ಚನ್ನಪಟ್ಟಣ:ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆ ಮತ ಎಣಿಕೆ ಪೂರ್ಣಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರು ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಅಂತಿಮ ಸುತ್ತಿನ ಬಳಿಕ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು 82229 ಮತ ಪಡೆದು ಸೋತರು. ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರು 112642 ಮತಗಳನ್ನು ಗಳಿಸಿ, 25413 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ನಿಖಿಲ್ಗೆ ಮೂರನೇ ಸೋಲು:ಈ ಮೊದಲು 2019ರಲ್ಲಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಅವರು ಸುಮಲತಾ ಅಂಬರೀಶ್ ವಿರುದ್ಧ ಸೋತಿದ್ದರು. ಬಳಿಕ 2023ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸಿ ಪರಾಜಯಗೊಂಡಿದ್ದರು. ಇದೀಗ ಹೆಚ್ ಡಿ ಕುಮಾರಸ್ವಾಮಿ ಅವರಿಂದ ತೆರವಾದ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲೂ ಸೋಲನುಭವಿಸಿದ್ದಾರೆ.
ಯಾವ ಸುತ್ತಿನಲ್ಲಿ ಯಾರಿಗೆ ಎಷ್ಟು ಮತ?:
ಸುತ್ತು 1: ಜೆಡಿಎಸ್ - 5075 , ಕಾಂಗ್ರೆಸ್-5124
ಸುತ್ತು 2: ಜೆಡಿಎಸ್ - 10204, ಕಾಂಗ್ರೆಸ್ - 10069
ಸುತ್ತು 3: ಜೆಡಿಎಸ್ - 15307, ಕಾಂಗ್ರೆಸ್ 14460
ಸುತ್ತು 4: ಜೆಡಿಎಸ್ - 20676, ಕಾಂಗ್ರೆಸ್ -19521
ಸುತ್ತು 5: ಜೆಡಿಎಸ್ - 25649, ಕಾಂಗ್ರೆಸ್ - 24343
ಸುತ್ತು 6: ಜೆಡಿಎಸ್ 30674, ಕಾಂಗ್ರೆಸ್ - 29891
ಸುತ್ತು 7: ಜೆಡಿಎಸ್ 33628, ಕಾಂಗ್ರೆಸ್ - 37587
ಸುತ್ತು 8: ಜೆಡಿಎಸ್ 34808, ಕಾಂಗ್ರೆಸ್ - 45982