ಬೆಂಗಳೂರು : ಬೈಕ್ ಸವಾರನ ಮೇಲೆ ಬಿಎಂಟಿಸಿ ಬಸ್ ಹರಿದು ಸ್ಥಳದಲ್ಲಿ ಸಾವನ್ನಪ್ಪಿರುವ ದುರಂತ ಘಟನೆ ಯಶವಂತಪುರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ವಿದ್ಯಾರಣ್ಯಪುರ ತಿಂಡ್ಲು ನಿವಾಸಿ ಈಶ್ವರ್ (43) ಮೃತ ದುದೈರ್ವಿ. ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಜೀವನಕ್ಕಾಗಿ ಅಕ್ಕಸಾಲಿಗ ವೃತ್ತಿ ಮಾಡುತ್ತಿದ್ದರು. ಇಂದು ಮಧ್ಯಾಹ್ನ ಮನೆಯಿಂದ ಅವೆನ್ಯೂ ರಸ್ತೆಗೆ ಕೆಲಸ ನಿಮಿತ್ತ ಬೈಕ್ ನಲ್ಲಿ ಟಾಟಾ ಇನ್ಸ್ಟಿಟ್ಯೂಟ್ ಬಳಿ ಬರುವಾಗ ದುರಂತ ಸಂಭವಿಸಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಟಾಟಾ ಇನ್ಸ್ಟಿಟ್ಯೂಟ್ ಬಳಿ ಬರುವಾಗ ಬೈಕ್ಗೆ ಕಾರು ಟಚ್ ಆದ ಪರಿಣಾಮ ಎಡಭಾಗದಲ್ಲಿ ಬೈಕ್ ಸವಾರ ಬಿದ್ದಿದ್ದಾರೆ. ಈ ವೇಳೆ ಯಶವಂತಪುರದಿಂದ ಯಲಹಂಕಕ್ಕೆ ಹೋಗುತ್ತಿದ್ದ ಬಿಎಂಟಿಸಿ ಬಸ್ ಹಿಂಬದಿ ಚಕ್ರ ತಲೆ ಮೇಲೆ ಹರಿದ ಪರಿಣಾಮ ತಲೆಯ ಅರ್ಧ ಭಾಗ ಹೊರಬಂದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ಧಾರೆ.