ಕರ್ನಾಟಕ

karnataka

ETV Bharat / state

ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದಿದ್ದು ಕಾಂಗ್ರೆಸ್, ಹೆಚ್ಚು ದೇಶಾಭಿಮಾನ ನಮ್ಮಲ್ಲಿದೆ: ಲಕ್ಷ್ಮಣ್ ಸವದಿ - Lok Sabha Election 2024 - LOK SABHA ELECTION 2024

1950ರ ಮೊದಲು ಬಿಜೆಪಿ ಇರಲಿಲ್ಲ.‌ ನಿಜವಾದ ದೇಶ ವಿರೋಧಿಗಳು ಭಾರತೀಯ ಜನತಾ ಪಾರ್ಟಿ. ಅವರ ದೇಶಾಭಿಮಾನ ಏನಿದ್ರು ತೋರ್ಪಡಿಗೆ ಮಾತ್ರ ಎಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಆರೋಪಿಸಿದರು.

MLA Lakshman Savadi spoke to the media.
ಶಾಸಕ ಲಕ್ಷ್ಮಣ್ ಸವದಿ ಮಾಧ್ಯಮದವರೊಂದಿಗೆ ಮಾತನಾಡಿದರು.

By ETV Bharat Karnataka Team

Published : Apr 13, 2024, 4:10 PM IST

Updated : Apr 13, 2024, 4:42 PM IST

ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಲಬುರಗಿ:ಬಿಜೆಪಿಗೆ ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತಾಗಿದೆ. ವಿನಾಶಕಾಲ ಬಂದಿದ್ದಕ್ಕೆ ಈ ರೀತಿಯಾಗಿ ಟ್ವೀಟ್ ಮಾಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಆರೋಪಿಸಿದರು.

ಕಲಬುರಗಿಯಲ್ಲಿ ‌ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಟ್ವೀಟ್‌ಗೆ ಕೆಂಡಾಮಂಡಲರಾದ ಸವದಿ, ಭಾರತ ಮಾತಾ ಕಿ ಜೈ ಅನ್ನೋದು ಇವರಪ್ಪನ ಮನೆ ಆಸ್ತಿನಾ?. ಭಾರತ ಮಾತಾ ಕಿ ಜೈ ಅನ್ನೊದು ಈ ದೇಶದ ಪ್ರತಿಯೊಬ್ಬ ನಾಗಕರಿನ ಹಕ್ಕು. ದೇಶದಲ್ಲಿರೋ ಪ್ರತಿಯೊಬ್ಬರಿಗೂ ದೇಶಾಭಿಮಾನವಿದೆ. ಏನ್ ಇವ್ರಿಗೆ ಅಷ್ಟೇ ದೇಶಾಭಿಮಾನ ಇರೋದಾ? ಇನ್ಮುಂದೆ ಕಾಂಗ್ರೆಸ್ ಪಕ್ಷದಲ್ಲಿ ಭಾರತ್ ಮಾತಾ ಕಿ ಜೈ ಅಂತಿವಿ. ವಂದೇ ಮಾತರಂ ಅಂತಿವಿ. ಜೈ ಹಿಂದು ಅಂತಿವಿ. ಇವರಿಗಿಂತ ಹೆಚ್ಚು ದೇಶಾಭಿಮಾನ ನಮ್ಮಲ್ಲಿದೆ. ದೇಶಕ್ಕೆ ಸ್ವಾತಂತ್ರ್ಯ ತಂದಿದ್ದು ಕಾಂಗ್ರೆಸ್ ಎಂದು ತಿರುಗೇಟು ನೀಡಿದರು.

''1950ರ ಮೊದಲು ಬಿಜೆಪಿ ಇರಲಿಲ್ಲ.‌ ಇಂತಹ ಚಿಲ್ಲರೆ ಕೆಲಸ ಮಾಡೋದು, ನಿಂದನೆ ಮಾಡೋದು ಇವರ ಕೆಲಸ. ನಿಜವಾದ ದೇಶ ವಿರೋಧಿಗಳು ಭಾರತೀಯ ಜನತಾ ಪಾರ್ಟಿಯವರು. ಅವರ ದೇಶಾಭಿಮಾನ ಏನಿದ್ರು ತೋರ್ಪಡಿಗೆ ಮಾತ್ರ, ಅಧಿಕಾರಕ್ಕಾಗಿ ಅಷ್ಟೇ. 400 ಸೀಟ್ ಗೆದ್ದರೆ ಸಂವಿಧಾನ ಬದಲಿಸ್ತಿವಿ ಅಂದೋರು ಬಿಜೆಪಿಯವರು. ನಿಜವಾದ ಸಂವಿಧಾನ ವಿರೋಧಿಗಳು. ಬೋಲೋ ಭಾರತ್ ಮಾತಾ ಕಿ ಜೈ ಅಂತಿವಿ. ಜೈ ಶ್ರೀರಾಮ್‌ನು ಅಂತಿವಿ. ನನ್ನ ಹೆಸರು ಲಕ್ಷ್ಮಣ್. ರಾಮನ ತಮ್ಮನ ಹೆಸರು ಲಕ್ಷ್ಮಣ.. ಹೀಗಾಗಿ ನಾನು ರಾಮನ ತಮ್ಮ ಲಕ್ಷ್ಮಣ್'' ಎಂದು ತಿಳಿಸಿದರು.

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ: ''ಎನ್‌ಐಎಯಿಂದ ಇಬ್ಬರು ಉಗ್ರರ ಬಂಧನ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಬ್ರದರ್ಸ್ ಅರೆಸ್ಟ್ ಆಗಿದ್ದಾರೆಂದು ನಮ್ಮ ಪಕ್ಷದ ಹೇಳಿಕೆಯನ್ನು ತಿರುಚಿದ್ದಾರೆ. ಬಿಜೆಪಿ ನಮ್ಮ ಹೇಳಿಕೆಗಳನ್ನು ಕಟ್ ಎಡಿಟ್ ಮಾಡಿ ಅಷ್ಟೇ ಹೇಳೋದು ರೂಢಿಯಾಗಿದೆ. ಏನಾದರೂ ಮಾಡಿ ಕಾಂಗ್ರೆಸ್ ಮೇಲೆ ಆಪಾದನೆ‌ ಮಾಡಲೂ ಪ್ರಯತ್ನ ಮಾಡುತ್ತಿದೆ.‌ ಖಂಡಿತವಾಗಿ ಈ ಬಾರಿ ಕೇಂದ್ರದಲ್ಲಿ ಬಿಜೆಪಿಗೆ ಅಧಿಕಾರ ಸಿಗಲ್ಲ'' ಎಂದು ಸವದಿ ಭವಿಷ್ಯ ನುಡಿದರು.

ಇದನ್ನೂಓದಿ:ರಾಮೇಶ್ವರ ಕೆಫೆ ಸ್ಫೋಟ ಪ್ರಕರಣ ತಿರುಚುವ ಯತ್ನ ನಡೆದಿತ್ತು: ಆರ್​. ಅಶೋಕ್ ಆರೋಪ - Rameshwar Cafe Blast

Last Updated : Apr 13, 2024, 4:42 PM IST

ABOUT THE AUTHOR

...view details