ಕರ್ನಾಟಕ

karnataka

ETV Bharat / state

ಕೋಟೆನಾಡಲ್ಲಿ ಮತ್ತೆ ಅರಳಿದ ಕಮಲ; ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಗೋವಿಂದ​ ಕಾರಜೋಳ್​ - BJP Govinda Karajola won - BJP GOVINDA KARAJOLA WON

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ್​ ಕಾರಜೋಳ 6 ಲಕ್ಷಕ್ಕೂ ಅಧಿಕ ಮತಗಳಿಸಿ ಕಾಂಗ್ರೆಸ್ ಅಭ್ಯರ್ಥಿ ​ಬಿ.ಎನ್​. ಚಂದ್ರಪ್ಪ ವಿರುದ್ಧ ಜಯ ಗಳಿಸಿದ್ದಾರೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ (ETV Bharat)

By ETV Bharat Karnataka Team

Published : Jun 4, 2024, 8:52 AM IST

Updated : Jun 4, 2024, 3:15 PM IST

ಚಿತ್ರದುರ್ಗ ಕ್ಷೇತ್ರ:ಓಬವ್ವನ ನಾಡು ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ್​ ಕಾರಜೋಳ್ 6,84,890 ಮತ ಗಳಿಸಿಕಾಂಗ್ರೆಸ್ ಅಭ್ಯರ್ಥಿ ​ಬಿ.ಎನ್​. ಚಂದ್ರಪ್ಪ ಅವರನ್ನು 48,121 ಮತಗಳ ಅಂತರದಿಂದ ಸೋಲಿಸಿದ್ದಾರೆ. ಈ ಮೂಲಕಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತದಾರರು ಒಬ್ಬರಿಗೆ ಒಂದೇ ಬಾರಿ ಬೆಂಬಲನೀಡುತ್ತಾರೆ ಎಂಬ ಮಾತು ಮತ್ತೆ ನಿಜವಾಗಿದೆ. ಬಿಜೆಪಿ ಅಭ್ಯರ್ಥಿ ಗೋವಿಂದ್​ ಕಾರಜೋಳ್ ಬಾಗಲಕೋಟೆ ಜಿಲ್ಲೆಯರಾಗಿದ್ದರೂ ಕೋಟೆ ನಾಡಲ್ಲಿ ಕಮಲ ಅರಳಿಸಿದ್ದಾರೆ.

ಬಿಜೆಪಿ ಗೋವಿಂದ​ ಕಾರಜೋಳಗೆ ಗೆಲುವು (ETV Bharat)

ಗೆಲುವು 6,84,890ಮತಗಳನ್ನು ಪಡೆದಿದ್ದರೆ, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್​ನ ​ಬಿ.ಎನ್​. ಚಂದ್ರಪ್ಪ ಅವರು 636769ಮತಗಳನ್ನು ಪಡೆದು ಸೋತಿದ್ದಾರೆ. ಬಿಜೆಪಿಯ ಕಾರಜೋಳ್​ 48,121ಮತಗಳಅಂತರದಲ್ಲಿ ವಿಜಯ ಪತಾಕೆ ಹಾರಿಸಿದ್ದಾರೆ.

ಚಿತ್ರದುರ್ಗ ಕ್ಷೇತ್ರ ರಾಜಕೀಯ ಇತಿಹಾಸ:ಚಿತ್ರದುರ್ಗ ಪರಿಶಿಷ್ಟ ಜಾತಿ(SC) ಮೀಸಲು ಕ್ಷೇತ್ರ. ಈ ಕ್ಷೇತ್ರವು ಚಿತ್ರದುರ್ಗ ಜಿಲ್ಲೆ ಹಾಗು ತುಮಕೂರು ಜಿಲ್ಲೆಯ ಕೆಲ ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಕ್ಷೇತ್ರದ ವ್ಯಾಪ್ತಿಗೆ ಮೊಳಕಾಲ್ಮೂರು, ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ, ಹಿರಿಯೂರು, ಹೊಳಲ್ಕೆರೆ, ಶಿರಾ ಮತ್ತು ಪಾವಗಡ ಸೇರಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.

1952ರ ಮೊದಲ ಚುನಾವಣೆಯಲ್ಲಿ ಸಂಸತ್‌ಗೆ ಇಲ್ಲಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಆಯ್ಕೆಯಾದವರು ರಾಜ್ಯದ ಮಾಜಿ ಸಿಎಂ ಎಸ್. ನಿಜಲಿಂಗಪ್ಪ. 1957ರಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದ ಜೆ. ಮೊಹಮ್ಮದ್ ಇಮಾಮ್ ಗೆದ್ದಿದ್ದರು. 1962ರಲ್ಲಿ ಕಾಂಗ್ರೆಸ್‌ನ ವೀರಬಸಪ್ಪ ಗೆದ್ದರೆ, 1967ರಲ್ಲಿ ಜೆ ಮೊಹಮ್ಮದ್ ಇಮಾಮ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಗಳಿಸಿದ್ದರು. 1991ರ ವರೆಗೂ ಇಲ್ಲಿ ಕಾಂಗ್ರೆಸ್ ಸತತವಾಗಿ ಗೆಲುವು ದಾಖಲಿಸಿತ್ತು.

1996ರಲ್ಲಿ ಜನತಾದಳದ ಕೋದಂಡರಾಮಯ್ಯ ಗೆದ್ದಿದ್ದರು. 1998ರಲ್ಲಿ ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. 1999ರಲ್ಲಿ ಮತ್ತೆ ಜನತಾದಳ ಇಲ್ಲಿ ಗೆಲುವು ದಾಖಲಿಸಿತ್ತು. ನಟ ಶಶಿಕುಮಾರ್ ಸಂಸತ್‌ಗೆ ಆಯ್ಕೆಯಾಗಿದ್ದರು. 2004ರಲ್ಲಿ ಇದು ಮತ್ತೆ ಕಾಂಗ್ರೆಸ್ ವಶವಾದರೆ, 2009ರಲ್ಲಿ ಬಿಜೆಪಿಯ ಜನಾರ್ದನ ಸ್ವಾಮಿ ಜಯದ ನಗೆ ಬೀರಿದ್ದರು. 2014ರಲ್ಲಿ ಕಾಂಗ್ರೆಸ್‌ನ ಬಿ.ಎನ್. ಚಂದ್ರಪ್ಪ ಜಯದ ಮಾಲೆ ಧರಿಸಿದ್ದರು.

2019ರ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರವು ಭಾರೀ ಪೈಪೋಟಿಗೆ ಸಾಕ್ಷಿಯಾಗಿತ್ತು. 2019ರಲ್ಲಿ ಇದು ಮತ್ತೆ ಬಿಜೆಪಿಯ ಪಾಲಾಗಿತ್ತು. ಚಿತ್ರದುರ್ಗ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎ. ನಾರಾಯಣಸ್ವಾಮಿ 80,178 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಕಾಂಗ್ರೆಸ್​ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ 5,46,017 ಮತಗಳನ್ನು ಗಳಿಸಿದ್ದರು. ಇದೀಗ ಮತ್ತೆ ಚಿತ್ರದುರ್ಗ ಬಿಜೆಪಿ ತೆಕ್ಕೆಗೆ ಬಂದಿದೆ.

ಇದನ್ನೂ ಓದಿ:ಇಂದು ಲೋಕಸಭಾ ಚುನಾವಣೆಯ 'ಮಹಾ ತೀರ್ಪು': ಇಡೀ ವಿಶ್ವದ ಚಿತ್ತ ಭಾರತದತ್ತ! - Lok Sabha Election Results 2024

Last Updated : Jun 4, 2024, 3:15 PM IST

ABOUT THE AUTHOR

...view details