ಕರ್ನಾಟಕ

karnataka

By ETV Bharat Karnataka Team

Published : Feb 27, 2024, 12:58 PM IST

Updated : Feb 27, 2024, 2:22 PM IST

ETV Bharat / state

ಜೆಡಿಎಸ್​ಗೆ ಆತ್ಮಸಾಕ್ಷಿ ಮತಗಳು ಇವೆಯಾ ?: ಸಿಎಂ ಸಿದ್ದರಾಮಯ್ಯ ಟೀಕೆ

ದಿವಂಗತ ಕೆ.ಸಿ.ರೆಡ್ಡಿ ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ರೆಡ್ಡಿ ಅವರ ಪ್ರತಿಮೆಯ ಬಳಿ ಇರುವ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ರಾಜ್ಯಸಭೆ ಚುನಾವಣೆ ಕುರಿತು ಪ್ರತಿಕ್ರಿಯಿಸಿದರು.

bengaluru
ಕೆ.ಸಿ.ರೆಡ್ಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ

ಸಿಎಂ ಸಿದ್ದರಾಮಯ್ಯ ಹೇಳಿಕೆ

ಬೆಂಗಳೂರು:ರಾಜ್ಯಸಭೆಚುನಾವಣೆಯಲ್ಲಿಜೆಡಿಎಸ್​ಗೆ ಗೆಲ್ಲಲು 45 ಮತಗಳ ಅಗತ್ಯವಿದೆ. ಆದರೆ, ಅಷ್ಟು ಮತಗಳು ಅವರ ಬಳಿ ಇದೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆಡ್ಡಿ ಅವರ ಪುಣ್ಯತಿಥಿಯ ನಿಮಿತ್ತ ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆ ಬಳಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆ ಬಗ್ಗೆ ಮಾತನಾಡಿ ಎಲ್ಲರೂ ಗೆಲ್ಲಬೇಕು ಎಂದಲೇ ಸ್ಪರ್ಧೆ ಮಾಡುತ್ತಾರೆ ಎಂದರು. ಆ ಬಳಿಕ ಜೆಡಿಎಸ್​ನವರು ಆತ್ಮಸಾಕ್ಷಿ ಮತಗಳಿವೆ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜೆಡಿಎಸ್​​​​​ಗೆ ಆತ್ಮಸಾಕ್ಷಿ ಎಂಬ ಮತಗಳು ಇವೆಯಾ ಎಂದು ಪ್ರಶ್ನಿಸಿದರು.

ಶಾಸಕರಿಗೆ ಆಮಿಷ : ಅಡ್ಡಮತ ಹಾಕುವ ವಿಚಾರವಾಗಿ ಕಾನೂನು ತಿದ್ದಿ ಎಫ್.ಐ.ಆರ್. ಹಾಕಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಅವರಿಗೆ ಮತವಿಲ್ಲದಿದ್ದರೂ ಅಭ್ಯರ್ಥಿಯನ್ನು ಏಕೆ ನಿಲ್ಲಿಸಬೇಕಿತ್ತು, ಶಾಸಕರಿಗೆ ಆಮಿಷಗಳನ್ನು ಏಕೆ ಒಡ್ಡುತ್ತಿದ್ದಾರೆ. ಬೆದರಿಕೆ ಹಾಕಿರುವುದಕ್ಕಾಗಿಯೇ ಈ ಎಫ್.ಐ.ಆರ್ ಹಾಕಲಾಗಿದೆ ಎಂದರು. ಇನ್ನು ನಮ್ಮ ಪಕ್ಷದ ಮೂವರು ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಅವರು ಇದೇ ವೇಳೆ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಕೆ.ಸಿ. ರೆಡ್ಡಿ ಅವರಿಗಿದ್ದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಕ್ರಮ:ಆಡಳಿತ ಹಾಗೂ ರಾಜ್ಯದ ಬಗ್ಗೆ ಕೆ.ಸಿ. ರೆಡ್ಡಿ ಅವರಿಗಿದ್ದ ಕನಸು ನನಸು ಮಾಡುವ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಕೆ.ಸಿ.ರೆಡ್ಡಿ ಅವರ 48ನೇ ಪುಣ್ಯ ತಿಥಿಯನ್ನು ಇಂದು ಆಚರಿಸಲಾಗುತ್ತಿದೆ. ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಗಳು. ರಾಜ್ಯದ ಬೆಳವಣಿಗೆಗೆ ಅಡಿಪಾಯ ಹಾಕಿದವರು ಅವರು. ಸ್ವಾತಂತ್ರ್ಯ ಹೋರಾಟಗಾರರಾಗಿ ತಮ್ಮನ್ನು ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಕರ್ನಾಟಕ ಇಂದು ಆರ್ಥಿಕವಾಗಿ ಸಧೃಢವಾಗಿದ್ದರೆ ಅವರು ಹಾಕಿದ ಬುನಾದಿಯೇ ಕಾರಣ ಎಂದು ನೆನಪಿಸಿಕೊಟ್ಟರು. 1950ನೇ ಇಸವಿಯಲ್ಲಿ ಸಂವಿಧಾನ ಜಾರಿಗೆ ಬಂದ ನಂತರ ಮೊದಲ ಚುನಾವಣೆಯಲ್ಲಿ ಕೆ.ಸಿ. ರೆಡ್ಡಿಯವರೇ ಮೊದಲ ಮುಖ್ಯ ಮಂತ್ರಿಯಾದರು. ಅವರನ್ನು ಸ್ಮರಿಸಿ ಗೌರವಿಸುವ ಕೆಲಸವನ್ನು ಸರ್ಕಾರ ಮಾಡಿದೆ ಎಂದು ಸಿಎಂ ಹೇಳಿದರು.

ಇದನ್ನೂ ಓದಿ:ರಾಜ್ಯಸಭೆ ಚುನಾವಣೆ: ಸಿಎಂ ಸಿದ್ದರಾಮಯ್ಯರಿಂದ ಮತ ಚಲಾವಣೆ, ಗೆಲುವಿನ ವಿಶ್ವಾಸ

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕ್ಯಾಸಂಬಳ್ಳಿಯ ಸಿರಿವಂತ ಭೂಮಾಲೀಕ ದಂಪತಿ ಗಂಗೋಜಮ್ಮ ಹಾಗೂ ವೆಂಕಟರೆಡ್ಡಿ ಮಗನಾಗಿ ಜನಿಸಿದವರು ಕೆ ಸಿ ರೆಡ್ಡಿ. 1902 ಮೇ 4ರ ಅವರ ಜನ್ಮದಿನ. ಕಾರ್ಮಿಕರು, ಬಡವರು ಹಾಗೂ ನಿರ್ಗತಿಕರ ಪರವಾಗಿ ಕೆ ಸಿ ರೆಡ್ಡಿ ಅವರು ಹೋರಾಟ ನಡೆಸಿದರು. ಕೋಲಾರ, ಬೆಂಗಳೂರು, ಚನ್ನೈ ನಗರಗಳಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಅಭ್ಯಾಸ ಮಾಡಿದ ರೆಡ್ಡಿ ಅವರು ಬಳಿಕ ವಕೀಲರಾದವರು. ವಕೀಲಿಕೆ ವೃತ್ತಿ ಮಾಡುತ್ತಿದ್ದಾಗಲೇ ರೆಡ್ಡಿ ಅವರು ಚಿನ್ನದ ಗಣಿ ಕಾರ್ಮಿಕರ ಹೋರಾಟಕ್ಕೆ ಧುಮುಕಿದ್ದರು.

Last Updated : Feb 27, 2024, 2:22 PM IST

ABOUT THE AUTHOR

...view details