ಕರ್ನಾಟಕ

karnataka

ETV Bharat / state

ಶಿಗ್ಗಾವಿ ಉಪಚುನಾವಣೆ ; ಭರತ್ ಬೊಮ್ಮಾಯಿ ಪರ ತಾಯಿ ಚೆನ್ನಮ್ಮ ಮತಯಾಚನೆ

ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ತಾಯಿ ಚೆನ್ನಮ್ಮ ಬೊಮ್ಮಾಯಿ ಮತಯಾಚನೆ ಪ್ರಾರಂಭಿಸಿದ್ದಾರೆ.

channamma Bommai
ಭರತ್ ಬೊಮ್ಮಾಯಿ ತಾಯಿ ಚೆನ್ನಮ್ಮ ಬೊಮ್ಮಾಯಿ (ETV Bharat)

By ETV Bharat Karnataka Team

Published : 5 hours ago

ಹಾವೇರಿ : ಜಿಲ್ಲೆ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ತಾಯಿ ಚೆನ್ನಮ್ಮ ಬೊಮ್ಮಾಯಿ ಮತಯಾಚನೆ ಆರಂಭಿಸಿದ್ದಾರೆ.

ಶಿಗ್ಗಾವಿ ತಾಲೂಕಿನ ಹನುಮರಹಳ್ಳಿ, ಚಿಕ್ಕನೆಲ್ಲೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಚೆನ್ನಮ್ಮ ಪ್ರಚಾರ ನಡೆಸಿದರು. ವಿಶೇಷವಾಗಿ ಮಹಿಳಾ ಮತದಾರರ ಬಳಿ ಮತಯಾಚನೆ ಮಾಡಿದ ಚೆನ್ನಮ್ಮ ಭರತ್​ಗೆ ಮತ ಹಾಕುವಂತೆ ಮನವಿ ಮಾಡಿದರು.

ಭರತ್ ಬೊಮ್ಮಾಯಿ ತಾಯಿ ಚೆನ್ನಮ್ಮ ಬೊಮ್ಮಾಯಿ ಮಾತನಾಡಿದರು (ETV Bharat)

ತಂದೆಯಂತೆ ಮಗ ಕ್ಷೇತ್ರದ ಅಭಿವೃದ್ಧಿಗೆ ಸದಾ ಶ್ರಮಿಸಲಿದ್ದಾನೆ. ಯುವಕರ ಪರವಾಗಿ ದುಡಿಯುತ್ತಾನೆ ಎಂದು ತಾಯಿ ಚೆನ್ನಮ್ಮ ಮತಯಾಚನೆ ವೇಳೆ ವಿಶ್ವಾಸ ವ್ಯಕ್ತಪಡಿಸಿದರು. ಶಿಗ್ಗಾವಿ ಕ್ಷೇತ್ರದ ನಿರುದ್ಯೋಗ, ಮಹಿಳೆಯರ ಬಗ್ಗೆ ಭರತ್​ಗೆ ಹೆಚ್ಚಿನ ಕಾಳಜಿ ಇದೆ. ಇಲ್ಲಿಗೆ ಹಲವು ಕಾರ್ಖಾನೆಗಳನ್ನು ತರುವಲ್ಲಿ ಅವನ ಪಾತ್ರವಿದೆ. ಶಿಗ್ಗಾವಿ ಕ್ಷೇತ್ರದಲ್ಲಿ ಆರೋಗ್ಯ, ಶಿಕ್ಷಣ, ಉದ್ಯೋಗ ಹಾಗೂ ಮೂಲ ಸೌಲಭ್ಯಗಳನ್ನು ನೀಡುವ ಉತ್ಸುಕತೆ ಅವನಲ್ಲಿದೆ. ಕ್ಷೇತ್ರವನ್ನ ಅಭಿವೃದ್ಧಿಪಡಿಸುವ ಬಗ್ಗೆ ತನ್ನದೇ ಆದ ವಿಷನ್ಅನ್ನು ಭರತ್​ ಇಟ್ಟುಕೊಂಡಿದ್ದಾನೆ ಎಂದು ಚೆನ್ನಮ್ಮ ತಿಳಿಸಿದರು.

ಇಷ್ಟು ದಿನ ಪತಿ ಬೊಮ್ಮಾಯಿ ಪರ ಮತಯಾಚನೆ ಮಾಡುತ್ತಿದ್ದೆ. ಈಗ ಭರತ್ ಬೊಮ್ಮಾಯಿಗೆ ಮತ ಕೇಳುತ್ತಿದ್ದೇನೆ. ಅವನಿಗೆ‌ ಆಶೀರ್ವಾದ ಮಾಡಿ ಎಂದು ಕೋರಿದರು. ಈ ವೇಳೆ ಚೆನ್ನಮ್ಮಗೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷೆ ಶೋಭಾ ನಿಸ್ಸಿಮಗೌಡ್ರ ಸೇರಿದಂತೆ ಪಕ್ಷದ ಮಹಿಳಾ ಕಾರ್ಯಕರ್ತರು ಸಾಥ್ ನೀಡಿದರು.

ಇದನ್ನೂ ಓದಿ :ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ತಾತ್ಕಾಲಿಕ: ಭರತ್ ಬೊಮ್ಮಾಯಿ

ABOUT THE AUTHOR

...view details