ಕರ್ನಾಟಕ

karnataka

ETV Bharat / state

ಸಿ.ಟಿ.ರವಿ ಅವರ ಹಕ್ಕಿಗೆ ಚ್ಯುತಿಯಾಗದಂತೆ ಕ್ರಮ: ಬಸವರಾಜ ಹೊರಟ್ಟಿ - C T RAVI CASE

ಪೊಲೀಸರು ನನ್ನನ್ನು ಕರ್ಕೊಂಡು ಹೋಗಿ ರಾತ್ರಿಯೆಲ್ಲ ಸುತ್ತಾಡಿಸಿದ್ದಾರೆ. ಈ ರೀತಿ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಿ.ಟಿ.ರವಿ ಏಳು ಪುಟದ ಪತ್ರ ಬರೆದಿದ್ದಾರೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (ETV Bharat)

By ETV Bharat Karnataka Team

Published : Dec 25, 2024, 5:16 PM IST

Updated : Dec 25, 2024, 5:40 PM IST

ಹುಬ್ಬಳ್ಳಿ: "ಸಿ.ಟಿ.ರವಿ ವಿಧಾನ ಪರಿಷತ್​ ಸದಸ್ಯರಾಗಿರುವುದರಿಂದ ಅವರ ಹಕ್ಕಿಗೆ ಚ್ಯುತಿ ಆಗದಂತೆ ಕ್ರಮ ವಹಿಸುತ್ತೇನೆ" ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಾವು ಧರಣಿ ಮಾಡುತ್ತಿರುವ ವೇಳೆ ಪೊಲೀಸರು ನನ್ನನ್ನು ಕರ್ಕೊಂಡು ಹೋಗಿ ರಾತ್ರಿಯೆಲ್ಲ ಸುತ್ತಾಡಿಸಿದ್ದಾರೆ. ಹೀಗಾಗಿ ಈ ರೀತಿ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಅಂತ ಸಿ.ಟಿ.ರವಿ ಏಳು ಪುಟಗಳ ಪತ್ರ ಬರೆದಿದ್ದಾರೆ" ಎಂದರು.

"ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರಿಂದ ಯಾವುದೇ ಪತ್ರ ಬಂದಿಲ್ಲ, ಘಟನೆ ನಡೆದ ದಿನ ಹೆಬ್ಬಾಳ್ಕರ್​ ನೋವಿನಲ್ಲಿದ್ದರು. ಮಾಧ್ಯಮಗಳಲ್ಲಿ ಅವರ ಹೇಳಿಕೆ ಗಮನಿಸಿದ್ದೇವೆ. ಹೆಣ್ಣುಮಕ್ಕಳಿಗೆ ಗೌರವ ನೀಡುವುದು ನಮ್ಮ ಧರ್ಮ. ಲಕ್ಷ್ಮೀ ಹೆಬ್ಬಾಳ್ಕರ್​ ಅವರನ್ನು ನನ್ನ ಮಗಳ ರೀತಿ ತಿಳಿದುಕೊಂಡಿದ್ದೇನೆ" ಎಂದು ತಿಳಿಸಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (ETV Bharat)

ರಾಜ್ಯಪಾಲರಿಗೆ ವಿವರಣೆ ನೀಡಿದ್ದೇನೆ-ಹೊರಟ್ಟಿ: "ಪರಿಷತ್​ನಲ್ಲಿ ನಡೆದ ಘಟನೆಯ ಕುರಿತು ರಾಜ್ಯಪಾಲರು ಮಾಹಿತಿ ಕೇಳಿರುವುದು ನಿಜ. ಅದಕ್ಕೆ ವಿವರಣೆ ನೀಡಿದ್ದೇನೆ. ಡಿ.27ರಂದು ಬೆಳಗಾವಿಗೆ ತೆರಳಲಿದ್ದು, ಅಲ್ಲಿ ರಾಜ್ಯಪಾಲರು ಸಿಕ್ಕರೆ ಮಾತನಾಡುತ್ತೇನೆ. ಇಲ್ಲದಿದ್ದರೆ ಬೆಂಗಳೂರಿನಲ್ಲಿ ಭೇಟಿಯಾಗುತ್ತೇನೆ" ಎಂದು ಹೇಳಿದರು.

ಇದನ್ನೂ ಓದಿ:ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದು ಅವಮಾನಿಸಿದ್ದು ಸರಿಯಲ್ಲ; ಜೋಶಿ-ವಿಜಯೇಂದ್ರ ಕಿಡಿ

Last Updated : Dec 25, 2024, 5:40 PM IST

ABOUT THE AUTHOR

...view details