ಕರ್ನಾಟಕ

karnataka

ETV Bharat / state

ಕರ್ತವ್ಯ ನಿರತ ಬಿಎಂಟಿಸಿ ಚಾಲಕನ ಮೇಲೆ ಸಾರ್ವಜನಿಕನಿಂದ ಹಲ್ಲೆ ಆರೋಪ : ವಿಡಿಯೋ

ಬೆಂಗಳೂರಿನ ಹಳೇಗುಡ್ಡದಹಳ್ಳಿ ಸಿಗ್ನಲ್ ಬಳಿ ಬಸ್​ ಚಾಲಕನ ಮೇಲೆ ಸಾರ್ವಜನಿಕನೊಬ್ಬ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

bmtc-driver-assaulted-by-citizen-in-bengaluru
ಬಿಎಂಟಿಸಿ ಚಾಲಕನ ಮೇಲೆ ಸಾರ್ವಜನಿಕನಿಂದ ಹಲ್ಲೆ (ETV Bharat)

By ETV Bharat Karnataka Team

Published : Nov 11, 2024, 8:44 PM IST

ಬೆಂಗಳೂರು : ಭಾನುವಾರ ರಾತ್ರಿ ಸುಮಾರು 8 ಗಂಟೆಯ ಸಮಯದಲ್ಲಿ ಜಯನಗರ ಟಿಟಿಎಂಸಿಯಿಂದ ವಿಜಯನಗರ ಟಿಟಿಎಂಸಿಯ ಮಾರ್ಗದಲ್ಲಿ ಬರುವ ಹಳೇಗುಡ್ಡದಹಳ್ಳಿ ಸಿಗ್ನಲ್ ಬಳಿ ವಾಹನ ನಿಲ್ಲಿಸಿದ್ದಾಗ, ಏಕಾಏಕಿ ಸಾರ್ವಜನಿಕನೊಬ್ಬ ಬಸ್ ಏರಿ ಕರ್ತವ್ಯ ನಿರತ ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

ರಾತ್ರಿ ಘಟಕ - 16ರ ಬಸ್ ಸಂಖ್ಯೆ ಕೆಎ 57 ಎಫ್ 4034 ಮಾರ್ಗ ಸಂಖ್ಯೆ 60A/8 ಬಸ್​ ಅನ್ನು ಹಳೇಗುಡ್ಡದಹಳ್ಳಿ ಸಿಗ್ನಲ್ ಬಳಿ ನಿಲ್ಲಿಸಲಾಗಿತ್ತು. ಆಗ ಅಪರಿಚಿತ ವ್ಯಕ್ತಿಯೊಬ್ಬ ಬೈಕ್ ಅನ್ನು ಬಸ್​ನ ಬದಿಗೆ ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಬಸ್ ಹತ್ತಿ ಏಕಾಏಕಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ.

ಬಿಎಂಟಿಸಿ ಚಾಲಕನ ಮೇಲೆ ಸಾರ್ವಜನಿಕನಿಂದ ಹಲ್ಲೆ (ETV Bharat)

ಹಲ್ಲೆಗೊಳಗಾದ ಕೂಡಲೇ ಚಾಲಕ ಬಸ್​ನ ಬಾಗಿಲುಗಳನ್ನು ಮುಚ್ಚಿ, ಹಲ್ಲೆ ಮಾಡಿದ ವ್ಯಕ್ತಿಯನ್ನು ಪ್ರಯಾಣಿಕರ ಸಹಾಯದಿಂದ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ಒಪ್ಪಿಸಿ, ಅಪರಿಚಿತ ವ್ಯಕ್ತಿಯ ಮೇಲೆ ನಾನ್ - ಕಾಗ್ನಿಜಬಲ್ ದೂರನ್ನು ಕೊಟ್ಟಿದ್ದಾರೆ.

ಗಾಯಗೊಂಡಿದ್ದ ಚಾಲಕ ಸಾರಥಿ ವಾಹನದ ಸಹಾಯದಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿರುವ ಅವರು ಸೂಕ್ತ ಕ್ರಮಕ್ಕೆ ಮನವಿ ಮಾಡಿದ್ದಾರೆ.

ಘಟನೆಯ ಕುರಿತು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್. ರಾಮಚಂದ್ರನ್ ಪ್ರತಿಕ್ರಿಯಿಸಿದ್ದು, 'ಸಂಸ್ಥೆಯು ತನ್ನ ಸಿಬ್ಬಂದಿ ಮತ್ತು ಪ್ರಯಾಣಿಕರ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡುತ್ತದೆ. ಸಿಬ್ಬಂದಿ ಮೇಲಿನ ಹಲ್ಲೆಯನ್ನು ತೀವ್ರವಾಗಿ ಪರಿಗಣಿಸಲಾಗುತ್ತದೆ. ಈ ಕುರಿತು ಬೆಂಗಳೂರು ನಗರದ ಪೊಲೀಸ್ ಆಯುಕ್ತ ಬಿ. ದಯಾನಂದ ಅವರನ್ನು ಖುದ್ದಾಗಿ ಭೇಟಿ ಮಾಡಿ, ಇಂತಹ ಘಟನೆಗಳ ಸಂದರ್ಭದಲ್ಲಿ ತ್ವರಿತವಾಗಿ ಕಠಿಣ ಕ್ರಮ ಕೈಗೊಳ್ಳಲು ಕೋರಲಾಗಿದೆ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ :ಧಾರವಾಡ : ಪಾರ್ಕಿಂಗ್ ವಿಚಾರಕ್ಕೆ ಪೊಲೀಸ್ ಕಾನ್ಸ್​ಟೇಬಲ್​​​ ಮೇಲೆ ಹಲ್ಲೆ ಆರೋಪ - ಮೂವರ ಬಂಧನ

ABOUT THE AUTHOR

...view details