ಕರ್ನಾಟಕ

karnataka

ETV Bharat / state

ಮಾಜಿ ಪ್ರಿಯತಮೆ ಭೇಟಿ ವೇಳೆ ಗುಂಡಿನ ದಾಳಿ ಪ್ರಕರಣ: ಮೂವರು ವಶಕ್ಕೆ- ಪೊಲೀಸ್ ಆಯುಕ್ತರ ಮಾಹಿತಿ - SHOOTOUT CASE

ಬೆಳಗಾವಿಯಲ್ಲಿ ಯುವಕನ ಮೇಲೆ ನಡೆದ ಗುಂಡಿನ ದಾಳಿಯ ಬಗ್ಗೆ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಪ್ರತಿಕ್ರಿಯಿಸಿದ್ದಾರೆ.

COMMISSIONER REACT ON SHOOTOUT CASE
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Nov 29, 2024, 8:18 AM IST

Updated : Nov 29, 2024, 8:56 AM IST

ಬೆಳಗಾವಿ: "ಮಹಾಂತೇಶ ನಗರದಲ್ಲಿ ಬುಧವಾರ ನಡೆದ ಗುಂಡಿನ ದಾಳಿ ಸಂಬಂಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಿಸಿದ್ದೇವೆ. ಗಾಯಾಳು ಯುವಕ ಪ್ರಣೀತ್ ಮತ್ತು ಆತನ ಸ್ನೇಹಿತೆಯ ಕಡೆಯಿಂದ ಎರಡು ಕೇಸ್ ದಾಖಲಾಗಿದೆ. ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವೆ" ಎಂದು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹೇಳಿದ್ದಾರೆ.

"ಪ್ರಣೀತ್ ತನ್ನ ಹಳೆಯ ಪ್ರಿಯತಮೆಯ ಮನೆಗೆ ಊಟಕ್ಕೆ ಹೋಗಿದ್ದ. ಈ ವೇಳೆ ಪ್ರೀತಿಯಲ್ಲಿ ತೊಂದರೆ ಆಗಿದೆ ಅಂತಾ ಹೇಳಿದ್ದಾನೆ. ಆಗ ಆಕೆ ಪ್ರಣೀತ್‌ನ ಪ್ರಿಯತಮೆಗೆ ಕರೆ ಮಾಡಿ ಆಕೆಯನ್ನೂ ಮನೆಗೆ ಕರೆಸಿಕೊಂಡಿದ್ದಾಳೆ. ಆಕೆ ತನ್ನ ಸಹೋದರರ ಜೊತೆಗೆ ಬಂದಿದ್ದಳು. ಈ ವೇಳೆ ಗುಂಡು ಹಾರಿಸಿ ಗಲಾಟೆ ಮಾಡಿ ಎಸ್ಕೇಪ್ ಆಗಿದ್ದಾರೆ" ಎಂದು ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹೇಳಿದ್ದಾರೆ.

ಪ್ರಣೀತ್ ಪ್ರಿಯತಮೆ ಸೇರಿ ಮೂವರನ್ನು ವಶಕ್ಕೆ ಪಡೆದಿದ್ದೇವೆ. ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಪ್ರೀತಿ ವಿಚಾರಕ್ಕೆ ಗಲಾಟೆ ಆಗಿರುವ ಮಾಹಿತಿ ಇದೆ" ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ:ಪ್ರೇಮ ಪ್ರಕರಣ: ಬೆಳಗಾವಿಯಲ್ಲಿ ಯುವಕನ ಮೇಲೆ ಗುಂಡಿನ ದಾಳಿ- ಪೊಲೀಸರು ಹೇಳಿದ್ದಿಷ್ಟು

Last Updated : Nov 29, 2024, 8:56 AM IST

ABOUT THE AUTHOR

...view details