ಬಿ ಕೆ ಹರಿಪ್ರಸಾದ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಬೆಂಗಳೂರು: ಕೇರಳದಲ್ಲಿ ಎಸ್ ಡಿ ಪಿ ಐ ಬೆಂಬಲವನ್ನು ನಾವು ಕೋರಿಲ್ಲ. ಬದಲಾಗಿ ಅವರೇ ಬೆಂಬಲ ಕೊಟ್ಟರೆ ನಾವೇನು ಮಾಡಲು ಆಗಲ್ಲ, ನಾವೇನು ಬೆಂಬಲ ನೀಡುವಂತೆ ಕೇಳಿಲ್ಲ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಬಿ ಕೆ ಹರಿಪ್ರಸಾದ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಮುವಾದಿ ಪಕ್ಷವನ್ನು ಸೋಲಿಸಲು ಬೆಂಬಲ ಕೊಟ್ಟಿರುವ ಅದು ಅವರಿಗೆ ಬಿಟ್ಟಿರುವ ವಿಚಾರ. ನಾವು ಅವರ ಬೆಂಬಲವನ್ನು ಕೋರಿಲ್ಲ. ಅದು ಅವರ ಪಕ್ಷದ ತೀರ್ಮಾನ ಅವರು ತಾವಾಗಿಯೇ ನಮಗೆ ಬೆಂಬಲ ಘೋಷಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಎಸ್ ಡಿಪಿಐ ಕೂಡ ಕೋಮುವಾದಿ ಪಕ್ಷ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಅವರ ಬೆಂಬಲ ಕೋರಿಲ್ಲ. ಬಿಜೆಪಿ ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಜೊತೆಗೆ ಸಮ್ಮಿಶ್ರ ಸರ್ಕಾರ ನಡೆಸಿತ್ತು. ಪಿಡಿಪಿ ಕಾಶ್ಮೀರದಲ್ಲಿ ಚುನಾವಣೆ ಬಳಿಕ ಪಾಕಿಸ್ತಾನಕ್ಕೆ ಧನ್ಯವಾದ ಹೇಳಿದ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಅವರ ಜೊತೆಗೆ ಬಿಜೆಪಿ ಎರಡು ವರ್ಷ ಸರ್ಕಾರ ನಡೆಸಿತ್ತು ಎಂದು ತಿರುಗೇಟು ನೀಡಿದರು.
ಬಿಜೆಪಿ ಸದಸ್ಯರು ಗೋಡ್ಸೆ ಮಂದಿರ ಕಟ್ಟಬೇಕು. ಪೂಜೆ ಮಾಡಬೇಕು ಎಂದು ಹೇಳ್ತಾರೆ. ಮಹಾತ್ಮ ಗಾಂಧಿ ಪುತ್ಥಳಿ ಮಾಡಿ ಅದಕ್ಕೆ ಗುಂಡು ಹಾರಿಸುವವರೊಂದಿಗೆ ಬಿಜೆಪಿ ಇದೆ. ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವರು. ಸಂವಿಧಾನ ರಕ್ಷಣೆ ಮಾಡುವವರು ಎಂದು ತಿರುಗೇಟು ನೀಡಿದರು.
ಇದನ್ನೂಓದಿ:ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಪರ ಮತಯಾಚಿಸಿದ ಶಾಸಕ ಎಸ್.ಆರ್ ವಿಶ್ವನಾಥ್, ನಟಿ ತಾರ - Lokshaba election