ಕಾರವಾರ ನೌಕಾನೆಲೆ ಲೇಬರ್ ಕಾಲೋನಿಯಲ್ಲಿ ಸಿಲಿಂಡರ್ ಸ್ಫೋಟ ಕಾರವಾರ: ಕಾರ್ಮಿಕರು ವಾಸಿಸುವ ಶೆಡ್ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಹಲವು ಶೆಡ್ಗಳು ಹಾನಿಗೊಳಗಾಗಿದ್ದು, ಅದೃಷ್ಟವಶಾತ್ ಕಾರ್ಮಿಕರು ಪ್ರಾಣಪಾಯದಿಂದ ಪಾರಾದ ಘಟನೆ ಕಾರವಾರದ ಮುದಗಾ ನೌಕಾನೆಲೆ ಲೇಬರ್ ಕಾಲೋನಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ನೌಕಾನೆಲೆಯ ಎನ್‌ಸಿಸಿ ಗುತ್ತಿಗೆ ಕಂಪೆನಿ ಕಾರ್ಮಿಕರು 150 ಕ್ಕೂ ಹೆಚ್ಚು ಶೆಡ್‌ಗಳಲ್ಲಿ ವಾಸ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ಅಡುಗೆಯ ಸಿಲಿಂಡರ್ ಸಿಡಿದು ಬೆಂಕಿ ಹೊತ್ತಿಕೊಂಡಿದ್ದು, ಒಂದು ಸಾಲಿನ ನಾಲ್ಕೈದು ಶೆಡ್‌ಗಳಿಗೆ ಬೆಂಕಿ ವ್ಯಾಪಿಸಿಕೊಂಡಿದೆ.
ಕಾರವಾರ ನೌಕಾನೆಲೆ ಲೇಬರ್ ಕಾಲೋನಿಯಲ್ಲಿ ಸಿಲಿಂಡರ್ ಸ್ಫೋಟ ಇದನ್ನೂ ಓದಿ: ಪಟಾಕಿ ಕಾರ್ಖಾನೆಗೆ ಬೆಂಕಿ; ಏಳು ಮಂದಿ ಸಾವು, ಅನೇಕರಿಗೆ ಗಾಯ
ಬೃಹತ್ ಪ್ರಮಾಣದಲ್ಲಿ ಸ್ಫೋಟ ಸಂಭವಿಸಿದ ಕಾರಣ ಶೆಡ್ನಲ್ಲಿದ್ದ ಕಾರ್ಮಿಕರು ತಕ್ಷಣವೇ ಹೊರಗೆ ಓಡಿದ್ದಾರೆ. ಹಲವರು ಗಾಯಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಕಾರವಾರ ನೌಕಾನೆಲೆ ಲೇಬರ್ ಕಾಲೋನಿಯಲ್ಲಿ ಸಿಲಿಂಡರ್ ಸ್ಫೋಟ ಇದನ್ನೂ ಓದಿ: ಬೆಂಗಳೂರಿನಲ್ಲಿ ಅಗ್ನಿ ಅವಘಡ; ವೆಲ್ಡಿಂಗ್ ಗ್ಯಾಸ್ ಟ್ಯಾಂಕರ್ ಸ್ಫೋಟ ಶಂಕೆ