ಬೆಂಗಳೂರು :ಹೊಸ ವರ್ಷದ ಶುಭಾಶಯ ಕೋರಲು ಕಚೇರಿಗೆ ಹೂಗುಚ್ಛ, ಸಿಹಿ ತಿನಿಸುಗಳನ್ನು ತರದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕಳೆದ ವರ್ಷವೂ ಸಹ ಹೊಸ ವರ್ಷಾಚರಣೆಗೆ ಶುಭ ಕೋರಲು ಹೂಗುಚ್ಛ, ಸಿಹಿ ತಿನಿಸುಗಳನ್ನು ತರದಂತೆ ಸೂಚಿಸಿದ್ದ ಅವರು, ಅದಕ್ಕಾಗಿ ವ್ಯಯಿಸುವ ಹಣದಲ್ಲಿ ನಿಮ್ಮ ವ್ಯಾಪ್ತಿಯ ಅನಾಥಾಶ್ರಮಳಿಗೆ ದಿನಸಿ, ಸಿಹಿ ತಿನಿಸು ಅಥವಾ ಊಟದ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು. ಅಲ್ಲದೆ ತಾವೂ ಸಹ ಅದನ್ನು ಅನುಸರಿಸುವ ಮೂಲಕ ಮಾದರಿಯಾಗಿದ್ದರು.