ಕರ್ನಾಟಕ

karnataka

ETV Bharat / state

ಸ್ನೇಹಮಯಿ ಕೃಷ್ಣರಿಗೆ ನಾನು ಯಾವುದೇ ಕರೆ ಮಾಡಿಲ್ಲ: ಬಿಜೆಪಿ ಮುಖಂಡ ಕೆ.ಹರ್ಷ - MUDA SCAM

ಮುಡಾ ದೂರುದಾರ ಸ್ನೇಹಮಯಿ ಕೃಷ್ಣ ಅವರ ಆರೋಪದ ಕುರಿತು ಬಿಜೆಪಿ ಮುಖಂಡ ಕೆ.ಹರ್ಷ ಮಾತನಾಡಿದ್ದಾರೆ.

bjp-leader-k-harsha-spoke-about-snehamayi-krishna
ಬಿಜೆಪಿ ಮುಖಂಡ ಕೆ.ಹರ್ಷ ಸುದ್ದಿಗೋಷ್ಠಿ (ETV Bharat)

By ETV Bharat Karnataka Team

Published : Dec 19, 2024, 10:03 PM IST

ಮೈಸೂರು: ಮುಡಾದ 50:50ರ ಅನುಪಾತದಡಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ ಸಂಬಂಧಿಸಿದ ವಿವಾದ ಕುರಿತಂತೆ ತಾವು ಆಮಿಷವೊಡ್ಡಿರುವುದಾಗಿ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಆರೋಪಿಸಿರುವುದು ಅಚ್ಚರಿ ತರಿಸಿದ್ದು, ಅವರು ನನ್ನ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಬಿಜೆಪಿ ಮುಖಂಡ ಕೆ.ಹರ್ಷ ತಿಳಿಸಿದರು.

ಈ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಸ್ನೇಹಮಯಿ ಕೃಷ್ಣ ಅವರನ್ನು ಸಂಪರ್ಕಿಸಲು ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ. ತಮ್ಮ ಸ್ನೇಹಿತನ ಮೂಲಕ ಭೇಟಿಯಾಗಲು ಅವರ ಮನೆಗೆ ಹೋಗಿದ್ದಾಗ, ಇರಲಿಲ್ಲ. ಸ್ನೇಹಮಯಿ ಕೃಷ್ಣರ ಮಗನೊಂದಿಗೆ ಮಾತನಾಡಿ ಬಂದೆ ಎಂದು ಹೇಳಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬವಾಗಿರುವುದರಿಂದಾಗಿ ಜನಪ್ರತಿನಿಧಿಗಳಿಲ್ಲದೇ ಅಭಿವೃದ್ಧಿ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಹೋರಾಟ ನಡೆಸಬೇಕೆಂದು ಮನವಿ ಮಾಡುವುದು ನನ್ನ ಉದ್ದೇಶವಾಗಿತ್ತು. ಆದರೆ ಸ್ನೇಹಮಯಿ ಕೃಷ್ಣ ಮನೆಯಲ್ಲಿರಲಿಲ್ಲ. ಹೀಗಾಗಿ ಅವರ ಪುತ್ರನೊಡನೆ ಮಾತನಾಡಿ, ಸ್ನೇಹಮಯಿ ಕೃಷ್ಣ ಅವರ ಹೋರಾಟಕ್ಕೆ ಮೆಚ್ಚುಗೆ ಸೂಚಿಸಿದೆ, ನಡೆದಿದ್ದು ಇಷ್ಟೇ ಎಂದು ತಿಳಿಸಿದರು.

ನಾನು ವಾಸ್ತವವಾಗಿ ಸ್ನೇಹಮಯಿ ಕೃಷ್ಣರನ್ನು ಭೇಟಿಯಾಗಿಯೇ ಇಲ್ಲ. ಹೀಗಿದ್ದರೂ ಅವರು ಈ ರೀತಿ ಆರೋಪ ಮಾಡಿರುವುದು ಅಚ್ಚರಿ ತಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿಯ ನಿವೇಶನ ವಿಷಯಕ್ಕೂ, ಬಿಜೆಪಿ ಮುಖಂಡನಾದ ನನಗೂ ಎಲ್ಲಿಯ ಸಂಬಂಧ?. ನಾನು ಅವರಿಗೆ ಎಂದಿಗೂ ಕರೆ ಮಾಡಿಲ್ಲ. ಬೇಕಾದರೆ ಕಾಲ್ ಲಿಸ್ಟ್ ತೆಗೆದುಕೊಂಡು ನೋಡಬಹುದು ಎಂದರು.

ಇದನ್ನೂ ಓದಿ:ಮುಡಾ ಪ್ರಕರಣದಿಂದ ಹಿಂದೆ ಸರಿಯುವಂತೆ ಆಮಿಷ ಆರೋಪ: ಲೋಕಾಗೆ ಸ್ನೇಹಮಯಿ ಕೃಷ್ಣ ದೂರು, ಹೋರಾಟ ನಿಲ್ಲಸಬೇಡಿ ಎಂದ ವಿಶ್ವನಾಥ್ - SNEHAMAYI KRISHNA

ABOUT THE AUTHOR

...view details