ಧಾರವಾಡ:ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಆಳ್ನಾವರ ತಾಲೂಕಿನ ಬೆಣಚಿ ಮತ್ತು ಬಾಲಗೇರಿ ಗ್ರಾಮಗಳ ನಡುವಿನ ಸೇತುವೆ ಕೊಚ್ಚಿ ಹೋಗಿದೆ. ಜನರು ಇದೀಗ ಹಗ್ಗದ ಸಹಾಯದಿಂದ ನದಿ ದಾಟುತ್ತಿದ್ದಾರೆ. ಗ್ರಾಮಕ್ಕೆ ತೆರಳಲು ಪರ್ಯಾಯ ಮಾರ್ಗವಿಲ್ಲದ ಹಿನ್ನೆಲೆಯಲ್ಲಿ ಹಗ್ಗವೇ ಜನರಿಗೆ ಆಸರೆಯಾಗಿದೆ.
ಧಾರವಾಡದಲ್ಲಿ ನಿರಂತರ ಮಳೆಗೆ ಕೊಚ್ಚಿ ಹೋದ ಸೇತುವೆ: ಹಗ್ಗವೇ ಜನರಿಗಿಲ್ಲಿ ಆಸರೆ
ಧಾರವಾಡದಲ್ಲಿ ಭಾರಿ ಮಳೆಯಿಂದಾಗಿ ಎರಡು ಗ್ರಾಮಗಳ ಸಂಪರ್ಕ ಕೊಂಡಿಯಾಗಿದ್ದ ಸೇತುವೆಯೊಂದು ಕೊಚ್ಚಿ ಹೋಗಿದೆ.
ಅಪಾಯಕಾರಿ ಸಾಹಸ (ETV Bharat)
Published : Oct 13, 2024, 1:16 PM IST
2019ರ ಪ್ರವಾಹದಲ್ಲಿ ಈ ಸೇತುವೆಯ ಅರ್ಧಭಾಗ ಕೊಚ್ಚಿ ಹೋಗಿತ್ತು. ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಗ್ರಾಮಸ್ಥರು ಸಚಿವ ಸಂತೋಷ ಲಾಡ್ ಅವರಿಗೆ ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ:ಧಾರವಾಡ ಜಿಲ್ಲೆಯಲ್ಲಿ ವರುಣನ ಆರ್ಭಟ: ಜನಜೀವನ ಅಸ್ತವ್ಯಸ್ತ; ಬೆಳೆ ನಾಶ, ರೈತರು ಕಂಗಾಲು