ಬೆಂಗಳೂರು:ತಂಗಿಯ ಮದುವೆ ಸಾಲ ತೀರಿಸಲು ನಗರದಲ್ಲಿ ವೃದ್ದೆಯರ ಸರಗಳ್ಳತನ ಮಾಡುತ್ತಿದ್ದ ಅಣ್ಣನನ್ನು ಕೆಂಗೇರಿ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಸಂಜಯ್ ಕುಮಾರ್ ಬಂಧಿತ ಸರಗಳ್ಳ.
ಮದ್ದೂರು ನಿವಾಸಿಯಾಗಿರುವ ಈತ, ಕೆಲವು ವರ್ಷಗಳ ಹಿಂದೆ ತಂಗಿಯ ಮದುವೆಗಾಗಿ ಸಾಲ ಮಾಡಿಕೊಂಡಿದ್ದ. ಆ ಸಾಲ ತೀರಿಸಲಾಗದೆ ತತ್ತರಿಸಿದ್ದ. ಹೀಗಾಗಿ ಹೆಂಡತಿಯೊಂದಿಗೆ ಬೆಂಗಳೂರಿಗೆ ಬಂದು ನೆಲೆಸಿದ್ದಾನೆ. ಜೀವನಕ್ಕಾಗಿ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ. ಈ ನಡುವೆ ಸಾಲದ ಒತ್ತಡ ಹೆಚ್ಚಾಗಿತ್ತು. ಹೀಗಾಗಿ ಅಕ್ರಮವಾಗಿ ಹಣ ಸಂಪಾದಿಸಲು ಫುಡ್ ಡೆಲಿವರಿ ಕೆಲಸ ಮಾಡುವುದರ ಜೊತೆಗೆ ವೃದ್ದೆಯರ ಸರಗಳ್ಳತನದಲ್ಲೂ ತೊಡಗಿದ್ದನು.