ಸಿಎಂ ಸಿದ್ದರಾಮಯ್ಯ ಹೇಳಿಕೆ (ETV Bharat) ಬೆಳಗಾವಿ:ಮುಡಾ ವಿಚಾರವಾಗಿ ಕಾನೂನಾತ್ಮಕ ಹಾಗೂ ರಾಜಕೀಯ ಹೋರಾಟಕ್ಕೆ ಸಿದ್ಧ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ರಾಜ್ಯಪಾಲರು ಇಂದು ರಾಜ್ಯಕ್ಕೆ ಬರ್ತಾರೆ ಎಂಬುದು ಗೊತ್ತಿದೆ. ಶೋಕಾಸ್ ನೋಟಿಸ್ ವಾಪಸ್ ಪಡೆಯುವಂತೆ ಮತ್ತು ಅಬ್ರಾಹಂ ಕೊಟ್ಟಿರುವ ದೂರು ತಿರಸ್ಕರಿಸುವಂತೆ ಹೇಳಿದ್ದೇವೆ. ನೋಡೋಣ, ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಪ್ರವಾಹದಿಂದ ಜನರಿಗಾಗಿರುವ ತೊಂದರೆಗಳನ್ನು ನೋಡಲು ಬಂದಿದ್ದೇನೆ. ಮೈಸೂರು, ಕೊಡಗು, ಹಾಸನ ಹಾಗೂ ಬೆಳಗಾವಿಗೆ ಭೇಟಿ ನೀಡುತ್ತಿದ್ದೇನೆ. ಜನ-ಜಾನುವಾರು ಹಾನಿ, ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಪರಿಹಾರ ನೀಡುತ್ತೇವೆ. ವಿದ್ಯುತ್ ಕಂಬ, ಟಿಸಿ ಬಿದ್ದರೆ ರಿಪೇರಿ ಮಾಡಲಾಗುವುದು. ರಸ್ತೆಗಳ ದುರಸ್ತೆಗೆ ಸಮಸ್ಯೆ ಆಗುತ್ತಿದೆ ಎಂದು ಹೇಳಿದರು.
ಕಳೆದ 42 ದಿನಗಳಿಂದ ಪ್ರತಿ ದಿನ ಬೆಳಗಾವಿಯಲ್ಲಿ ಮಳೆ ಬರುತ್ತಿದೆ. ಅಂಗನವಾಡಿ ಕೇಂದ್ರಗಳಿಗೂ ರಜೆ ನೀಡಲು ಹೇಳಿದ್ದೇನೆ. ಶಾಲೆಗಳಿಗೂ 10 ದಿನ ರಜೆ ಕೊಡಲಾಗಿತ್ತು. ಅಗತ್ಯಬಿದ್ದರೆ ಮತ್ತೆ ರಜೆ ನೀಡಲಾಗುವುದು. ಹವಾಮಾನ ಇಲಾಖೆ ಮುಂದಿನ ವಾರ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ. ಕಂದಾಯ, ಅರಣ್ಯ, ನೀರಾವರಿ, ವಿದ್ಯುತ್ ಸೇರಿ ಎಲ್ಲಾ ಇಲಾಖೆಗಳಿಗೆ ಪ್ರವಾಹ ನಿರ್ವಹಣೆ ವಿಚಾರವಾಗಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದ್ದೇನೆ ಎಂದು ಸಿಎಂ ತಿಳಿಸಿದರು.
ಖಾನಾಪುರ ಕಾಡಂಚಿನ ಗ್ರಾಮಗಳ ಸ್ಥಳಾಂತರಕ್ಕೆ ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲಾ ಶಾಶ್ವತ ಪರಿಹಾರ ಕೈಗೊಳ್ಳುತ್ತೇವೆ. ಇದಕ್ಕೆ ಜನ ಕೂಡ ಸಹಕಾರ ಕೊಡಬೇಕು. ಒಂದಿಷ್ಟು ಜನ ಅವರ ಜಾಗ ಬಿಟ್ಟು ಬರುವುದಿಲ್ಲ ಎನ್ನುತ್ತಿದ್ದಾರೆ ಎಂದರು.
ಬಿದ್ದ ಮನೆಗಳಿಗೆ 5 ಲಕ್ಷ ಪರಿಹಾರವನ್ನು ಯಡಿಯೂರಪ್ಪ ಸಿಎಂ ಇದ್ದಾಗ ಕೊಟ್ಟಿದ್ದರು. ಆಗ ಸ್ವಲ್ಪ ದುರುಪಯೋಗಯಾ ಆಗಿತ್ತು. ಎಲ್ಲರಿಗೂ ಸಿಗಲಿಲ್ಲ. ಅನೇಕರಿಗೆ 1ನೇ ಕಂತಷ್ಟೇ ಸಿಕ್ಕಿತ್ತು. ಇನ್ನುಳಿದ ಕಂತುಗಳ ಹಣ ಸಿಗಲೇ ಇಲ್ಲ. ಹಾಗಾಗಿ, ನಾವು ಮನೆ ಕೊಡುತ್ತೇವೆ. ಅದರ ಜೊತೆಗೆ ಎನ್ಡಿಆರ್ಎಫ್ ರೂಲ್ಸ್ ಪ್ರಕಾರ 1.20 ಲಕ್ಷ ರೂ. ಕೊಡುತ್ತೇವೆ. ಇನ್ನು, ಗೃಹ ಲಕ್ಷ್ಮಿ ಹಣವನ್ನೂ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಬೆಳಗಾವಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಇಂದು ಸಿದ್ದರಾಮಯ್ಯ ಭೇಟಿ: ಸಂತ್ರಸ್ತರಿಗೆ ಧೈರ್ಯ ತುಂಬಲಿರುವ ಸಿಎಂ - CM To Visit Belagavi