ವಿಜಯಪುರ: ಕೊಳವೆ ಬಾವಿಯಿಂದ ರಕ್ಷಿಸಲ್ಪಟ್ಟ 2 ವರ್ಷದ ಮಗು ಸಾತ್ವಿಕ್ನನ್ನು ವಿಜಯಪುರ ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಆಸ್ಪತ್ರೆ ಆವರಣದಲ್ಲಿ ಕೇಕ್ ಕತ್ತರಿಸಿ ಸಾತ್ವಿಕ್ಗೆ ಡಿಎಸ್‌ಒ ಶಿವಾನಂದ ಮಾಸ್ತಿಹೊಳಿ ಹಾಗೂ ಡಿಹೆಚ್‌ಒ ಬಸವರಾಜ್ ಹುಬ್ಬಳ್ಳಿ ಹಾಗೂ ವೈದ್ಯರು ಬೀಳ್ಕೊಟ್ಟಿದ್ದಾರೆ. ಕೊಳವೆಬಾವಿಯಿಂದ ರಕ್ಷಿಸಲಾಗಿದ್ದ ಸಾತ್ವಿಕ್ ಆರೋಗ್ಯ ಸ್ಥಿರವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ರೀತಿಯ ಟೆಸ್ಟ್ ಗಳನ್ನು ಮಾಡಲಾಗಿತ್ತು. ಈ ಟೆಸ್ಟ್ಗಳ ವರದಿ ನಾರ್ಮಲ್ ಬಂದ ಹಿನ್ನೆಲೆಯಲ್ಲಿ ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಸಾತ್ವಿಕ್ ಮುಜಗೊಂಡ ಶನಿವಾರ ಸಂಜೆ ಪೋಷಕರೊಂದಿಗೆ ತಮ್ಮೂರಿಗೆ ಮರಳಿದ್ದಾನೆ. ಊರಿಗೆ ಮಗು ಮರಳಿದ ಸುದ್ದಿ ಕೇಳಿ ಕುಟುಂಬಸ್ಥರು, ಸಂಬಂಧಿಕರು, ಗ್ರಾಮಸ್ಥರು ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಸಾತ್ವಿಕ್ ಸುರಕ್ಷಿತವಾಗಿ ವಾಪಸ್ ಆಗಿದ್ದರಿಂದ ಲಚ್ಯಾಣದಲ್ಲಿ ಮೂರು ದಿನ ಮೊದಲೇ ಯುಗಾದಿ ಸಂಭ್ರಮ ಮನೆ ಮಾಡಿತ್ತು. ಮಗುವಿನೊಂದಿಗೆ ಪೋಷಕರು ಲಚ್ಯಾಣದ ಆರಾಧ್ಯ ದೈವ ಶ್ರೀ ಸಿದ್ಧಲಿಂಗ ಮಹಾರಾಜರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಾತ್ವಿಕ್ನ ತಂದೆ ಶರಣು ಶಂಕರ ಮುಜಗೊಂಡ ಅವರು ಸಿದ್ಧಲಿಂಗ ಮಹಾರಾಜ ಕೀ ಜೈ’ ಎಂದು ಘೋಷಣೆ ಮೊಳಗಿಸಿದರು.