ಬೆಂಗಳೂರು:ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಕಳೆದ ಒಂದಿಷ್ಟು ದಿನಗಳಿಂದ ನಿರಂತರವಾಗಿ ಅಗ್ನಿ ಅವಘಡಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ವಿವಿ ಆಡಳಿತ ಮಂಡಳಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ.
ಜ್ಞಾನ ಭಾರತಿ ಆವರಣವು ಒಟ್ಟು 1112 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿದ್ದು, 300 ಎಕರೆಯಷ್ಟು ಜೈವಿಕ ಉದ್ಯಾನವನ, ದಟ್ಟ ಅರಣ್ಯ ಪ್ರದೇಶವನ್ನು ಹೊಂದಿದೆ. ಬೇಸಿಗೆಯ ತಾಪಮಾನ ಹೆಚ್ಚಾಗುತ್ತಿದ್ದಂತೆ ಆಕಸ್ಮಿಕ ಅಗ್ನಿ ಅವಘಡ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ವಿಶ್ವವಿದ್ಯಾಲಯ ಆಡಳಿತ ಮಂಡಳಿ, ಅಗ್ನಿಶಾಮಕ ದಳ, ಗೃಹ ರಕ್ಷಕ ದಳದ ಜೊತೆ ಸಮನ್ವಯ ಸಾಧಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಅಗ್ನಿಶಾಮಕ ದಳ ಮತ್ತು ಗೃಹ ರಕ್ಷಕ ದಳದಿಂದ ಗಸ್ತು ತಿರುಗುವುದು, ಆವರಣದಲ್ಲಿ ವಾಟರ್ ಪಾಯಿಂಟ್ಗಳನ್ನು ಹೆಚ್ಚಿಸುವುದು, ನೀರಿನ ಹೊಂಡಗಳ ಸಮರ್ಪಕ ನಿರ್ವಹಣೆ ಮಾಡುವುದು, ಅಗ್ನಿ ಶಾಮಕದಳದ ಸ್ಥಳಕ್ಕೆ ತಲುಪುವಂತೆ ಫೈರ್ ಟ್ರಾಕ್, ಫೈರ್ ಲೈನ್ ನಿರ್ಮಾಣ ಮಾಡುವುದು, ಸಾರ್ವಜನಿಕರು, ವಿದ್ಯಾರ್ಥಿಗಳು ಸ್ವಯಂ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು., ಕ್ಯಾಂಪಸ್‌ನಲ್ಲಿ ಸತತ ತಪಾಸಣೆ ನಡೆಸುವುದು ಮತ್ತು ಸಮರ್ಪಕ ನಿರ್ವಹಣೆ ಮಾಡಲು ವಿವಿ ಮುಂದಾಗಿದೆ.