ಕರ್ನಾಟಕ

karnataka

ETV Bharat / state

ಯಶವಂತಪುರ ರೈಲು ನಿಲ್ದಾಣದಲ್ಲಿ ಏರ್ ಕಾಂಕೋರ್ಸ್ ಅಳವಡಿಕೆ ಕಾಮಗಾರಿ: 15 ದಿನ ರೈಲು ಸಂಚಾರ ಬಂದ್ - Yeshwantpur Railway Station - YESHWANTPUR RAILWAY STATION

ಯಶವಂತಪುರ ರೈಲು ನಿಲ್ದಾಣದ 2,3,4,5 ಪ್ಲಾಟ್ ಫಾರಂಗಳಲ್ಲಿ ನಿಲ್ಲುತ್ತಿದ್ದ ಕೆಲ ರೈಲುಗಳ ಸಂಚಾರವನ್ನು 15 ದಿನಗಳ ಕಾಲ ಬಂದ್ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ
ಸಂಗ್ರಹ ಚಿತ್ರ (ETV Bharat)

By ETV Bharat Karnataka Team

Published : Aug 21, 2024, 7:46 PM IST

ಬೆಂಗಳೂರು: ಯಶವಂತಪುರ ರೈಲು ನಿಲ್ದಾಣದಲ್ಲಿ ಏರ್ ಕಾಂಕೋರ್ಸ್ ಅಳವಡಿಕೆ ಕಾಮಗಾರಿ ಹಿನ್ನೆಲೆಯಲ್ಲಿ ನಿಲ್ದಾಣದ 2,3,4,5 ಪ್ಲಾಟ್ ಫಾರಂಗಳಲ್ಲಿ ನಿಲ್ಲುತ್ತಿದ್ದ ಕೆಲ ರೈಲುಗಳ ಸಂಚಾರವನ್ನು 15 ದಿನಗಳ ಕಾಲ ಬಂದ್ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಇಂದಿನಿಂದ ಸೆಪ್ಟೆಂಬರ್ 4ರ ವರೆಗೆ 2 ಮತ್ತು 3ನೇ ಪ್ಲಾಟ್ ಫಾರಂ ಬಂದ್ ಆಗಲಿದ್ದು, ಸೆಪ್ಟೆಂಬರ್ 5 ರಿಂದ 19 ರ ವರೆಗೆ 4 ಮತ್ತು 5ನೇ ಪ್ಲಾಟ್ ಫಾರಂ ಕೂಡಾ ಬಂದ್ ಆಗಲಿದೆ. ಈ ಕಾರಣಕ್ಕೆ ಕೆಲ ರೈಲುಗಳನ್ನು ರದ್ದು ಮಾಡಲಾಗಿದೆ. ತುಮಕೂರು-ಕೆಎಸ್‌ಆರ್ ಬೆಂಗಳೂರು ಮತ್ತು 06575 ಕೆಎಸ್‌ಆರ್ ಬೆಂಗಳೂರು-ತುಮಕೂರು ರೈಲು ಸಂಚಾರವನ್ನು ಇಂದಿನಿಂದ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಿಂದ 19ರವರೆಗೆ ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದೆ.

ತುಮಕೂರು- ಯಶವಂತಪುರ ರೈಲು ಇಂದಿನಿಂದ ಆಗಸ್ಟ್ 31 ಮತ್ತು ಸಪ್ಟೆಂಬರ್ 1 ರಿಂದ 19 ರವರೆಗೆ ಚಿಕ್ಕಬಾಣಾವರ- ಯಶವಂತಪುರ ನಡುವೆ ಭಾಗಶಃ ರದ್ದಾಗಲಿದೆ. ಯಶವಂತಪುರ-ಹೊಸೂರು ಮಧ್ಯೆ ಸಂಚರಿಸುವ ರೈಲು ಇಂದಿನಿಂದ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಿಂದ 19ರವರೆಗೆ ಯಶವಂತಪುರ- ಹೆಬ್ಬಾಳ ನಡುವೆ ಭಾಗಶಃ ರದ್ದಾಗಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ:ಮಂಗಳೂರು-ಬೆಂಗಳೂರು ರೈಲ್ವೇ ಮಾರ್ಗದ ಮಣ್ಣು ತೆರವು ಪೂರ್ಣ; ರೈಲು ಸಂಚಾರ ಪುನಾರಂಭ - Railway Line Work Complete

ABOUT THE AUTHOR

...view details