ಕರ್ನಾಟಕ

karnataka

ETV Bharat / state

ಭ್ರಷ್ಟ ಸುಧಾಕರ್ ತನಿಖೆಯ ನಂತರ ಜೈಲಿಗೆ ಹೋಗಲಿದ್ದಾರೆ: ಸಿಎಂ‌ ಸಿದ್ದರಾಮಯ್ಯ - CM Siddaramaiah campaign - CM SIDDARAMAIAH CAMPAIGN

ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರ ಸಿಎಂ‌ ಸಿದ್ದರಾಮಯ್ಯ, ಭರ್ಜರಿ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.

ಸಿಎಂ‌ ಸಿದ್ದರಾಮಯ್ಯ ಭರ್ಜರಿ ಪ್ರಚಾರ
ಸಿಎಂ‌ ಸಿದ್ದರಾಮಯ್ಯ ಭರ್ಜರಿ ಪ್ರಚಾರ

By ETV Bharat Karnataka Team

Published : Apr 19, 2024, 9:16 AM IST

Updated : Apr 19, 2024, 10:00 AM IST

ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರ ಸಿಎಂ‌ ಸಿದ್ದರಾಮಯ್ಯ ಪ್ರಚಾರ

ಚಿಕ್ಕಬಳ್ಳಾಪುರ: ಬಿಜೆಪಿ ಅಭ್ಯರ್ಥಿ ಸುಧಾಕರ್ ತನಿಖೆಯ ನಂತರ ಜೈಲಿಗೆ ಹೋಗಲಿದ್ದು, ಭ್ರಷ್ಟ ಬಿಜೆಪಿ ಅಭ್ಯರ್ಥಿಯನ್ನು ಮತ್ತೆ ಸೋಲಿಸುವಂತೆ ಸಿಎಂ‌ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರ ಮತಯಾಚನೆ ನಡೆದರು. ನಗರದ ಪಿಳ್ಳಪ್ಪ ಕಾಂಪ್ಲೆಕ್ಸ್​ನಿಂದ ಶಿಡ್ಲಘಟ್ಟ ವೃತ್ತದವರೆಗೂ ಭರ್ಜರಿ ರೊಡ್ ಶೋ ನಡೆಸಿದ ನಂತರ ಅವರು ಮಾತನಾಡಿದರು.

ರಕ್ಷಾ ರಾಮಯ್ಯ ಅವರಿಗೆ ಕ್ಷೇತ್ರದ ಜನತೆ ಆಶೀರ್ವಾದ ಮಾಡಬೇಕು. ಈ‌ ತಿಂಗಳು 26 ಚುನಾವಣೆ ನಡೆಯಲಿದ್ದು ಭ್ರಷ್ಟ ಬಿಜೆಪಿ ಅಭ್ಯರ್ಥಿಯನ್ನು ಮತ್ತೆ ಸೋಲಿಸುವಂತೆ ಸಿಎಂ‌ ಸಿದ್ದರಾಮಯ್ಯ ಕರೆ ನೀಡಿದರು. ಎನ್​ಡಿಎ ಅಭ್ಯರ್ಥಿಯಾಗಿರುವ ಸುಧಾಕರ್ ಭ್ರಷ್ಟ ಮಂತ್ರಿಯಾಗಿದ್ದು, ಹಣ ಲೂಟಿ ಮಾಡಿದ್ದಾರೆ ಎಂದು ವಿಧಾನ‌ಸಭೆ ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳೆಹಿಸಿದ್ದೀರಿ. ಈಗ ಮತ್ತೆ ಪ್ರಭಾವ ಬಳಸಿ ಲೋಕಸಭೆ ಸ್ಪರ್ಧೆ ಮಾಡಿದ್ದಾರೆ. ನೀವೆಲ್ಲ ತೀರ್ಮಾನ ಮಾಡಬೇಕಾಗಿದೆ. ಒಮ್ಮೆ ತಿರಸ್ಕಾರ ಮಾಡಿದ ಭ್ರಷ್ಟನನ್ನು ಲೋಕಸಭೆ ಕಳುಹಿಸಿಬೇಕಾ ಅಂತಾ ಯೋಚಿಸಬೇಕಾಗಿದೆ. ಮಂತ್ರಿಯಾಗಿದ್ದ ವೇಳೆ ಬಹಳಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ಇದರ ಬಗ್ಗೆ ಒಂದು ನ್ಯಾಯಾಂಗ ಆಯೋಗ ರಚನೆಯಾಗಿದೆ. ಅದು‌ ತನಿಖೆ ನಡೆಯುತ್ತಿದೆ. ನನಗೆ ಇದ್ದ ಮಾಹಿತಿ ಪ್ರಕಾರ ಎನ್​ಡಿಎ ಅಭ್ಯರ್ಥಿ ಮಂತ್ರಿ ವಿರುದ್ದ ಸಾಕಷ್ಟು ಸಾಕ್ಷ್ಯದಾರಗಳಿವೆ. ತನಿಖೆ ಪೂರ್ಣ ಆದ ಮೇಲೆ ತಪ್ಪಿತಸ್ಥರು ಎಂದು ಸಾಬೀತಾಗುತ್ತೆ. ನೂರಕ್ಕೆ ನೂರು ಜೈಲಿಗೆ ಹೋಗಲಿದ್ದಾರೆ. ಆದರಿಂದ ಈ‌ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಮತ್ತೊಮ್ಮೆ ಸೋಲಿಸಿ ಎಂದು ಸಿಎಂ‌ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದರು.

ಜನತಾ ನ್ಯಾಯಾಲಯ ಕೊಡುವ ಶಿಕ್ಷೆ ಕಾನೂನಿಗಿಂತ ಕೊಡುವ ದೊಡ್ಡ ಶಿಕ್ಷಯಾಗಿದೆ. ನೀವು ಅಂತಹ ಅಭ್ಯರ್ಥಿಯನ್ನು ಸೋಲಿಸಿ ರಕ್ಷಾ ರಾಮಯ್ಯ ಅವರನ್ನು‌ ಗೆಲ್ಲಿಸಿದರೆ ಅದೇ ಅವರಿಗೆ ದೊಡ್ಡ ಶಿಕ್ಷೆಯಾಗುತ್ತೆ. ಭ್ರಷ್ಟರು ಲೋಕಸಭೆ ಹೋದ್ರೆ ಇನ್ನೂ ಹೆಚ್ಚು ಭ್ರಷ್ಟಾಚಾರ ನಡೆಯುತ್ತೆ. ಆದರಿಂದ 26 ರಂದು ನೀವು ಕೊಡುವ ತೀರ್ಪು ಮಹತ್ವದ್ದು. ನಿಮ್ಮ ಉತ್ಸಾಹ ನೋಡಿದರೆ ನೂರಕ್ಕೆ ನೂರು ರಕ್ಷಾ ರಾಮಯ್ಯ ಗೆಲ್ಲುತ್ತಾರೆ. ರಕ್ಷಾ ರಾಮಯ್ಯ ಅವರನ್ನು ನೀವೆಲ್ಲಾ ಗೆಲ್ಲಿಸುತ್ತೀರಾ ಎಂದು ನಂಬಿಕೆ‌ ಇದೆ. ಸುಧಾಕರ್ ಸೋತರೆ ಮಾತ್ರ ಈ ಕ್ಷೇತ್ರ ಉಳಿಯುತ್ತೆ ಎಂದರು.

ರೊಡ್ ಶೋ ವೇಳೆ ಸಚಿವರಾದ ಎಂಸಿ‌ ಸುಧಾಕರ್, ಕೃಷ್ಣಬೈರೇಗೌಡ, ಶಾಸಕ ಪ್ರದೀಪ್ ಈಶ್ವರ್, ನಾಜೀರ್ ಅಹಮದ್, ಎಂ.ಅರ್ ಸೀತಾರಾಂ, ಮಾಜಿ ಶಾಸಕರುಗಳಾದ ಬಚ್ಚೇಗೌಡ, ಮುನಿಯಪ್ಪ, ಅನುಸೂಯಮ್ಮ, ಸಂಪಂಗಿ ಇನ್ನಿತರ ಪ್ರಮುಖ ಮುಖಂಡರು ಇದ್ದರು.

ಇದನ್ನೂ ಓದಿ:ಕಾಂಗ್ರೆಸ್​ ಅಭ್ಯರ್ಥಿಗಳು ಸೋತರೆ ಸಿಎಂ ಸಿದ್ದರಾಮಯ್ಯ ಸ್ಥಾನಕ್ಕೆ ಕಂಟಕ: ಸಚಿವ ಬೈರತಿ ಸುರೇಶ್​ - Byrathi Suresh

Last Updated : Apr 19, 2024, 10:00 AM IST

ABOUT THE AUTHOR

...view details