ಕರ್ನಾಟಕ

karnataka

ETV Bharat / state

ದರ್ವೇಶ್ ಗ್ರೂಪ್ ವಂಚನೆ ಪ್ರಕರಣ: ಬಂಧಿತ ಆರೋಪಿಗಳು ಕೋರ್ಟ್​ ಎದುರು ಹಾಜರು - Darvesh Group Fraud Case

ದರ್ವೇಶ್ ಗ್ರೂಪ್ ಕಂಪನಿಯ ಬಹುಕೋಟಿ ರೂಪಾಯಿ ವಂಚನೆ ಆರೋಪ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

fraud case
ಆರೋಪಿಗಳನ್ನು ಕರೆದೊಯ್ದ ಪೊಲೀಸರು (ETV Bharat)

By ETV Bharat Karnataka Team

Published : Jul 29, 2024, 5:31 PM IST

ರಾಯಚೂರು:ದರ್ವೇಶ್ ಗ್ರೂಪ್ ಕಂಪನಿಯ ಬಹುಕೋಟಿ ರೂಪಾಯಿ ವಂಚನೆ ಆರೋಪ ಪ್ರಕರಣದಲ್ಲಿ ಬಂಧಿತ ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆರೋಪಿಗಳಾದ ಬಬ್ಲೂ, ಅಜರ್ ಹಾಗೂ ಮೋಸಿನ್‌ ಎಂಬವರನ್ನು ರಾಯಚೂರಿನ ಸಿಇಎನ್ ಪೊಲೀಸರು ಬಂಧಿಸಿದ್ದರು.

ಪ್ರಕರಣದ ತನಿಖೆಯ ಹೊಣೆಯನ್ನ ಸಿಐಡಿಗೆ ಹಸ್ತಾಂತರಿಸಲಾಗಿತ್ತು. ಸಿಐಡಿ ಅಧಿಕಾರಿಗಳು ಮೂವರು ಆರೋಪಿಗಳನ್ನು ರಾಯಚೂರಿನ 2ನೇ ಹೆಚ್ಚುವರಿ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯ ಎ4 ಆರೋಪಿ ಬಬ್ಲೂಗೆ ಆಗಸ್ಟ್ 2ವರೆಗೆ 5 ದಿನ ಸಿಐಡಿ ಪೋಲೀಸ್ ಕಸ್ಟಡಿಗೆ ನೀಡಿದೆ. ಉಳಿದ ಆರೋಪಿಗಳಾದ ಅಜರ್ ಹಾಗೂ ಮೋಸಿನ್​ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣದ ಪ್ರಮುಖ ಆರೋಪಿಗಳಾದ ಮೊಹಮ್ಮದ್ ಹುಸೇನ್ ಸುಜಾ, ಸಯ್ಯದ್ ವಾಸಿಮ್ ಹಾಗೂ ಸಯ್ಯದ್ ಮಸ್ಕಿನ್ ಪರಾರಿಯಾಗಿದ್ದು, ಸೆರೆ ಹಿಡಿಯಲು ಸಿಐಡಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಹಣ ಹಾಕಿ ವಂಚನೆಗೊಳಾದ ಬಗ್ಗೆ ಹೂಡಿಕೆದಾರ ಚಂದ್ರು ಎಂಬುವರು ರಾಯಚೂರಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಪ್ರಕರಣ ದಾಖಲಿಸಿದ್ದರು. ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದ್ದು, ತನಿಖೆ ಮುಂದುವರೆದಿದೆ.

ಇದನ್ನೂ ಓದಿ:ಮುಡಾ ಹಗರಣದ ವಿಚಾರದಲ್ಲಿ ಬಿಜೆಪಿಯಿಂದ ಬ್ಲ್ಯಾಕ್​ಮೇಲ್ ತಂತ್ರ: ಸಿಎಂ ಸಿದ್ದರಾಮಯ್ಯ - CM Siddaramaiah

ABOUT THE AUTHOR

...view details