ಶಿವಮೊಗ್ಗ:ಬಿಜೆಪಿ ಹಿರಿಯ ಮುಖಂಡ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಬಳಿಕ 'ಈಟಿವಿ ಭಾರತ ಪ್ರತಿನಿಧಿ' ಜತೆಗೆ ಮಾತಿಗೆ ಸಿಕ್ಕ ಅವರು, ನಾಮಪತ್ರ ಸಲ್ಲಿಕೆಗೆ ಶಿವಮೊಗ್ಗ ಲೋಕಸಭೆಯ ಎಂಟು ವಿಧಾನಸಭೆ ಕ್ಷೇತ್ರಗಳಿಂದ ಜನಸಾಗರವೇ ಹರಿದುಬಂದಿತ್ತು. ಎಷ್ಟು ಜನ ಬಂದಿದ್ದಾರೆ ಎಂದು ನಾನು ಹೇಳೋದಿಲ್ಲ. ಮಾಧ್ಯಮಗಳಲ್ಲಿಯೇ ನೋಡಿಕೊಂಡು ತಿಳಿದುಕೊಳ್ಳಲಿ ಎಂದು ಬಿಜೆಪಿಗೆ ಪರೋಕ್ಷ ಸಂದೇಶ ರವಾನಿಸಿದರು.
ಚುನಾವಣೆಗೆ ನಿಲ್ಲಲ್ಲ, ನಿಲ್ಲಲ್ಲ ಎಂದವರಿಗೆ ಕ್ಷೇತ್ರದ ಜನರಿಂದ ತಕ್ಕ ಉತ್ತರ: ಈಶ್ವರಪ್ಪ - K S Eshwarappa
ಕೆ.ಎಸ್.ಈಶ್ವರಪ್ಪ ಇಂದು ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಕೆ. ಎಸ್ ಈಶ್ವರಪ್ಪ
Published : Apr 12, 2024, 4:15 PM IST
ನನ್ನ ಜತೆ ಹಿಂದುತ್ವವಾದಿಗಳಿದ್ದಾರೆ. ಒಂದು ಕುಟುಂಬದ ರಾಜಕಾರಣವನ್ನು ಮುಕ್ತಗೊಳಿಸಬೇಕೆಂಬ ಉದ್ದೇಶ ನಮ್ಮದು. ಬಿಜೆಪಿ ಶುದ್ಧೀಕರಣ ಮಾಡುವ ಆಸಕ್ತಿಯನ್ನು ಎಲ್ಲರೂ ಹೊಂದಿದ್ದಾರೆ ಎಂದರು. ಇದೇ ವೇಳೆ, ಈಶ್ವರಪ್ಪ ನಿಲ್ಲಲ್ಲ, ನಿಲ್ಲಲ್ಲ ಎಂದು ಅಪಪ್ರಚಾರ ಮಾಡುವವರಿಗೂ ಸಹ ಇಂದು ಕ್ಷೇತ್ರದ ಜನ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:ಶಿವಮೊಗ್ಗ ಲೋಕಸಭೆಗೆ ಈಶ್ವರಪ್ಪ ನಾಮಪತ್ರ ಸಲ್ಲಿಕೆ: ಎದುರಾಳಿಗಳಿಗೆ ತಿರುಗೇಟು - Eshwarappa Nomination