ಬೆಳಗಾವಿ: ''ಈ ಕಡೆ ಒದ್ದ ಮೇಲೆ ಆ ಕಡೆ ಹೋಗೋದು, ಆ ಕಡೆ ಒದ್ದರೆ ಈ ಕಡೆ ಬರುವುದಕ್ಕೆ ನಾನೇನು ಫುಟ್ಬಾಲ್ ಅಲ್ಲ. ಲೋಕಸಭೆಗೆ ನಾನು ಮತ್ತು ನನ್ನ ಪುತ್ರ ಗಣೇಶ ಹುಕ್ಕೇರಿ ಇಬ್ಬರೂ ಸ್ಪರ್ಧಿಸುವುದಿಲ್ಲ. ಚಿಕ್ಕೋಡಿ ಲೋಕಸಭೆ ಟಿಕೆಟ್ ಕುರುಬ ಸಮಾಜಕ್ಕೆ ಕೊಟ್ಟರೆ, ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ'' ಎಂದು ಕಾಂಗ್ರೆಸ್ ಹಿರಿಯ ವಿಧಾನಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ''2014 ರಲ್ಲಿ ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಮಂತ್ರಿ ಇದ್ದರೂ ಲೋಕಸಭೆಗೆ ಸ್ಪರ್ಧಿಸಿ ಗೆಲುವು ದಾಖಲಿಸಿದ್ದೆ. ಆಗ ಪುತ್ರ ಗಣೇಶ ಹುಕ್ಕೇರಿಯನ್ನು ಶಾಸಕನನ್ನಾಗಿ ಮಾಡಿ ಮಂತ್ರಿ ಮಾಡುತ್ತೇವೆ ಅಂತಾ ವರಿಷ್ಠರು ಭರವಸೆ ಕೊಟ್ಟಿದ್ದರು. ಆದರೆ, ಪುತ್ರ ಗಣೇಶ ಶಾಸಕನಾದರೂ ಬಳಿಕ ಮಂತ್ರಿ ಮಾಡಿಲ್ಲ. 2023 ರ ಚುನಾವಣೆಯಲ್ಲಿ ಗಣೇಶ 78 ಸಾವಿರ ಮತಗಳ ಅಂತರದಿಂದ ಗೆದ್ದರೂ ಸಚಿವ ಸ್ಥಾನ ನೀಡಿಲ್ಲ. ನಾನಾಗಲಿ, ನನ್ನ ಮಗನಾಗಲಿ ಮಂತ್ರಿ ಸ್ಥಾನ ಕೇಳಿಲ್ಲ, ಕೇಳುವುದೂ ಇಲ್ಲ'' ಎಂದರು.
ಇದನ್ನೂ ಓದಿ:ಶಿವಮೊಗ್ಗದಲ್ಲಿ ಇಬ್ಬರು ಮಾಜಿ ಸಿಎಂಗಳ ಮಕ್ಕಳ ಮುಖಾಮುಖಿ: ಗೀತಾ ಶಿವರಾಜ್ಕುಮಾರ್ಗೆ ಸಿಗುವುದೇ ಗೆಲುವು?