ಕರ್ನಾಟಕ

karnataka

ETV Bharat / state

ದಯವಿಟ್ಟು ಗಮನಿಸಿ: ವಿದ್ಯುತ್‌ ಕಂಬಗಳ ಮೇಲಿನ ಅನಧಿಕೃತ ಕೇಬಲ್​ಗಳ ತೆರವಿಗೆ ಬೆಸ್ಕಾಂ ಅಂತಿಮ ಗಡುವು - Bescom

ಜು.8ರ ಒಳಗೆ ಬೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್‌ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಎಲ್ಲ ಒಎಫ್‌ಸಿ ಕೇಬಲ್‌, ಡೇಟಾ ಕೇಬಲ್‌ ಹಾಗೂ ಡಿಶ್ ಕೇಬಲ್​ಗಳನ್ನು ತೆರವುಗೊಳಿಸಲು ಇಂಟರ್‌ ನೆಟ್‌ ಸೇವಾ ಕಂಪನಿಗಳು, ಟಿವಿ ಕೇಬಲ್‌ ಆಪರೇಟರ್​ಗಳಿಗೆ ಬೆಸ್ಕಾಂ ಅಂತಿಮ ಗಡುವು ನೀಡಿದೆ.

ಬೆಸ್ಕಾಂ
ಬೆಸ್ಕಾಂ (ETV Bharat)

By ETV Bharat Karnataka Team

Published : Jul 6, 2024, 5:29 PM IST

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್‌ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಎಲ್ಲ ಒಎಫ್‌ಸಿ ಕೇಬಲ್‌, ಡೇಟಾ ಕೇಬಲ್‌ ಹಾಗೂ ಡಿಶ್ ಕೇಬಲ್​ಗಳನ್ನು ಜುಲೈ 8 ರ (ಸೋಮವಾರ) ಒಳಗೆ ತೆರವುಗೊಳಿಸಲು ಸಂಬಂಧಿಸಿದ ಇಂಟರ್‌ ನೆಟ್‌ ಸೇವಾ ಕಂಪನಿಗಳು, ಟಿವಿ ಕೇಬಲ್‌ ಆಪರೇಟರ್​ಗಳಿಗೆ ಬೆಸ್ಕಾಂ ಅಂತಿಮ ಗಡುವು ನೀಡಿದೆ.

ವಿದ್ಯುತ್‌ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಒಎಫ್​ಸಿ, ಕೇಬಲ್‌, ಡೇಟಾ ಕೇಬಲ್‌ ಹಾಗೂ ಡಿಶ್‌ ಕೇಬಲ್‌ ಗಳನ್ನು ತೆರವುಗೊಳಿಸುವ ಸಂಬಂಧ ಬೆಸ್ಕಾಂ 2023ರ ಆಗಸ್ಟ್‌ ತಿಂಗಳಲ್ಲಿ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಅನಧಿಕೃತ ಡೇಟಾ ಕೇಬಲ್‌, ಒಎಫ್‌ಸಿ ಕೇಬಲ್‌ ಹಾಗೂ ಡಿಶ್‌ ಕೇಬಲ್​ಗಳನ್ನು ತೆರವುಗೊಳಿಸಲು ಒಂದು ವಾರಗಳ ಗಡುವು ವಿಧಿಸಿತ್ತು. ಇದರ ಹೊರತಾಗಿಯೂ ಅನಧಿಕೃತ ಕೇಬಲ್‌ ಗಳನ್ನು ವಿದ್ಯುತ್‌ ಕಂಬಗಳ ಮೇಲೆ ಡಿಶ್‌ ಕೇಬಲ್‌ ಹಾಗೂ ಡೇಟಾ ಕೇಬಲ್​ಗಳನ್ನು ಅಳವಡಿಸಲಾಗುತ್ತಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಸ್ಕಾಂ ವಿದ್ಯುತ್‌ ಕಂಬಗಳಲ್ಲಿ ಹಾಕಿರುವ ಒಎಫ್‌ಸಿ, ಇಂಟರ್‌ ನೆಟ್‌ ಡೇಟಾ ಕೇಬಲ್‌ ಹಾಗೂ ಡಿಶ್‌ ಕೇಬಲ್​ಗಳನ್ನು ಸೋಮವಾರದೊಳಗೆ ಸಂಬಂಧಪಟ್ಟ ಇಂಟರ್‌ ನೆಟ್‌ ಕಂಪನಿಗಳು ಹಾಗೂ ಡಿಶ್‌ ಕೇಬಲ್‌ ಅಪರೇಟರ್​ಗಳು ತೆರವುಗೊಳಿಸಬೇಕು. ತಪ್ಪಿದ್ದಲ್ಲಿ ಬೆಸ್ಕಾಂ ಅವುಗಳನ್ನು ಯಾವುದೇ ಮುನ್ಸೂಚನೆ ನೀಡದೇ ತೆರವುಗೊಳಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯ ಕ್ರಮಕೈಗೊಳ್ಳಲಿದೆ ಎಂದು ಬೆಸ್ಕಾಂ ಎಚ್ಚರಿಸಿದೆ.

ಅನಧಿಕೃತ ಕೇಬಲ್‌ ಗಳಿಂದ ವಿದ್ಯುತ್‌ ಅವಘಡಗಳು ಸಂಭವಿಸಿದಲ್ಲಿ ಸಂಬಂಧಿಸಿದ ಒಎಫ್‌ಸಿ, ಡೇಟಾ ಕೇಬಲ್‌, ಡಿಶ್‌ ಕೇಬಲ್‌ ಆಪರೇಟರ್‌ಗಳು ಅಥವಾ ಇನ್ನಿತರ ವ್ಯಕ್ತಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಿದೆ.

ಇದನ್ನೂ ಓದಿ:ಹೊಸ ಕಾನೂನುಗಳ ಬಗ್ಗೆ ಮಾಹಿತಿ ನೀಡುವ 'ಸಂಚಯ' ಮೊಬೈಲ್ ಆ್ಯಪ್ ಬಿಡುಗಡೆ - Sanchaya Mobile App

ABOUT THE AUTHOR

...view details