ಕರ್ನಾಟಕ

karnataka

ETV Bharat / state

ದಾವಣಗೆರೆ: 1.41 ಕೋಟಿ ರೂ ಮೌಲ್ಯದ ವಸ್ತುಗಳು ವಶಕ್ಕೆ - Davanagere Election Seizures - DAVANAGERE ELECTION SEIZURES

ದಾವಣಗೆರೆ ಜಿಲ್ಲೆಯಲ್ಲಿ ಇದುವರೆಗೆ ವಶಪಡಿಸಿಕೊಳ್ಳಲಾದ ವಸ್ತುಗಳ ಮಾಹಿತಿಯನ್ನು ಚುನಾವಣಾಧಿಕಾರಿ ಡಾ.ವೆಂಕಟೇಶ್ ಎಂ.ವಿ ನೀಡಿದರು.

cash-and-alcohol-seized-
ನಿವೃತ್ತ ಬ್ಯಾಂಕ್ ಮ್ಯಾನೇಜರ್​ ಹಣ ವಶಕ್ಕೆ

By ETV Bharat Karnataka Team

Published : Apr 4, 2024, 10:51 PM IST

ದಾವಣಗೆರೆ:ಲೋಕಸಭಾ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದ ವಿವಿಧ ಪ್ರಕರಣಗಳಲ್ಲಿ ಒಟ್ಟು 1.41 ಕೋಟಿ ಮೌಲ್ಯದ ನಗದು, ಮದ್ಯ, ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದರು.

ಮಾರ್ಚ್ 16ರಿಂದ ನೀತಿ ಸಂಹಿತೆ ಜಾರಿಯಾಗಿದೆ. ಮಾರ್ಚ್ 16ರಿಂದ ಏಪ್ರಿಲ್ 3ರವರೆಗೆ ನೀತಿ ಸಂಹಿತೆ ಉಲ್ಲಂಘನೆಯಡಿ ಕ್ರಮ ಕೈಗೊಳ್ಳಲಾಗಿದೆ. 21 ಫ್ಲೈಯಿಂಗ್ ಸ್ಕ್ವಾಡ್‍ಗಳು, 32 ಚೆಕ್​ಪೋಸ್ಟ್​ಗಳಲ್ಲಿ 24x7 ಮಾದರಿಯಲ್ಲಿ ದಿನದ ಮೂರು ಪಾಳಿಯಲ್ಲಿ ಚುನಾವಣಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದಲ್ಲದೇ 9 ಅಬಕಾರಿ ಜಾಗೃತ ದಳದವರೂ ಕಾರ್ಯನಿರ್ವಹಿಸುತ್ತಿದ್ದು, ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಸ್ತು ನಡೆಸಲಾಗುತ್ತಿದೆ ಎಂದು ಹೇಳಿದರು.

ವಶಪಡಿಸಿಕೊಂಡ ನಗದು ಮೌಲ್ಯದಲ್ಲಿ ಎಫ್.ಎಸ್.ಟಿ.ಯಿಂದ 75,62,100 ರೂಗಳನ್ನು ವಶಕ್ಕೆ ಪಡೆದು ಪರಿಶೀಲನೆಗೆ ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಲಾಗಿದೆ. ಚೆಕ್‍ಪೋಸ್ಟ್​ಗಳಲ್ಲಿ ತಪಾಸಣೆ ಮಾಡಿದಾಗ ದಾಖಲೆ ಇಲ್ಲದೇ ನಗದು ಕೊಂಡೊಯ್ಯುತ್ತಿದ್ದ 51,86,023 ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪೈಕಿ 15,65,780 ರೂ.ಗಳನ್ನು ವಾಪಸ್ ಮರಳಿಸಲಾಗಿದೆ. ಉಳಿದ 36,20,243 ರೂ.ಗಳನ್ನು ಜಿಲ್ಲಾ ಖಜಾನೆಯಲ್ಲಿ ಇರಿಸಲಾಗಿದೆ. ಇದೇ ಅವಧಿಯಲ್ಲಿ ಒಟ್ಟು 2,90,466 ರೂ ಮೌಲ್ಯದ 673.61 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 387.18 ಲೀ ಅಬಕಾರಿ, 286.43 ಲೀ ಪೊಲೀಸ್ ಇಲಾಖೆಯಿಂದ ವಶಪಡಿಸಿಕೊಂಡಿದೆ ಎಂದರು.

10,52,980 ರೂಪಾಯಿ ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಪಡೆದ ವಸ್ತುಗಳಲ್ಲಿ 4630 ಕೆ.ಜಿ ಅಕ್ಕಿ, 17 ಮೊಬೈಲ್, 400 ಟವರ್ ಫ್ಯಾನ್, 56.36 ಗ್ರಾಂ ಚಿನ್ನ, 579 ಸಾರಿ, 51 ಕುಪ್ಪಸ, 300 ಜೀನ್ಸ್ ಪ್ಯಾಂಟ್‍ಗಳು ಸೇರಿವೆ. ಅಬಕಾರಿ ಕಾಯಿದೆ ಉಲ್ಲಂಘನೆಯಡಿ ಎಫ್.ಎಸ್.ಟಿಯಿಂದ 2, ಪೊಲೀಸರಿಂದ 175 ಮತ್ತು ಇತರೆ ಕಾಯಿದೆಗಳಡಿ 1 ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ನಿವೃತ್ತ ಬ್ಯಾಂಕ್ ಮ್ಯಾನೇಜರ್ ಸುಬ್ರಮಣ್ಯ ಆಚಾರ್ಯ

ನಿವೃತ್ತ ಬ್ಯಾಂಕ್ ಮ್ಯಾನೇಜರ್​ ಹಣ ವಶಕ್ಕೆ:ದೇವತಾ ಕಾರ್ಯಕ್ಕೆ ಹಣ ಕೊಂಡೊಯ್ಯುತ್ತಿದ್ದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಇಕ್ಕಟ್ಟಿಗೆ ಸಿಲುಕಿದ ಪ್ರಸಂಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್​ಪೋಸ್ಟ್​ನಲ್ಲಿ ಇವರಿಂದ 85 ಸಾವಿರ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಪಿ. ಎಸ್.ಆಚಾರ್ಯ ಬ್ಯಾಂಕ್​ನಿಂದ ಹಣ ಡ್ರಾ ಮಾಡಿರುವ ದಾಖಲೆ ತೋರಿಸಿದರೂ ಕೂಡ ಎಫ್.ಎಸ್.ಟಿ ಹಾಗೂ ಬಣಕಲ್ ಪೊಲೀಸರು ಹಣ ಸೀಜ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕೊತ್ತದೊಡ್ಡಿ ಚೆಕ್‌ಪೋಸ್ಟ್​​ನಲ್ಲಿ ಹಣ ಜಪ್ತಿ:ರಾಯಚೂರು ತಾಲೂಕಿನ ಕೊತ್ತದೊಡ್ಡಿ ಗ್ರಾಮದಲ್ಲಿ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪೊಲೀಸ್ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಇಂದು ಬೆಳಗ್ಗೆ ಆಂಧ್ರದ ಐಜಿ ಕಡೆಯಿಂದ 5:30 ರ ಸಮಯದಲ್ಲಿ ಬಂದ ಗೂಡ್ಸ್ ವಾಹನವನ್ನು ‌ತಪಾಸಣೆ ಮಾಡಲಾಗಿದೆ. ಈ ವೇಳೆ ಆಂಧ್ರ ಮೂಲದ ವಾಹನದಲ್ಲಿ 2 ಲಕ್ಷ 37 ಸಾವಿರ ರೂಪಾಯಿ ಹಣ ದೊರೆತಿದೆ. ಈ ಹಣಕ್ಕೆ ದಾಖಲೆಯಿಲ್ಲದ್ದರಿಂದ ಯರಗೇರಾ ಪೊಲೀಸರು ಜಪ್ತಿ ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ :ಚಾಮರಾಜನಗರ ಡಿಸಿಗೆ ಬಂದ ಫೋನ್ ಕರೆ; 98 ಕೋಟಿ ಮೌಲ್ಯದ ಬಿಯರ್ ವಶ, ಫ್ಯಾಕ್ಟರಿ ಸೀಜ್ - FACTORY SEIZE

ABOUT THE AUTHOR

...view details