ಬೆಂಗಳೂರು:ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆಗಾಗಿ ಬಸವನಗೌಡ ಪಾಟೀಲ್ ಯತ್ನಾಳ್ ಪ್ರತ್ಯೇಕ ಸಭೆ ನಡೆಸಿರುವ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, "ಈ ಸಭೆ ಹೊಸದೇನಲ್ಲ. ನಮ್ಮ ತಂದೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಎದುರಿಸಿದ ಅನೇಕ ಸವಾಲು ನೋಡಿ ಬೆಳೆದಿದ್ದೇನೆ. ಎಲ್ಲ ಸವಾಲುಗಳನ್ನೂ ಯಶಸ್ವಿಯಾಗಿ ಎದುರಿಸುತ್ತೇನೆ. ಜೀವನದಲ್ಲಿ ಸಮಸ್ಯೆ ಇದ್ದಾಗ ವಿಶ್ವಾಸ ಹೆಚ್ಚಾಗುತ್ತದೆ. ಸಮಸ್ಯೆಗೆ ಓಡಿ ಹೋಗುವುದಿಲ್ಲ. ಬಿಜೆಪಿಯನ್ನು ಮುಂದಿನ ದಿನಗಳಲ್ಲಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ತರುತ್ತೇನೆ" ಎಂದರು.
ಭಾನುವಾರ ನೆಲಮಂಗಲ ತಾಲೂಕಿನ ಸೊಂಪುರ ಸಮೀಪದ ಸಮಾಧಾನ ಮಠದ ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿದ ವಿಜಯೇಂದ್ರ ಮಾಧ್ಯಮದೊಂದಿಗೆ ಮಾತನಾಡಿದರು. ಈ ವೇಳೆ, ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರ ಮೇಲೆ ಎಫ್.ಎ.ಆರ್ ಕುರಿತು ಪ್ರತಿಕ್ರಿಯಿಸಿ,
"ರಾಜ್ಯ ಸರಕಾರ ತರಾತುರಿಯಲ್ಲಿ ಕೇಂದ್ರ ಹಣಕಾಸು ಸಚಿವೆ ಮೇಲೆ ಎಫ್.ಎ.ಆರ್ ದಾಖಲಿಸಿದೆ. ಚುನಾವಣಾ ಬಾಂಡ್ ಬಗ್ಗೆ ಕೆಳ ನ್ಯಾಯಾಲಯ ಆದೇಶ ಮಾಡಿದೆ. ರಾಜ್ಯ ಸರಕಾರ ಎಲ್ಲವನ್ನೂ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ" ಎಂದು ಆರೋಪಿಸಿದರು.