ಕರ್ನಾಟಕ

karnataka

ETV Bharat / state

ಮೂರು ತಿಂಗಳಲ್ಲಿ 10 ಸಾವಿರ ಪ್ರಯಾಣಿಕರಿಂದ ₹19 ಲಕ್ಷ ದಂಡ ಸಂಗ್ರಹಿಸಿದ ಬಿಎಂಟಿಸಿ - FINES FOR TICKETLESS PASSENGERS

ಬಿಎಂಟಿಸಿ ಕಳೆದ ಮೂರು ತಿಂಗಳಲ್ಲಿ 10 ಸಾವಿರ ಪ್ರಯಾಣಿಕರಿಂದ 19 ಲಕ್ಷ ರೂ ದಂಡ ಸಂಗ್ರಹಿಸಿದೆ.

FINES FOR TICKETLESS PASSENGERS
ಬಿಎಂಟಿಸಿ (ETV Bharat)

By ETV Bharat Karnataka Team

Published : Nov 29, 2024, 10:02 AM IST

ಬೆಂಗಳೂರು:ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಕಳೆದ ಮೂರು ತಿಂಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ ಮತ್ತು ಮಹಿಳೆಯರಿಗೆ ಮಾತ್ರ ಮೀಸಲಾದ ಆಸನಗಳಲ್ಲಿ ಪ್ರಯಾಣಿಸಿದ 10,069 ಪ್ರಯಾಣಿಕರಿಂದ 19 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಸಂಸ್ಥೆ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ತಪಾಸಣಾ ಸಿಬ್ಬಂದಿ 57,219 ಟ್ರಿಪ್‌ಗಳನ್ನು ಪರಿಶೀಲಿಸಿದ್ದು 8,891 ಟಿಕೆಟ್‌ರಹಿತ ಪ್ರಯಾಣಿಕರಿಂದ ದಂಡವಾಗಿ 17,96,030 ರೂಪಾಯಿ ದಂಡ ವಿಧಿಸಿದ್ದಾರೆ. ಮಹಿಳಾ ಪ್ರಯಾಣಿಕರಿಗೆ ಮೀಸಲಾದ ಸೀಟುಗಳಲ್ಲಿ ಕುಳಿತಿದ್ದ 1,178 ಪುರುಷ ಪ್ರಯಾಣಿಕರಿಂದ 1,17,800 ರೂಪಾಯಿ ದಂಡ ಸಂಗ್ರಹಿಸಿದ್ದಾರೆ. ಕರ್ತವ್ಯ ಲೋಪಕ್ಕಾಗಿ ಕಂಡಕ್ಟರ್‌ಗಳ ವಿರುದ್ಧ 5,268 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದೆ.

ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ 10,069 ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ ಮತ್ತು 19,13,830 ರೂಪಾಯಿ ದಂಡ ಸಂಗ್ರಹಿಸಲಾಗಿದೆ ಎಂದು ಬಿಟಿಎಂಸಿ ಹೇಳಿದೆ.

ಇದನ್ನೂ ಓದಿ:ಇ-ಕಾಮರ್ಸ್ ಸರ್ವಿಸ್ ಪ್ರತಿನಿಧಿಗಳಿಂದ ಸಂಚಾರ ನಿಯಮ ಉಲ್ಲಂಘನೆ: ಒಂದೇ ದಿನ ₹13.78 ಲಕ್ಷ ದಂಡ ಸಂಗ್ರಹ

ABOUT THE AUTHOR

...view details