ETV Bharat / state

ಎಐ ಬಗ್ಗೆ ನೋಡುತ್ತಿರುವುದೆಲ್ಲವೂ ಸತ್ಯವಲ್ಲ; ಎಐ ಫೌಂಡೇಷನ್‌ ಮಾಡೆಲ್‌ ಸೃಷ್ಟಿಸಲು ಭಾರತ ಸಶಕ್ತ: ಮನೀಶ್ ಗುಪ್ತಾ

ಭಾರತದಲ್ಲಿ ಎಂದಿಗೂ ಫೌಂಡೇಷನ್‌ ಲೆವೆಲ್‌ ಎಐಗಳನ್ನು ರೂಪಿಸಲು ಸಾಧ್ಯವಿಲ್ಲ ಎಂದು ಗೂಗಲ್‌ ಇಂಡಿಯಾ ರಿಸರ್ಚ್‌ ತಂಡದ ಮುಖ್ಯಸ್ಥ ಮನೀಶ್‌ ಗುಪ್ತಾ ಹೇಳಿದರು.

BTS 2024
'ಎಐ: ವಾಸ್ತವ ವರ್ಸಸ್‌ ಉತ್ಪ್ರೇಕ್ಷೆ' ಚರ್ಚಾಗೋಷ್ಠಿ (ETV Bharat)
author img

By ETV Bharat Karnataka Team

Published : 2 hours ago

ಬೆಂಗಳೂರು: ''ಭಾರತ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ತನ್ನದೇ ಆದ ಫೌಂಡೇಷನ್‌ ಮಾಡೆಲ್‌ ನಿರ್ಮಿಸಲು ಸಾಧ್ಯವಿಲ್ಲ ಎನ್ನುವ ನಂದನ್‌ ನಿಲೇಕಣಿ ಅವರ ವಿಚಾರ ಸಂಪೂರ್ಣ ತಪ್ಪು'' ಎಂದು ಗೂಗಲ್‌ ಇಂಡಿಯಾ ರಿಸರ್ಚ್‌ ತಂಡದ ಮುಖ್ಯಸ್ಥ ಮನೀಶ್‌ ಗುಪ್ತಾ ತಿಳಿಸಿದರು.

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಮೊದಲ ದಿನ ಆಯೋಜಿಸಿದ್ದ 'ಎಐ: ವಾಸ್ತವ ವರ್ಸಸ್‌ ಉತ್ಪ್ರೇಕ್ಷೆ' ಚರ್ಚಾಗೋಷ್ಠಿಯಲ್ಲಿ ಮಾತನಾಡಿ, ''ಸದ್ಯದ ಮಟ್ಟಿಗೆ ಎಐ ಕುರಿತು ನಾವು ನೋಡುತ್ತಿರುವುದೆಲ್ಲವೂ ಸತ್ಯವಲ್ಲ. ಅದರಲ್ಲಿ ಸಾಕಷ್ಟು ಊಹಾಪೋಹ, ತಪ್ಪು ಕಲ್ಪನೆ ಹಾಗೂ ಉತ್ಪ್ರೇಕ್ಷೆ ಅಡಗಿದೆ. ಆದರೆ, ಮುಂದಿನ ದಿನಗಳಲ್ಲಿ ಇವೆಲ್ಲವೂ ನಿಜವಾಗುವುದು ಖಚಿತ'' ಎಂದರು.

ಗೂಗಲ್‌ ಇಂಡಿಯಾ ರಿಸರ್ಚ್‌ ತಂಡ ವಿಶ್ವದಲ್ಲೇ ಅತ್ಯುತ್ತಮ: ''ಎಐ ಅಭಿವೃದ್ಧಿ ವಿಚಾರದಲ್ಲಿ ಭಾರತದ ಸಾಮರ್ಥ್ಯದ ಬಗ್ಗೆ ಸಾಕಷ್ಟು ಜನರಿಗೆ ಅನುಮಾನಗಳಿವೆ. ನಂದನ್‌ ನಿಲೇಕಣಿ ಅವರು ಭಾರತದಲ್ಲಿ ಎಐ ಕುರಿತು ಮಾತನಾಡುತ್ತಾ, ಭಾರತದಲ್ಲಿ ಎಂದಿಗೂ ಫೌಂಡೇಷನ್‌ ಲೆವೆಲ್‌ ಎಐಗಳನ್ನು ರೂಪಿಸಲು ಸಾಧ್ಯವಿಲ್ಲ. ನಾವು ಈಗಾಗಲೇ ರೂಪುಗೊಂಡಿರುವ ಫೌಂಡೇಷನಲ್‌ ಮಾಡೆಲ್‌ಗಳನ್ನು ಬಳಸಿಕೊಂಡು ಸೀಮಿತ ಬಳಕೆಯ ಮಾದರಿಗಳನ್ನು ಸೃಷ್ಟಿಸುವ ಕಡೆಗೆ ಗಮನ ಹರಿಸಬೇಕಿದೆ ಎಂದಿದ್ದಾರೆ. ಇದನ್ನು ನಾನು ಒಪ್ಪುವುದಿಲ್ಲ. ಗೂಗಲ್‌ನ ಇಂಡಿಯಾ ರಿಸರ್ಚ್‌ ತಂಡ ವಿಶ್ವದಲ್ಲೇ ಅತ್ಯುತ್ತಮವಾಗಿದೆ. ಅಲ್ಲಿ ನಡೆಯುತ್ತಿರುವ ಸಂಶೋಧನೆಗಳು ಅಭೂತಪೂರ್ವವಾಗಿವೆ. ಭಾರತ ತನ್ನದೇ ಸ್ವಂತ ಫೌಂಡೇಷನಲ್‌ ಮಾಡೆಲ್‌ಗಳನ್ನು ಸೃಷ್ಟಿಸಲು ಶಕ್ತವಾಗಿದೆ'' ಎಂದು ಪ್ರತಿಪಾದಿಸಿದರು.

ಜನರ ಉದ್ಯೋಗ ಕಸಿಯಲ್ಲ: ಚರ್ಚೆಯಲ್ಲಿ ಭಾಗವಹಿಸಿದ್ದ ಕೃತಕ ಬುದ್ಧಿಮತ್ತೆಯ ಇನ್ಫೋಸಿಸ್‌ ಕೇಂದ್ರದ ಪ್ರಾಧ್ಯಾಪಕ ಗಣೇಶ್‌ ಬಾಗ್ಲೇರ್‌ ಮಾತನಾಡಿ, ''ಮುಂದಿನ ವರ್ಷಗಳಲ್ಲಿ ಐನ್‌ಸ್ಟೀನ್‌ ಅವರಿಗೆ ಸರಿಸಮನಾದ ಬುದ್ಧಿವಂತಿಕೆಯನ್ನು ಎಐ ಗಳಿಸಲಿದೆ'' ಎಂದು ಭವಿಷ್ಯ ನುಡಿದರು. ''ಅಷ್ಟೇ ಅಲ್ಲದೆ, ಎಐ ತಂತ್ರಜ್ಞಾನದಿಂದ ಅವಕಾಶಗಳು ಸೃಷ್ಟಿಯಾಗುತ್ತವೆಯೇ ಹೊರತು ಅದು ಜನರ ಉದ್ಯೋಗಗಳನ್ನು ಕಸಿಯುವುದಿಲ್ಲ'' ಎಂದರು.

ಓಪನ್‌ ಎಐ ಗ್ಲೋಬಲ್‌ ಅಫೇರ್ಸ್ ವಿಭಾಗದ ಭಾರತದ ಸಾರ್ವಜನಿಕ ನೀತಿ ನಿರೂಪಣೆ ಮತ್ತು ಪಾಲುದಾರಿಕೆಯ ಮುಖ್ಯಸ್ಥ ಪ್ರಗ್ಯಾ ಮಿಶ್ರಾ ಮಾತನಾಡಿ, ''ಮುಂದಿನ ದಿನಗಳಲ್ಲಿ ಭಾರತದ 2 ಮತ್ತು 3ನೇ ಹಂತದ ನಗರಗಳಲ್ಲಿ ಎಐ ವ್ಯಾಪಕವಾಗಿ ಬೆಳೆಯಲಿದೆ. ಎಐ ಬಳಕೆಯಿಂದ ನಮ್ಮ ಕೆಲಸಗಳಲ್ಲಿ ಶೇ.30ರಷ್ಟು ಉತ್ಪಾದಕತೆ ಹೆಚ್ಚಲಿದೆ'' ಎಂದು ತಿಳಿಸಿದರು.

ಇದನ್ನೂ ಓದಿ: ಗ್ರಾಮೀಣ ಪ್ರದೇಶದಲ್ಲಿ ಟೆಲಿಮೆಡಿಸಿನ್, ಟೆಲಿ - ಐಸಿಯುಗಳತ್ತ ಚಿತ್ತ: ಸಚಿವ ದಿನೇಶ್ ಗುಂಡೂರಾವ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.