ಬೆಂಗಳೂರು: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ನೀಡಿ ಆದಾಯ ಸಂಗ್ರಹ ಹೆಚ್ಚಿಸಿಕೊಳ್ಳಲು ಮುಂದಾಗಿರುವ ಬಿಬಿಎಂಪಿ ಇದೀಗ ನಮ್ಮ ಮೆಟ್ರೋಗೆ ಬಿಸಿ ಮುಟ್ಟಿಸಿದೆ. ಬಾಕಿ ತೆರಿಗೆ ಪಾವತಿಸುವಂತೆ ನಿಲ್ದಾಣಗಳಲ್ಲಿ ಇರುವ ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಿದೆ.
ನಮ್ಮ ಮೆಟ್ರೋ ಪಾಲಿಕೆಗೆ ಬರೋಬ್ಬರಿ 53.65 ಲಕ್ಷ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಬಾಕಿ ಆಸ್ತಿ ತೆರಿಗೆ ಮೊತ್ತ ಹಾಗೂ ದಂಡ ಸೇರಿದಂತೆ ಒಟ್ಟು 65 ಲಕ್ಷ ರೂಪಾಯಿ ಪಾವತಿಸುವಂತೆ ಪಾಲಿಕೆ ನೋಟಿಸ್ ಜಾರಿ ಮಾಡಿದೆ. ನಮ್ಮ ಮೆಟ್ರೋ ಕಬ್ಬನ್ ಪಾರ್ಕ್ ವಸತಿಯೇತರ ಕಟ್ಟಡಗಳ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಸರಕಾರದ ಆದೇಶದಂತೆ ಪಾಲಿಕೆ ತೆರಿಗೆ ವಸೂಲಿಗೆ ಮುಂದಾಗಿದೆ.