ಕರ್ನಾಟಕ

karnataka

ETV Bharat / state

ಕೆಎಸ್ ಈಶ್ವರಪ್ಪ ಬಂಡಾಯ; ಕಾದು ನೋಡುವ ತಂತ್ರಕ್ಕೆ‌ ಮೊರೆ ಹೋದ ಬಿಜೆಪಿ - Eshwarappa Election Campaign - ESHWARAPPA ELECTION CAMPAIGN

ಶಿವಮೊಗ್ಗದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೆ.ಎಸ್​ ಈಶ್ವರಪ್ಪ ಇಂದಿನಿಂದ ಚುನಾವಣೆಯ ಪ್ರಚಾರ ಆರಂಭಿಸಿದ್ದಾರೆ. ಬಂಡಾಯವಾಗಿ ಸ್ಪರ್ಧೆ ಮಾಡುವ ಕುರಿತು ಹೇಳಿಕೆ ನೀಡುತ್ತಿದ್ದರೂ, ಬಿಜೆಪಿ ಕ್ರಮ ಕೈಗೊಳ್ಳದೇ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.

ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕೆ.ಎಸ್.ಈಶ್ವರಪ್ಪ ಚುನಾವಣೆ ಪ್ರಚಾರ ಪ್ರಾರಂಭ
ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕೆ.ಎಸ್.ಈಶ್ವರಪ್ಪ ಚುನಾವಣೆ ಪ್ರಚಾರ ಪ್ರಾರಂಭ

By ETV Bharat Karnataka Team

Published : Mar 23, 2024, 1:08 PM IST

Updated : Mar 23, 2024, 6:53 PM IST

ಕೆಎಸ್ ಈಶ್ವರಪ್ಪ

ಶಿವಮೊಗ್ಗ: ತಮಗೆ ವಿಧಾನಸಭೆ ಚುನಾವಣೆಯಲ್ಲಿ ಲೀಡ್ ಸಿಗುತ್ತಿದ್ದ ಪುರಲೆ ಹಾಗೂ ಗುರುಪುರ ಬಡಾವಣೆಯಲ್ಲಿ ಇಂದು ಬಿಜೆಪಿಯ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅವರು ತಮ್ಮ ಮತ ಬೇಟೆಯನ್ನು ಪ್ರಾರಂಭಿಸಿದರು. ಬೆಳಗ್ಗೆ ಪುರಲೆ ಬಡಾವಣೆಯ ಗಣಪತಿ ದೇವಾಲಯಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು.

ನಂತರ ಬಡಾವಣೆಯ ನಾಗರೀಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾ.22 ರಂದು ಶಿವಮೊಗ್ಗ ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಬೂತ್ ಕಾರ್ಯಕರ್ತರ ಸಭೆ ನಡೆಸಲಾಗುತ್ತದೆ. ಈ ಸಭೆಗೆ ಆಗಮಿಸಬೇಕೆಂದು ಕರೆ ನೀಡಿದರು. ನಾನು ಇಲ್ಲಿ ಮತ್ತೊಮ್ಮೆ ಪ್ರಚಾರಕ್ಕೆ ಬರುತ್ತೇನೆ ಎಂದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು 1989ರಲ್ಲಿ‌ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದಾಗ ನನ್ನ ಜೀವನದ ರಾಜಕೀಯ ಬೆಳವಣಿಗೆಗೆ ಆಶೀರ್ವಾದ ಮಾಡಿದ ಪ್ರದೇಶಗಳು ಇವಾಗಿವೆ. ನನಗೆ ಅತಿ ಹೆಚ್ಚು ಮತಗಳು ಬಂದ ಪ್ರದೇಶಗಳೂ ಇವೆ ಆಗಿವೆ. ಹಾಗಾಗಿ ಇಲ್ಲಿಗೆ ಬಂದು ನನ್ನ‌ ಮೊದಲ ಪ್ರಚಾರ ನಡೆಸುತ್ತಿದ್ದೆನೆ. ಮಾ.22 ರಂದು ಮಂಗಳವಾರ ಬೂತ್​ ಮಟ್ಟದ ಸಭೆ ನಡೆಸಲಾಗುತ್ತದೆ. ಈ ಸಭೆಗೆ ಆಗಮಿಸುವಂತೆ ತಮ್ಮ ಬೆಂಬಲಿಗರಿಗೆ ಮನವಿ ಮಾಡಿದರು.

ಮತ್ತೊಂದೆಡೆ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಉಪ ಮುಖ್ಯಮಂತ್ರಿ‌ ಕೆ.ಎಸ್. ಈಶ್ವರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಪಕ್ಷದಲ್ಲಿದ್ದುಕೊಂಡೇ ಪಕ್ಷ ಘೋಷಿಸಿರುವ ಅಧಿಕೃತ ಅಭ್ಯರ್ಥಿ ಬಿ ವೈ ರಾಘವೇಂದ್ರ ವಿರುದ್ಧ ಬಂಡಾಯವಾಗಿ ಸ್ಪರ್ಧಿಸುವ ಕುರಿತು ಹೇಳಿಕೆ ನೀಡಿದ್ದರು ಸಹ ಇದುವರೆಗೂ ಪಕ್ಷ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.

ಈ ಕುರಿತು ಮಾತನಾಡಿದ ಜಿಲ್ಲಾ‌ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಅವರು, ನಮ್ಮ ಪಕ್ಷದ ಹಿರಿಯರು ಈಶ್ವರಪ್ಪ ವಿಚಾರವಾಗಿ ಮಾತನಾಡುತ್ತಿದ್ದಾರೆ.‌ ಚರ್ಚೆ ನಡೆಸುತ್ತಿದ್ದಾರೆ. ವೈಯಕ್ತಿಕವಾಗಿ ನಾನು ಈಶ್ವರಪ್ಪನವರ ಜೊತೆ ಮಾತನಾಡಿದ್ದೇನೆ. ನಾನು ಮಾತನಾಡಿದಾಗ ಯಾವುದೇ ಕಾರಣಕ್ಕೆ, ಕಾಂತೇಶ್ ಅವರಿಗೆ ಹಾವೇರಿಯಲ್ಲಿ ಟಿಕೆಟ್ ಸಿಗದ ಸಂದರ್ಭದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಅತ್ಯಂತ ಸ್ಪಷ್ಟಪಡಿಸಿದ್ದಾರೆ.‌

ಈ ಕುರಿತು ಸಂಬಂಧಪಟ್ಟ ಹಿರಿಯರೊಂದಿಗೆ ನಾನು ಸಮಾಲೋಚನೆ ನಡೆಸಿದ್ದೇನೆ. ಅಲ್ಲಿರುವ ಗೊಂದಲವನ್ನು ನಿವಾರಿಸಲು ಮಾತುಕತೆ ನಡೆಸಲಾಗುತ್ತಿದೆ.‌ ಅವರ ಜೊತೆ ಮಾತುಕಥೆ ಫಲಪ್ರಧವಾಗುವ ನಿರೀಕ್ಷೆಯಲ್ಲಿ ಇದ್ದೇವೆ. ಕಾಲ ಮಿಂಚಿಲ್ಲ, ಸೂಕ್ತ ಸಮಯದಲ್ಲಿ ಎಲ್ಲಾ ಸರಿ ಹೋಗುತ್ತದೆ. ಇನ್ನು ಕೊಡ ನಾಮಪತ್ರ ಸಲ್ಲಿಕೆ, ನಾಮಪತ್ರ ವಾಪಸ್ ಪಡೆದುಕೊಳ್ಳುವುದು ಇದೆ. ಸಣ್ಣ ಪಾಲಿಕೆ ಚುನಾವಣೆಯಲ್ಲಿ ಭಿನ್ನಮತ ಇರುತ್ತದೆ. ಜಗತ್ತಿನ ದೊಡ್ಡ ಪಕ್ಷದಲ್ಲಿ, ಲೋಕಸಭಾ ಚುನಾವಣೆಯಲ್ಲಿ ಗೊಂದಲ ಇರುತ್ತದೆ. ನಮ್ಮ‌ಮೊದಲ ಆದ್ಯತೆ, ಸರಿ ಮಾಡುವುದು. ಮಾತುಕತೆ ನಡೆಸಲಾಗುತ್ತಿದೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಬಿಜೆಪಿ ಯಾವತ್ತು ಹಿಂದೆ ಬಿದ್ದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣನ ಸೋಲಿಸಿ, ಕಾಂಗ್ರೆಸ್​ ಅಭ್ಯರ್ಥಿಯನ್ನು ಗೆಲ್ಲಿಸಿ: ಸಚಿವ ಕೆ.ಎನ್. ರಾಜಣ್ಣ - HASSANA LOK SABHA CONSTITUENCY

Last Updated : Mar 23, 2024, 6:53 PM IST

ABOUT THE AUTHOR

...view details