ಕರ್ನಾಟಕ

karnataka

ETV Bharat / state

ಮೊಪೆಡ್​ ಮೇಲೆ ಹರಿದ ಕ್ಯಾಂಟರ್: ದೇವಸ್ಥಾನಕ್ಕೆ ಹೊರಟ ವೃದ್ಧ ದಂಪತಿ ಸ್ಥಳದಲ್ಲೇ ಸಾವು - MOPED BIKE ACCIDENT

ಮೊಪೆಡ್​ಗೆ ಡಿಕ್ಕಿ ಹೊಡೆದ ಕ್ಯಾಂಟರ್​ ಚಾಲಕ, ಗಾಡಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

Elderly couple died in accident
ಅಪಘಾತದಲ್ಲಿ ವೃದ್ಧ ದಂಪತಿ ಸಾವು (ETV Bharat)

By ETV Bharat Karnataka Team

Published : Dec 24, 2024, 11:19 AM IST

Updated : Dec 24, 2024, 1:54 PM IST

ದೊಡ್ಡಬಳ್ಳಾಪುರ: ದೇವಸ್ಥಾನಕ್ಕೆಂದು ಟಿವಿಎಸ್ ಮೊಪೆಡ್​ನಲ್ಲಿ ಹೊರಟ್ಟಿದ್ದ ದಂಪತಿಗಳ ಮೇಲೆ ಕ್ಯಾಂಟರ್ ಹರಿದು, ವಯೋವೃದ್ಧ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕನ್ನಮಂಗಲಗೇಟ್ ಬಳಿ ಸೋಮವಾರ ರಾತ್ರಿ ನಡೆದಿದೆ.

ರಾಮದೇನಹಳ್ಳಿಯ ಅಂದಾನಪ್ಪ (60), ನಾಗರತ್ನ(58) ಮೃತ ದುರ್ದೈವಿಗಳು. ದಂಪತಿ ಪ್ರಯಾಣಿಸುತ್ತಿದ್ದ ಮೊಪೆಡ್​ಗೆ ಡಿಕ್ಕಿ ಹೊಡೆದ ಕ್ಯಾಂಟರ್, ಅಪಘಾತದ ಬಳಿಕ ಚಾಲಕ ಕ್ಯಾಂಟರ್ ಅನ್ನು ಸ್ಥಳದಲ್ಲೇ ನಿಲ್ಲಿಸಿ ಪರಾರಿಯಾಗಿದ್ದಾನೆ.

ಮೊಪೆಡ್​ ಮೇಲೆ ಹರಿದ ಕ್ಯಾಂಟರ್: ದೇವಸ್ಥಾನಕ್ಕೆ ಹೊರಟ ವೃದ್ಧ ದಂಪತಿ ಸ್ಥಳದಲ್ಲೇ ಸಾವು (ETV Bharat)

ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ನೆಲಮಂಗಲ ಸಾರ್ವಜನಿಕರ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ರವಿ, ಇನ್ಸ್​ಪೆಕ್ಟರ್​ ​ ಕಲ್ಲಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೊಡ್ಡಬೆಳವಂಗಲದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ದಂಪತಿ ಊರೂರಿಗೆ ಹೋಗಿ ಮೊಟ್ಟೆ ವ್ಯಾಪಾರ ಮಾಡುತ್ತಿದ್ದರು. ಸೋಮವಾರ ರಾತ್ರಿ ಅವರು ಮಧುರೆ ಶನಿ ಮಹಾತ್ಮ ದೇವಸ್ಥಾನಕ್ಕೆ ಹೋಗಲು ರಾಮದೇನಹಳ್ಳಿಯಿಂದ ಹೊರಟ್ಟಿದ್ದರು. ಕನ್ನಮಂಗಲ ಗೇಟ್ ಬಳಿಯ ಪೆಟ್ರೋಲ್ ಬಂಕ್​ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಮುಖ್ಯರಸ್ತೆಗೆ ಬರುವ ವೇಳೆ ದೊಡ್ಡಬಳ್ಳಾಪುರ ಕಡೆಯಿಂದ ಬಂದ ಕ್ಯಾಂಟರ್ ದಂಪತಿ ಪ್ರಯಾಣಿಸುತ್ತಿದ್ದ ಮೊಪೆಡ್​ಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ:ಧಾರವಾಡ: ಪಲ್ಟಿಯಾದ ಕ್ಯಾಂಟರ್ ಟಿಟಿ ವಾಹನಕ್ಕೆ ಡಿಕ್ಕಿ; ಮೂವರು ಸಾವು, ಮೂವರಿಗೆ ಗಾಯ

Last Updated : Dec 24, 2024, 1:54 PM IST

ABOUT THE AUTHOR

...view details