ಕರ್ನಾಟಕ

karnataka

ETV Bharat / state

ರಸ್ತೆಬದಿ ಮೂತ್ರ ವಿಸರ್ಜನೆಗೆ ತೆರಳಿದಾಗ ಬಸ್ ಹರಿದು ಬಾಲಕ ಸಾವು​ - Bus Ran Over Boy

ಮೂತ್ರ ವಿಸರ್ಜನೆಗೆಂದು ಬಾಲಕರು ಶಾಲೆಯಿಂದ ರಸ್ತೆಬದಿಗೆ ಬಂದಿದ್ದಾರೆ. ಈ ವೇಳೆ ವೇಗವಾಗಿ ಬಂದ ಕೆಎಸ್​ಆರ್​ಟಿಸಿ ಬಸ್​ ಓರ್ವ ಬಾಲಕನ ಮೇಲೆ ಹರಿಯಿತು. ಪರಿಣಾಮ, ಗಂಭೀರವಾಗಿ ಗಾಯಗೊಂಡ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಉಳಿದ ಮಕ್ಕಳು ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕೋಡಿಯಲ್ಲಿ ನಡೆದ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.

ಸಿಸಿಟಿವಿ ದೃಶ್ಯ
ಸಿಸಿಟಿವಿ ದೃಶ್ಯ (ETV Bharat)

By ETV Bharat Karnataka Team

Published : Sep 8, 2024, 3:53 PM IST

ಚಿಕ್ಕೋಡಿ: ಸಹಪಾಠಿಗಳೊಂದಿಗೆ ಮೂತ್ರ ವಿಸರ್ಜನೆಗೆ ತೆರಳಿದ ಬಾಲಕನ ಮೇಲೆ ಕೆಎಸ್​ಆರ್​ಟಿಸಿ ಬಸ್​ ಹರಿದು ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟರೆ, ಎಂಟು ವಿದ್ಯಾರ್ಥಿಗಳು ಕೂದಲೆಳೆ ಅಂತರದಿಂದ ಅಪಘಾತದಿಂದ ಪಾರಾದ ಇಂದು ಘಟನೆ ಅಥಣಿ ಪಟ್ಟಣದ ಗಲಗಲಿ ಆಸ್ಪತ್ರೆ ಬಳಿ ನಡೆಯಿತು.

ವಿದ್ಯಾರ್ಥಿ ಸೃಜನ್​ ಬಂಡರಗರ್ (10) ಸ್ಥಳದಲ್ಲೇ ಸಾವನ್ನಪ್ಪಿದ ಬಾಲಕ ಎಂದು ಗುರುತಿಸಲಾಗಿದೆ. ಕಂಪ್ಯೂಟರ್​ ಕ್ಲಾಸ್​ಗೆಂದು ಬಂದಿದ್ದ ಬಾಲಕರು ಎಂದಿನಂತೆ ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆಗೆ ತೆರಳಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.

ಅಥಣಿ ಮಾರ್ಗವಾಗಿ ಕಾರವಾರಕ್ಕೆ ಹೊರಟಿದ್ದ ಬಸ್​ ಅತಿ ವೇಗವಾಗಿ ಚಲಿಸುತ್ತಿತ್ತು. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಅಥಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿ ಬಸ್​ ಚಾಲಕನನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:ಬಂಟ್ವಾಳ ಬಳಿ ಭೀಕರ ಕಾರು ಅಪಘಾತ: ನವವಿವಾಹಿತೆ ಸಾವು, ಪತಿ ಗಂಭೀರ

ABOUT THE AUTHOR

...view details