ಕರ್ನಾಟಕ

karnataka

ETV Bharat / state

‘ರೇಣುಕಾಸ್ವಾಮಿ ಕೊಲೆ ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದು’: ವಿಜಯೇಂದ್ರ ಖಂಡನೆ, 2 ಲಕ್ಷ ರೂ. ಪರಿಹಾರ - Two Lakh Compensation - TWO LAKH COMPENSATION

ರೇಣುಕಾಸ್ವಾಮಿ ಕೊಲೆ ಪ್ರಕರಣ ರಾಜ್ಯವೇ ಅಲ್ಲ, ಇಡೀ ದೇಶದಲ್ಲಿ ಚರ್ಚೆಯಾಗುತ್ತಿದೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಕೊಲೆಯಾದ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ ಕೊಡಬೇಕೆಂದು ನಾನು ಆಗ್ರಹಿಸುತ್ತಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.

BJP STATE PRESIDENT VIJAYENDRA  RENUKASWAMY MURDER CASE  CHITRADURGA  ACTOR DARSHAN
ವಿಜಯೇಂದ್ರ ಖಂಡನೆ, 2 ಲಕ್ಷ ಪರಿಹಾರ (ETV Bharat)

By ETV Bharat Karnataka Team

Published : Jun 18, 2024, 2:04 PM IST

Updated : Jun 18, 2024, 6:24 PM IST

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ (ETV Bharat)

ಚಿತ್ರದುರ್ಗ:ರೇಣುಕಾಸ್ವಾಮಿ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಇಂದು ಭೇಟಿ ನೀಡಿ ಸಾಂತ್ವನ ಹೇಳಿದರು. ಬಳಿಕ ಪಕ್ಷದ ವತಿಯಿಂದ ಕುಟುಂಬಸ್ಥರಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡಿದರು.

ಪರಿಹಾರ ನೀಡಿದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿ, ರೇಣುಕಾಸ್ವಾಮಿಯ ಹತ್ಯೆಯನ್ನು ನಾಗರಿಕ ಸಮಾಜದ ಯಾರೊಬ್ಬರು ಸಹ ಇದನ್ನು ಬೆಂಬಲಿಸುವುದಕ್ಕೆ ಸಾಧ್ಯವಿಲ್ಲ. ಪ್ರತಿಯೊಬ್ಬರು ಈ ಘಟನೆಯನ್ನು ತೀವ್ರವಾಗಿ ಖಂಡಿಸುವಂತದ್ದು. ಈ ಹತ್ಯೆ ಬಗ್ಗೆ ರಾಜ್ಯದಲ್ಲೇ ಮಾತ್ರವಲ್ಲ, ಇಡೀ ದೇಶದಲ್ಲೇ ಚರ್ಚೆಯಾಗುತ್ತಿದೆ ಎಂದರು.

ಅವರ ಕುಟುಂಬಸ್ಥರನ್ನು ಈ ಪರಿಸ್ಥಿತಿಯಲ್ಲಿ ನೋಡಿದರೆ ದುಃಖವಾಗುತ್ತದೆ. ಯಾವರೀತಿ ಅವರಿಗೆ ಧೈರ್ಯ ಹೇಳಬೇಕೋ, ಸಾಂತ್ವನ ಹೇಳಬೇಕೋ ಅರ್ಥವಾಗುತ್ತಿಲ್ಲ. ನಾನು ರಾಜ್ಯ ಸರ್ಕಾರಕ್ಕೆ ಮತ್ತು ಸಿಎಂ ಸಿದ್ದರಾಮಯ್ಯಗೆ ಒತ್ತಾಯ ಮಾಡುವುದೇನೆಂದ್ರೆ, ಆ ಕುಟುಂಬಕ್ಕೆ ಧೈರ್ಯ ತುಂಬುವಂತಹ ಕೆಲಸ ರಾಜ್ಯ ಸರ್ಕಾರದ ವತಿಯಿಂದ ಆಗಬೇಕು. ರೇಣುಕಾ ಸ್ವಾಮಿಯ ಧರ್ಮಪತ್ನಿ ನಾಲ್ಕು ತಿಂಗಳ ಗರ್ಭಿಣಿ. ಮುಂದಿನ ದಿನಗಳಲ್ಲಿ ಆ ಹೆಣ್ಣು ಮಗಳಿಗೊಂದು ಸರ್ಕಾರಿ ಉದ್ಯೋಗವೊಂದನ್ನು ಕೊಡಬೇಕು. ಸರ್ಕಾರ ಪರಿಹಾರವನ್ನು ನೀಡಬೇಕು ಎಂದು ಹೇಳಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಯುತ್ತಿದೆ. ಈ ಕೊಲೆ ಪ್ರಕರಣದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಆದ್ರೆ ಈ ಕೊಲೆ ಪ್ರಕರಣ ತನಿಖೆ ಸರಿಯಾದ ರೀತಿಯಲ್ಲಿ ಆಗಬೇಕು. ಯಾವುದೇ ಒತ್ತಡಕ್ಕೆ ಮಣಿಯದೇ ತಪ್ಪಿಸ್ಥರಿಗೆ ಸರಿಯಾದ ಶಿಕ್ಷೆ ಸಹ ಆಗಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ ಅಂತಾ ವಿಜಯೇಂದ್ರ ಹೇಳಿದರು.

ಈ ಕೊಲೆ ಪ್ರಕರಣ ಇಡೀ ದೇಶದಲ್ಲೇ ಹೆಚ್ಚು ಚರ್ಚೆಯಾಗುತ್ತಿದೆ. ಈ ವಿಷಯವನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕು. ಸಿಎಂ ಸಿದ್ದರಾಮಯ್ಯ ತಕ್ಷಣವೇ ಪರಿಹಾರ ಕೊಡುವ ನಿಟ್ಟಿನಲ್ಲಿ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇಲ್ಲಿಯವರೆಗೂ ಯಾವೊಬ್ಬ ಸಚಿವರು ರೇಣುಕಾಸ್ವಾಮಿ ಕುಟುಂಬಸ್ಥರ ಮನೆಗೆ ಭೇಟಿ ಕೊಟ್ಟಿಲ್ಲ. ಬಹುಶಃ ಈ ದಿನ ಗೃಹ ಸಚಿವ ಪರಮೇಶ್ವರ್​ ಅವರು ಬರುತ್ತಾರೆ ಎಂದು ಮಾಹಿತಿ ಸಿಕ್ಕಿದೆ. ಗೃಹ ಸಚಿವರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಕುಟುಂಬಕ್ಕೆ ಧೈರ್ಯವನ್ನು ಸಹ ಕೊಡಬೇಕು ಮತ್ತು ಆರ್ಥಿಕವಾಗಿ ಪರಿಹಾರವನ್ನು ಸಹ ಕೊಡಬೇಕು ಎಂದು ಒತ್ತಾಯಿಸಿದರು. ರೇಣುಕಾಸ್ವಾಮಿ ಕುಟುಂಬಸ್ಥರಿಗೆ ನಾವು ಪಕ್ಷದ ವತಿಯಿಂದ ಎರಡು ಲಕ್ಷ ರೂಪಾಯಿಯನ್ನು ಪರಿಹಾರ ರೂಪದಲ್ಲಿ ನೀಡಿದ್ದೇವೆ ಎಂದರು.

ಓದಿ:ಭವಾನಿ ರೇವಣ್ಣಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಹೈಕೋರ್ಟ್ - RELIEF FOR BHAVANI REVANNA

Last Updated : Jun 18, 2024, 6:24 PM IST

ABOUT THE AUTHOR

...view details