ಕರ್ನಾಟಕ

karnataka

ETV Bharat / state

"ಬಿಜೆಪಿ ದೃಷ್ಟಿಯಲ್ಲಿ ದಲಿತರು ನಾಯಿಗೆ ಸಮಾನ": ಹುಬ್ಬಳ್ಳಿಯಲ್ಲಿ ಗುಜರಾತ್​ ಶಾಸಕ ಜಿಗ್ನೇಶ್​​ ಮೇವಾನಿ ಹೇಳಿಕೆ - MLA Jignesh Mevani

ಗುಜರಾತ್​ ಶಾಸಕ ಜಿಗ್ನೇಶ್​​ ಮೇವಾನಿ ಹುಬ್ಬಳ್ಳಿಯಲ್ಲಿ ನಡೆದ ವಿಶ್ವಮಾನವರ ದಿನಾಚರಣೆಯಲ್ಲಿ ಮಾತನಾಡಿ 'ಬಿಜೆಪಿ ದೃಷ್ಟಿಯಲ್ಲಿ ದಲಿತರು ನಾಯಿಗೆ ಸಮಾನ ಎನ್ನುವಂತಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುಜರಾತ್​ ಶಾಸಕ ಜಿಗ್ನೇಶ್​​ ಮೇವಾನಿ
ಗುಜರಾತ್​ ಶಾಸಕ ಜಿಗ್ನೇಶ್​​ ಮೇವಾನಿ

By ETV Bharat Karnataka Team

Published : Apr 15, 2024, 9:57 AM IST

Updated : Apr 15, 2024, 10:28 AM IST

ಗುಜರಾತ್​ ಶಾಸಕ ಜಿಗ್ನೇಶ್​​ ಮೇವಾನಿ ಹೇಳಿಕೆ

ಹುಬ್ಬಳ್ಳಿ:ಬಿಜೆಪಿ ದೃಷ್ಟಿಯಲ್ಲಿ ದಲಿತರು ನಾಯಿಗೆ ಸಮಾನ ಎನ್ನುವಂತಾಗಿದೆ ಎಂದು ಗುಜರಾತ್​ ಶಾಸಕ ಜಿಗ್ನೇಶ್​​ ಮೇವಾನಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯವರು ದೆಹಲಿಯಲ್ಲಿ ಸಂವಿಧಾನದ ಪ್ರತಿ ಸುಟ್ಟರು. ಈ ವೇಳೆ ಮೋದಿ ಮಾತನಾಡಲಿಲ್ಲ. ಸಂಸದ ಅನಂತಕುಮಾರ್​​ ಹೆಗಡೆ ಸಂವಿಧಾನ ಬದಲಾವಣೆ ಮಾಡೋದಾಗಿ ಹೇಳಿದರು. ನಾಯಿ ಬೊಗಳುತ್ತಿರುತ್ತೆ ನಾವು ತಲೆ ಕೆಡಿಸಿಕೊಳ್ಳಲ್ಲ ಅಂದರು. ಇದೆಲ್ಲ ನೋಡಿದಾಗ ಬಿಜೆಪಿ ದೃಷ್ಟಿಯಲ್ಲಿ ದಲಿತರು ನಾಯಿಗೆ ಸಮಾನ ಎನ್ನುವಂತಾಗಿದೆ. ಹೀಗಾಗಿ ಮೋದಿ ಸರ್ಕಾರವನ್ನು ಕಿತ್ತು ಹಾಕಬೇಕು ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.

ನಗರದ ನೆಹರು ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ವಿಶ್ವಮಾನವರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಒಂದು ಲಕ್ಷಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರಗಳಾಗಿವೆ. ದಲಿತ ಮತ್ತು ಆದಿವಾಸಿಗಳ ಸಂಖ್ಯೆ ಹೆಚ್ಚಿದೆ. ಅದಕ್ಕೆ ಅನುಗುಣವಾಗಿ ಅವರಿಗೆ ಸೌಲಭ್ಯಗಳು ಸಿಕ್ಕಿಲ್ಲ. ಎಲ್ಲ ರಂಗಗಳಲ್ಲಿಯೂ ದಲಿತ, ಆದಿವಾಸಿಗಳು ಹಿಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜಾತಿ ಜನಗಣತಿ ಬಗ್ಗೆ ಮಾತನಾಡುತ್ತಿದೆ ಎಂದರು.

ನಾವು ಅಧಿಕಾರಕ್ಕೆ ಬಂದರೆ ‌ಮಹದಾಯಿ ಯೋಜನೆ ಜಾರಿ - ಸಂತೋಷ್​ ಲಾಡ್: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ಉತ್ತರ ಕರ್ನಾಟಕ ಜನರಿಗೆ ಮೋಸ ಮಾಡುತ್ತಿದ್ದಾರೆ. ಈ‌ ಹಿಂದೆ ಕೂಡ ಯಡಿಯೂರಪ್ಪ ಅವರು ಚುನಾವಣಾ ಸಂದರ್ಭದಲ್ಲಿ ಮಹದಾಯಿ ಯೋಜನೆ ಜಾರಿ ಆಯಿತು ಅಂತ ಬಿಳಿ ಹಾಳೆ ತೋರಿಸಿ ಹೋದರು. ಆದರೆ ‌ಇನ್ನೂ ಯೋಜನೆ ಜಾರಿ ಆಗಿಲ್ಲ. ಸುಳ್ಳು ಹೇಳುವುದೇ ಬಿಜೆಪಿ ‌ನಾಯಕರ ಖಯಾಲಿ. ರಷ್ಯಾ- ಉಕ್ರೇನ್​ ಯುದ್ದವನ್ನು ನಿಲ್ಲಿಸಿದವರು ವಿಶ್ವನಾಯಕ ನರೇಂದ್ರ ಮೋದಿ ಅಂತ ಜಂಬಕೊಚ್ಚಿ ಕೊಳ್ಳುತ್ತಾರೆ. ಟಿವಿಗಳಲ್ಲಿ ಸುಳ್ಳು ಜಾಹೀರಾತು‌ ನೀಡುವವರು ನಮ್ಮ ದೇಶದ ಕರ್ನಾಟಕದ ಮಹದಾಯಿ ಯೋಜನೆಗೆ ಅರಣ್ಯ ಇಲಾಖೆಯ ಅನುಮತಿ‌ ಕೊಡಿಸಲು ಆಗುತ್ತಿಲ್ಲ ವಿಶ್ವ ನಾಯಕರೇ?. ಅದು ಹೇಗೆ ರಷ್ಯಾ ಉಕ್ರೇನ್​ ಯುದ್ಧ ನಿಲ್ಲಿಸಿದ್ರಿ ಎಂದು ಸಂತೋಷ್​ ಲಾಡ್​ ವ್ಯಂಗ್ಯವಾಡಿದರು.‌

ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮಹದಾಯಿ ಯೋಜನೆ ಜಾರಿ ಮಾಡುತ್ತೇವೆ. ಇದು ಶತ ಸಿದ್ಧ. ಬಿಜೆಪಿಯವರಂತೆ ಸುಳ್ಳು ಹೇಳುವವರು ನಾವಲ್ಲ. ನಾವು ನುಡಿದಂತೆ ನಡೆದಿದ್ದೇವೆ ಎನ್ನುವುದಕ್ಕೆ ರಾಜ್ಯದಲ್ಲಿ ಜಾರಿಯಾದ ಐದು ಗ್ಯಾರಂಟಿಗಳೇ ಸಾಕ್ಷಿಯಾಗಿದ್ದು, ನಮ್ಮ ಪಕ್ಷದ ಅಭ್ಯರ್ಥಿ ವಿನೋದ್​ ಅಸೂಟಿಗೆ ಮತ ನೀಡಿ ಕಾಂಗ್ರೆಸ್​ ಪಕ್ಷವನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಇದನ್ನೂ ಓದಿ:ದೇಶದಲ್ಲಿ ಆಳುವ - ಪ್ರತಿಪಕ್ಷದಿಂದ ಬದಲಾವಣೆ ಸಾಧ್ಯವಿಲ್ಲ, ನಮ್ಮಿಂದ ಮಾತ್ರ ಸಾಧ್ಯ: ಪ್ರಕಾಶ್ ರೈ - Actor Prakash rai

Last Updated : Apr 15, 2024, 10:28 AM IST

ABOUT THE AUTHOR

...view details