ಬಳ್ಳಾರಿ: ಮನೆಯ ಕಾರ್ಯಕ್ರಮಕ್ಕೆಂದು ಮಾಡಿದ್ದ ಸಾಂಬಾರು ಪಾತ್ರೆಗೆ ಬಿದ್ದು ಮಗು ಮೃತಪಟ್ಟಿರುವ ಘಟನೆ ಸಂಡೂರಿನಲ್ಲಿ ನಡೆದಿದೆ. ಸಂಡೂರು ತಾಲ್ಲೂಕಿನ ಚೋರನೂರು ಹೋಬಳಿಯ ಎಚ್.ಕೆ.ಹಳ್ಳಿ ಗ್ರಾಮದಲ್ಲಿ ಮಂಜುನಾಥ ಮತ್ತು ಹುಲಿಗೆಮ್ಮ ದಂಪತಿಯ 2 ವರ್ಷದ ಸಮರ್ಥ ಮೃತಪಟ್ಟ ಬಾಲಕ.
ಬಳ್ಳಾರಿ: ಸಾಂಬಾರು ಪಾತ್ರೆಗೆ ಬಿದ್ದು ಮಗು ಸಾವು - Child Death
ಹಪ್ಪಳ ತೆಗೆದುಕೊಳ್ಳಲು ಹೋಗಿ ಪಕ್ಕದಲ್ಲೇ ಇದ್ದ ಸಾಂಬಾರು ಪಾತ್ರೆಗೆ ಬಿದ್ದು 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿ: ಸಾಂಬಾರು ಪಾತ್ರೆಯಲ್ಲಿ ಬಿದ್ದು ಮಗು ಸಾವು
Published : Mar 8, 2024, 8:22 AM IST
ಬಿಸಿ ಸಾಂಬಾರು ತುಂಬಿದ್ದ ಪಾತ್ರೆ ಪಕ್ಕದಲ್ಲಿಟ್ಟಿದ್ದ ಹಪ್ಪಳ ತೆಗೆದುಕೊಳ್ಳಲು ಬಂದ ಮಗು ಪಾತ್ರೆಯೊಳಗೆ ಬಿದ್ದಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಪ್ರಯೋಜನವಾಗಲಿಲ್ಲ. ತೀವ್ರ ಸುಟ್ಟ ಗಾಯಗಳಿಂದ ಮಗು ಕೊನೆಯುಸಿರೆಳೆದಿದೆ.
ಇದನ್ನೂ ಓದಿ:ಬೆಂಗಳೂರು: ಪ್ರಿ-ಸ್ಕೂಲ್ 3ನೇ ಮಹಡಿಯಿಂದ ಬಿದ್ದು ಗಾಯಗೊಂಡಿದ್ದ ಹೆಣ್ಣು ಮಗು ಸಾವು