ಕರ್ನಾಟಕ

karnataka

ETV Bharat / state

ನಗರ ವ್ಯಾಪ್ತಿಯಲ್ಲಿ 474 ಕೋಟಿ ರೂಪಾಯಿ ಆಸ್ತಿ ತೆರಿಗೆ ಬಾಕಿ: ಬಿಬಿಎಂಪಿ - BBMP Property Tax

2,64,228 ಆಸ್ತಿ ತೆರಿಗೆದಾರರು 474 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವುದಾಗಿ ಬಿಬಿಎಂಪಿ ಪ್ರಕಟಣೆ ಹೊರಡಿಸಿದೆ.

BBMP
ಬಿಬಿಎಂಪಿ (IANS)

By ETV Bharat Karnataka Team

Published : Sep 3, 2024, 8:17 AM IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 474 ಕೋಟಿ ರೂಪಾಯಿ ಆಸ್ತಿ ತೆರಿಗೆ ಬಾಕಿ ಇದ್ದು, 2,64,228 ಆಸ್ತಿ ತೆರಿಗೆದಾರರು ತೆರಿಗೆ ಪಾವತಿ ಮಾಡಬೇಕಾಗಿದೆ ಎಂದು ಬಿಬಿಎಂಪಿ ಸೋಮವಾರ ಅಂಕಿ-ಅಂಶಗಳ ಸಮೇತ ಪ್ರಕಟಣೆ ಹೊರಡಿಸಿದೆ.

2024ರ ಏಪ್ರಿಲ್​ಗೆ ಸುಮಾರು 3,95,253 ಆಸ್ತಿ ತೆರಿಗೆದಾರರು 738 ಕೋಟಿ ರೂಪಾಯಿಗಳ ತೆರಿಗೆ ಪಾವತಿಸಬೇಕಾಗಿತ್ತು. ಇದರಲ್ಲಿ ಇದುವರೆಗೂ 1,31,024 ಆಸ್ತಿ ತೆರಿಗೆದಾರರು 273 ಕೋಟಿ ರೂಪಾಯಿಗಳನ್ನು ಪಾವತಿ ಮಾಡಿದ್ದಾರೆ. ಹಿಂದಿನ ಒಂದು ವಾರದಲ್ಲಿ 26,862 ಆಸ್ತಿ ತೆರಿಗೆದಾರರು 26.94 ಕೋಟಿ ರೂಪಾಯಿ ಪಾವತಿ ಮಾಡಿದ್ದಾರೆ ಎಂದು ಪಾಲಿಕೆ ತಿಳಿಸಿದೆ.

ದಾಸರಹಳ್ಳಿ ವಲಯದಲ್ಲಿ 16.92 ಕೋಟಿ ರೂಪಾಯಿ, ಪಶ್ಚಿಮ ವಲಯದಲ್ಲಿ 49.39 ಕೋಟಿ ರೂಪಾಯಿ, ಆರ್‌.ಆರ್.ನಗರದಲ್ಲಿ 38.52 ಕೋಟಿ ರೂಪಾಯಿ, ದಕ್ಷಿಣ ವಲಯದಲ್ಲಿ 74.72 ಕೋಟಿ ರೂಪಾಯಿ, ಬೊಮ್ಮನಹಳ್ಳಿ ವಲಯದಲ್ಲಿ 62.94 ಕೋಟಿ ರೂಪಾಯಿ, ಮಹದೇವಪುರ ವಲಯದಲ್ಲಿ 116.03 ಕೋಟಿ ರೂಪಾಯಿ, ಯಲಹಂಕ ವಲಯದಲ್ಲಿ 38.43 ಕೋಟಿ ರೂಪಾಯಿ ಹಾಗೂ ಪೂರ್ವ ವಲಯದಲ್ಲಿ 69.89 ಕೋಟಿ ರೂಪಾಯಿ ಆಸ್ತಿ ತೆರಿಗೆ ಪಾವತಿ ಬಾಕಿ ಇದೆ ಎಂದು ಮಾಹಿತಿ ನೀಡಿದೆ.

ಈ ವರ್ಷದಲ್ಲಿ ಆಸ್ತಿ ತೆರಿಗೆ ಪಾವತಿ ಮಾಡದ 4,600 ನಾನ್-ರೆಸಿಡೆಂಟ್‌ಗಳಿಗೆ ಬೀಗ ಹಾಕಲಾಗಿದೆ. ಈ ಪೈಕಿ ದಾಸರಹಳ್ಳಿ ವಲಯದಲ್ಲಿ 116, ಪಶ್ಚಿಮ ವಲಯದಲ್ಲಿ 1,034, ಆರ್‌.ಆರ್.ನಗರದಲ್ಲಿ 400, ದಕ್ಷಿಣ ವಲಯದಲ್ಲಿ 470, ಬೊಮ್ಮನಹಳ್ಳಿ ವಲಯದಲ್ಲಿ 303, ಮಹದೇವಪುರ ವಲಯದಲ್ಲಿ 480, ಯಲಹಂಕ ವಲಯದಲ್ಲಿ 416 ಹಾಗೂ ಪೂರ್ವ ವಲಯದಲ್ಲಿ 1,317 ಆಸ್ತಿಗಳಿಗೆ ಬೀಗ ಹಾಕಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

ಇದನ್ನೂ ಓದಿ:ಬೆಂಗಳೂರು: ಆಸ್ತಿ ತೆರಿಗೆ 'ಒಟಿಎಸ್' ಪಾವತಿಗೆ ಇನ್ನೂ ಒಂದು ತಿಂಗಳು ಕಾಲಾವಕಾಶ - Property Tax OTS

ABOUT THE AUTHOR

...view details