ಕರ್ನಾಟಕ

karnataka

ETV Bharat / state

ಬೆಂಗಳೂರು: ಕೊರಿಯರ್ ಬಾಯ್‌ಗೆ ಚಾಕು ಇರಿದಿದ್ದ ಗ್ರಾಹಕ ಬಂಧನ - courier boy stabbed case

ಕೊರಿಯರ್ ಡೆಲಿವರಿ ಬಾಯ್‌ಗೆ ಚಾಕು ಇರಿದಿದ್ದ ಆರೋಪಿಯನ್ನು ಬೆಂಗಳೂರಿನ ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ
ಬಂಧಿತ ಆರೋಪಿ (ETV Bharat)

By ETV Bharat Karnataka Team

Published : Sep 2, 2024, 5:03 PM IST

ಬೆಂಗಳೂರು:ಮನೆ ವಿಳಾಸದ ಬಳಿ ಬರಲು ನಿರಾಕರಿಸಿದ್ದ ಎಂದು ಕೊರಿಯರ್ ಡೆಲಿವರಿ ಬಾಯ್‌ಗೆ ಚಾಕು ಇರಿದಿದ್ದ ಆರೋಪಿಯನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೊರಿಯರ್ ಕಂಪನಿಯ ಪ್ರತಿನಿಧಿ ಮಹಮ್ಮದ್ ಶಫಿ ಎಂಬಾತನಿಗೆ ಚಾಕು ಇರಿದಿದ್ದ ಆನೆಪಾಳ್ಯದ ನಿವಾಸಿ ಅರ್ಬಾಜ್ ಎಂಬಾತನನ್ನ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆ.30ರಂದು ಅರ್ಬಾಜ್​ಗೆ ಕೊರಿಯರ್ ಡೆಲಿವರಿ ಮಾಡಲು ಬಂದಿದ್ದ ಮೊಹಮ್ಮದ್ ಶಫಿ, ವಿಳಾಸ ತಿಳಿಯದೇ ಲ್ಯಾಂಡ್ ಮಾರ್ಕ್ ಬಳಿ ಬರುವಂತೆ ಹೇಳಿದ್ದ. ಈ ವೇಳೆ ಕೊರಿಯರ್ ಪಡೆದುಕೊಳ್ಳಲು ಅರ್ಬಾಜ್ ತನ್ನ ತಾಯಿಯನ್ನು ಕಳುಹಿಸಿದ್ದ.

ಆದರೆ, ಕೊರಿಯರ್ ಪಡೆದುಕೊಳ್ಳಲು ಅರ್ಬಾಜ್​ನ ಫೋನ್​ ನಂಬರ್​ಗೆ ಬರುವ ಒಟಿಪಿ ನೀಡಬೇಕು ಎಂದು ಶಫಿ, ಅರ್ಬಾಜ್​ನ ತಾಯಿಯನ್ನು ವಾಪಸ್ ಕಳುಹಿಸಿದ್ದ. ಇದರಿಂದ ಸಿಟ್ಟಿಗೆದ್ದ ಆರೋಪಿ ಮನೆಯಿಂದ ಚಾಕು ತಂದು ಮೊಹಮ್ಮದ್ ಶಫಿಯ ಹೊಟ್ಟೆ ಹಾಗೂ ಕುತ್ತಿಗೆಗೆ ಇರಿದಿದ್ದ. ತೀವ್ರವಾಗಿ ಗಾಯಗೊಂಡಿದ್ದ ಮೊಹಮ್ಮದ್ ಶಫಿಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮೊಹಮ್ಮದ್ ಶಫಿಯ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದ ಅಶೋಕ ನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಕಳ್ಳಸಾಗಣೆ ಮೂಲಕ ಬಾಂಗ್ಲಾದ ಅಪ್ರಾಪ್ತೆಯರನ್ನ ಕರೆತಂದು ವೇಶ್ಯಾವಾಟಿಕೆ ; ಬೆಂಗಳೂರಲ್ಲಿ ಟೆಕ್ಕಿ ಸಹಿತ ಮೂವರ ಬಂಧನ - PROSTITUTION CASE

ABOUT THE AUTHOR

...view details