ಕರ್ನಾಟಕ

karnataka

ETV Bharat / state

ಚಿಕ್ಕೋಡಿ: ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದ ಬಡ ರೈತನ ಮಗ - SSLC result published - SSLC RESULT PUBLISHED

ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕು ಶೇಡಬಾಳ ಗ್ರಾಮದ ಸುಬಲಸಾಗರ ಪ್ರೌಢಶಾಲೆ ವಿದ್ಯಾರ್ಥಿ ಸಿದ್ಧಾಂತ್​ ನಾಯಿಕಬಾ ಗಡಗೆ ಅವರು ಎಸ್​ ಎಸ್​​ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ರ್ಯಾಂಕ್​ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

Siddanta Naikaba Gadage
ವಿದ್ಯಾರ್ಥಿ ಸಿದ್ಧಾಂತ್​ ನಾಯಿಕಬಾ ಗಡಗೆ ಅವರನ್ನು ಶಿಕ್ಷಣ ಇಲಾಖೆಯಿಂದ ಸನ್ಮಾನಿಸಲಾಯಿತು. (Etv Bharat)

By ETV Bharat Karnataka Team

Published : May 9, 2024, 4:08 PM IST

Updated : May 9, 2024, 4:28 PM IST

ಮಾಧ್ಯಮದವರೊಂದಿಗೆ ಸಂತಸ ಹಂಚಿಕೊಂಡ ಸಿದ್ಧಾಂತ್​ ನಾಯಿಕಬಾ ಗಡಗೆ (ETV Bharat)

ಚಿಕ್ಕೋಡಿ:ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶಇಂದು ಪ್ರಕಟವಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವಿದ್ಯಾರ್ಥಿಯೋರ್ವ 625ಕ್ಕೆ 624 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ ರ್ಯಾಂಕ್​ ಪಡೆದು ಜಿಲ್ಲೆಯ ಗರಿಮೆಯನ್ನು ಹೆಚ್ಚಿಸಿದ್ದಾರೆ.

ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ಸುಬಲಸಾಗರ ಪ್ರೌಢಶಾಲೆಯ ವಿದ್ಯಾರ್ಥಿ ಸಿದ್ಧಾಂತ್​ ನಾಯಿಕಬಾ ಗಡಗೆ ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಬಡ ರೈತ ಕುಟುಂಬದಲ್ಲಿ ಹುಟ್ಟಿದ ಈ ವಿದ್ಯಾರ್ಥಿಯ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ್ ಕುಮಾರ್ ಹಂಚಾಟೆ ಅವರು ವಿದ್ಯಾರ್ಥಿ ಸಿದ್ಧಾಂತ್​ನನ್ನು ಇಂದು ಸನ್ಮಾನಿಸಿ ಅಭಿನಂದಿಸಿದರು.

ಬಡತನದಲ್ಲಿಯೂ ಪೋಷಕರು ಪ್ರೋತ್ಸಾಹ:ವಿದ್ಯಾರ್ಥಿ ಸಿದ್ಧಾಂತ್​ ಮಾಧ್ಯಮದವರೊಂದಿಗೆ ಮಾತನಾಡಿ, ನನ್ನ ಸಾಧನೆಗೆ ಶಿಕ್ಷಕರು, ಪೋಷಕರು ಕಾರಣ. ನಾನು ನಿರಂತರ ಪ್ರಯತ್ನ ಮಾಡಿದ್ದೇನೆ‌. ಪ್ರತಿದಿನ 7 ರಿಂದ 8ಗಂಟೆ ಕಾಲ ಆಸಕ್ತಿಯಿಂದ ಓದುತ್ತಿದ್ದೆ. ಈ ರೀತಿ ಓದಿದ ಪ್ರತಿಫಲವೇ ಇಂದು ರಾಜ್ಯಕ್ಕೆ ದ್ವಿತೀಯ ಸ್ಥಾನ ಬರಲು ಸಾಧ್ಯವಾಗಿದೆ. ಬಡತನದಲ್ಲಿಯೂ ಕೂಡ ಪೋಷಕರು ನನ್ನ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಸಂಪೂರ್ಣ ಪ್ರೋತ್ಸಾಹ ನೀಡಿದ್ದಾರೆ ಎಂದು ವಿದ್ಯಾರ್ಥಿ ಸಂತಸ ಹಂಚಿಕೊಂಡಿದ್ದಾನೆ.

ನಾನು ಮೊಬೈಲ್​ನ್ನು ವಿದ್ಯಾಭ್ಯಾಸಕ್ಕೆ ಅಷ್ಟೇ ಬಳಸುತ್ತಿದ್ದೆನು. ಇದರಿಂದ ಇಷ್ಟು ಉತ್ತಮವಾಗಿ ಅಂಕ ಗಳಿಸಲು ಸಾಧ್ಯವಾಯಿತು. ಮುಂದೆ ನಾನು ವಿಜ್ಞಾನ ವಿಭಾಗದಲ್ಲಿ ವಿದ್ಯಾಭ್ಯಾಸ ಮುಂದುವರಿಸುವ ಆಸಕ್ತಿ ಹೊಂದಿದ್ದೇನೆ ಎಂದು ಹೇಳಿದರು.

ವಿದ್ಯಾರ್ಥಿಯ ಈ ಸಾಧನೆಗೆ ಕಾಗವಾಡ ಶಾಸಕ ರಾಜು ಕಾಗೆ, ಜಿಲ್ಲಾ ಪಂಚಾಯತ್​ ಸಿಇಒ ರಾಹುಲ್ ಶಿಂಧೆ ಹಾಗೂ ಜಿಲ್ಲಾಧಿಕಾರಿ ಡಾ. ನಿತೇಶ್ ಪಾಟೀಲ್ ಸೇರಿದಂತೆ ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಸರ್ಕಾರಿ ಶಾಲೆಯಲ್ಲಿ ಓದಿ ರಾಜ್ಯಕ್ಕೆ ಫಸ್ಟ್ ಬಂದ ರೈತನ ಮಗಳು: IAS ಅಧಿಕಾರಿಯಾಗುವ ಕನಸು - SSLC Topper

Last Updated : May 9, 2024, 4:28 PM IST

ABOUT THE AUTHOR

...view details