್ಯಪಾಲರನ್ನು ಮುಂದಿಟ್ಟುಕೊಂಡು ಪ್ರಜಾತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದ್ದಾರೆ. ಚುನಾವಣೆ ಸೋತು ಒಂದು ವರ್ಷ ಕಳೆದಿಲ್ಲ, ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿದ್ದಾರೆ. ರಾಜ್ಯಪಾಲರು ಶೋಕಾಸ್ ನೋಟಿಸ್ ಹಿಂಪಡೆಯಬೇಕು. ಇಲ್ಲವಾದಲ್ಲಿ ರಾಜಭವನ ಚಲೋ ಹಮ್ಮಿಕೊಳ್ಳಬೇಕಾಗುತ್ತದೆ. ಬೆಂಗಳೂರಲ್ಲಿ ಒಂದು ಸ್ವಂತ ಮನೆಯನ್ನೂ ಹೊಂದದ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ" ಅಹಿಂದ ನಾಯಕ ಚಮನ್ ಸಾಬ್ ತಿಳಿಸಿದರು.

ಇದನ್ನೂ ಓದಿ: ಭ್ರಷ್ಟಾಚಾರವೇ ನಿಮ್ಮ ತಾಯಿ - ತಂದೆ, ಭ್ರಷ್ಟಾಚಾರವೇ ನಿಮ್ಮ ಬಂಧು ಬಳಗ: ಮೈತ್ರಿ ನಾಯಕರ ವಿರುದ್ಧ ಡಿಕೆಶಿ ಟೀಕೆ - D k shivakumar

"ವಿಜಯೇಂದ್ರ ನೆತ್ತಿ ಮಾಸದ ರಾಜಕಾರಣಿ. ತನ್ನ ತಂದೆಯನ್ನು ಜೈಲಿಗೆ ಕಳಿಸಿದವರು. ಇವರಿಗೆ ಸಿದ್ದರಾಮಯ್ಯ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ. ಹೆಚ್.ಡಿ.ಕುಮಾರಸ್ವಾಮಿ ಕುಟುಂಬದ ಬಗ್ಗೆ ರಾಜ್ಯದ 7 ಕೋಟಿ ಜನರಿಗೆ ಗೊತ್ತಿದೆ. ತಳ ಸಮುದಾಯದ ಶೇ.80ರಷ್ಟು ಜನ ಸಿಎಂ ಬೆನ್ನಿಗಿದ್ದೇವೆ. ಅವರಿಗೆ ತೊಂದರೆ ಕೊಟ್ಟರೆ ಐದು ಕೋಟಿ ಜನ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ತಕ್ಷಣ ನೋಟಿಸ್ ಹಿಂಪಡೆಯಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡುತ್ತೇವೆ. ಬಿಜೆಪಿಯರಿಗೆ ನ್ಯಾಯ, ಸಂವಿಧಾನದ ಮೇಲೆ ನಂಬಿಕೆ ಇದ್ದರೆ ಪಾದಯಾತ್ರೆ ವಾಪಸ್ ಪಡೆಯಲಿ. ಮುಡಾ ಪ್ರಕರಣದ ಬಗ್ಗೆ ಮಾಧ್ಯಮಗಳ ಮುಂದೆ ಎರಡು ಬಾರಿ ದಾಖಲೆಗಳನ್ನು ಬಿಡುಗಡೆ ಮಾಡಿ ಇದರಲ್ಲಿ ನನ್ನ ಪಾತ್ರವಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ" ಎಂದು ಅಹಿಂದ ನಾಯಕ ವೀರೇಶ್ ನಾಯ್ಕ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಜನಗಣತಿಯಲ್ಲಿ ಲಿಂಗಾಯತ ಎಂದೋ, ಪಂಚಮಸಾಲಿ ಎಂದು ಬರೆಸಲು ತೀರ್ಮಾನಿಸಬೇಕಿದೆ: ವಚನಾನಂದ ಶ್ರೀ - Vachanananda Shri

Last Updated : Aug 4, 2024, 10:28 AM IST

ABOUT THE AUTHOR

...view details