ಕರ್ನಾಟಕ

karnataka

ETV Bharat / state

ಬೆಳಗಾವಿ: ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 49 ಲಕ್ಷ ರೂ ಮೌಲ್ಯದ ಅಕ್ರಮ ಮದ್ಯ ಜಪ್ತಿ - Illegal Liquor Seized - ILLEGAL LIQUOR SEIZED

ಗೋವಾದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ಬೆಳಗಾವಿ ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಅಕ್ರಮ ಮದ್ಯ ಜಪ್ತಿ
ಅಕ್ರಮ ಮದ್ಯ ಜಪ್ತಿ (ETV Bharat)

By ETV Bharat Karnataka Team

Published : Oct 1, 2024, 5:43 PM IST

ಬೆಳಗಾವಿ: ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಭರ್ಜರಿ ಕಾರ್ಯಾಚರಣೆ ನಡೆಸಿ ಅಪಾರ ಪ್ರಮಾಣದ ಅಕ್ರಮ ಮದ್ಯ ಜಪ್ತಿ ಮಾಡಿದ್ದಾರೆ. ಸೋಮವಾರ ತಡರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಒಂದು ಕಂಟೇನರ್ ಹಾಗು 49 ಲಕ್ಷ ರೂ ಮೌಲ್ಯದ ಮದ್ಯ ವಶಕ್ಕೆ ಪಡೆದಿದ್ದಾರೆ.

ಖತರ್ನಾಕ್ ಐಡಿಯಾ!: ಕಂಟೇನರ್ ವಾಹನದಲ್ಲಿ ಡ್ರೈವರ್ ಹಿಂಬದಿಯಲ್ಲಿ ಕಂಪಾರ್ಟ್​ಮೆಂಟ್​ ಮಾಡಿ ಅದರಲ್ಲಿ ಮದ್ಯದ ಬಾಕ್ಸ್​ಗಳನ್ನಿಟ್ಟು ಸಾಗಿಸುತ್ತಿದ್ದರು. ಕಂಪಾರ್ಟ್‌ಮೆಂಟ್ ಹೊರಭಾಗದಲ್ಲಿ ಡಸ್ಟ್​ಬಿನ್ ಬಾಕ್ಸ್​ಗಳನ್ನಿಟ್ಟು ಸಂಶಯ ಬರದಂತೆ ಪ್ಲಾನ್ ಮಾಡಿದ್ದರು. ಕಣಕುಂಬಿ ಚೆಕ್‌ಪೋಸ್ಟ್​ನಲ್ಲಿ ತಪಾಸಣೆ ವೇಳೆ ಚಾಲಕ ಓಡಿಹೋಗಿದ್ದಾನೆ. ಇದರಿಂದ ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಅಕ್ರಮ ಮದ್ಯ ಜಪ್ತಿ (ETV Bharat)

"ಗೋವಾದಿಂದ ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಮದ್ಯ ಸಾಗಿಸಲಾಗುತ್ತಿತ್ತು. 255 ಬಾಕ್ಸ್​ಗಳಲ್ಲಿ 720 ಎಂಎಲ್​ನ 3,060 ಬಾಟಲ್​ಗಳು ಪತ್ತೆಯಾಗಿದ್ದು, ಇದರ ಮೌಲ್ಯ 49 ಲಕ್ಷ ರೂ. ಆಗಿದೆ. ಮತ್ತು 35 ಲಕ್ಷ ರೂ. ಮೌಲ್ಯದ ಕಂಟೇನರ್ ವಾಹನವನ್ನೂ ಜಪ್ತಿ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ" ಎಂದು ಅಬಕಾರಿ ಇಲಾಖೆಯ ಅಪರ ಆಯುಕ್ತ ಡಾ. ವೈ.ಮಂಜುನಾಥ ತಿಳಿಸಿದ್ದಾರೆ.

"ಇದೊಂದು ತಾಂತ್ರಿಕ ಪತ್ತೆದಾರಿ ಪ್ರಕರಣ. ನಮಗೆ ಯಾವುದೇ ಮಾಹಿತಿ ಇರಲಿಲ್ಲ. ನಮ್ಮ ಅಬಕಾರಿ ಸಿಬ್ಬಂದಿ ಮತ್ತು ಅಧಿಕಾರಿಗಳು ಅನುಮಾನದಿಂದ ಪರಿಶೀಲಿಸಿದಾಗ ಆರೋಪಿಗಳ ಕೃತ್ಯ ಬಯಲಾಗಿದೆ. ಕಂಟೇನರ್​ನಲ್ಲಿ ಖಾಲಿ ಪ್ಲಾಸ್ಟಿಕ್ ಡಬ್ಬಿಗಳ ನಕಲಿ ಜಿಎಸ್​ಟಿ ಬಿಲ್ ತಂದಿದ್ದಾರೆ. ಮಹಾರಾಷ್ಟ್ರದ ಥಾಣೆಯ ಜಸ್ಟ್ ಗ್ರೀನ್ ಬ್ರಿಸ್ಲರಿ ಬ್ರ್ಯಾಂಡ್​ನ ನಕಲಿ ತಯಾರಿಸಿ ಕರ್ನಾಟಕ ಮಾರ್ಗವಾಗಿ ಗೋವಾಗೆ ಸಾಗಿಸಲಾಗುತ್ತಿತ್ತು" ಎಂದು ಅವರು ಮಾಹಿತಿ ನೀಡಿದ್ದಾರೆ.

ಅಬಕಾರಿ ಇಲಾಖೆ ಸಿಬ್ಬಂದಿ ಲಾರಿಯಿಂದ ಮದ್ಯದ ಬಾಟಲಿಗಳನ್ನು ಕೆಳಗಿಳಿಸುವುದನ್ನು ನೋಡಲು ಇಲಾಖೆ ಕಚೇರಿ ಬಳಿ ಜನ ಕಿಕ್ಕಿರಿದು ಸೇರಿದ್ದರು‌.

ಇದನ್ನೂ ಓದಿ:ಆದಿ ಉಡುಪಿ ಎಪಿಎಂಸಿಯಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ ಆರೋಪ; 12 ಟನ್ ಬೆಳ್ಳುಳ್ಳಿ ವಶಕ್ಕೆ - Official Raid Adi Udupi APMC

ABOUT THE AUTHOR

...view details